ಲವ್ ಬೈಟ್ (love bite) ಎಂದರೇನು? ಸಾಮಾನ್ಯವಾಗಿ ಎಲ್ಲರಿಗೂ ಈ ಪದದ ಬಗ್ಗೆ ತಿಳಿದಿದೆ. ಪ್ರೀತಿ ಹೆಚ್ಚಾದಾಗ ಲವ್ ಬೈಟ್ ಸಾಮಾನ್ಯವಾಗುತ್ತೆ. ಆದರೆ ಈ ಗುರುತು ಕಾಣಿಸುವ ಹಾಗಿದ್ದರೆ? ಚೆನ್ನಾಗಿರೋದಿಲ್ಲ ಅಲ್ವಾ? ಅದನ್ನು ತೆಗೆದುಹಾಕುವುದು ಸುಲಭವಲ್ಲ. ವಿಶೇಷವಾಗಿ ಗಾಯವು ದೇಹದಲ್ಲಿ ಎಲ್ಲರಿಗೂ ಕಾಣುವಂತಿದ್ದರೆ, ಅದನ್ನು ಹೇಗಾದರೂ ತೆಗೆದುಹಾಕಬೇಕು ಎಂದು ಯೋಚನೆ ಮಾಡುತ್ತೇವೆ. ಹಾಗಿದ್ರೆ ಏನು ಮಾಡಬಹುದು ನೋಡೋಣ.
ಲವ್ ಬೈಟ್ ಕಾಣುವಂತಿದ್ದರೆ, ಈ ಗುರುತನ್ನು ತೆಗೆದುಹಾಕಲು ಅನೇಕ ಉತ್ಪನ್ನಗಳು ಮಾರುಕಟ್ಟೆಗೆ ದೊರೆಯುತ್ತವೆ, ಅದನ್ನು ಬಳಸಿಕೊಂಡು ನೀವು ಈ ಗುರುತನ್ನು ಮತ್ತಷ್ಟು ಲೈಟ್ ಮಾಡಬಹುದು. ಆದರೆ ಕೆಲವು ಮನೆಮದ್ದುಗಳೂ ಇವೆ, ಇದು ಲವ್ ಬೈಟ್ ಗುರುತುಗಳನ್ನು ಹಗುರಗೊಳಿಸಲು ನಿಮಗೆ ಸಹಾಯ ಮಾಡುತ್ತದೆ. ಅವುಗಳ ಬಗ್ಗೆ ತಿಳಿಯೋಣ.
ಬಾಳೆಹಣ್ಣಿನ ಸಿಪ್ಪೆಯ ಬಳಕೆ
ಬಾಳೆಹಣ್ಣಿನ ಸಿಪ್ಪೆಯಲ್ಲಿ (banana peel) ಜೇನುತುಪ್ಪವನ್ನು ಹಚ್ಚಿ ಲವ್ ಬೈಟ್ ಮೇಲೆ ಹಗುರವಾದ ಕೈಗಳಿಂದ ಮಸಾಜ್ ಮಾಡಿದರೆ, ಅದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ. ಇದಲ್ಲದೆ, ಬಾಳೆಹಣ್ಣಿನ ಸಿಪ್ಪೆಯನ್ನು ಬಿಸಿ ಬಾಣಲೆ ಮೇಲೆ ಇರಿಸಿ ಮತ್ತು ಅದನ್ನು ಲವ್ ಬೈಟ್ ಸ್ಥಳದ ಮೇಲೆ ಸ್ವಲ್ಪ ಸಮಯದವರೆಗೆ ಇರಿಸಿ. ಇದು ಲವ್ ಬೈಟ್ ನ್ನು ನಿವಾರಿಸುತ್ತೆ.
ಟೂತ್ ಬ್ರಷ್ ಬಳಸಿ
ಮೃದುವಾದ ಹಲ್ಲುಗಳನ್ನು ಹೊಂದಿರುವ ಟೂತ್ ಬ್ರಷ್ ನ ಒತ್ತಡವೂ ನಿಮ್ಮ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಟೂತ್ ಬ್ರಷ್ ನಲ್ಲಿ ವಿಟಮಿನ್-ಕೆ ಕ್ರೀಮ್ ಹಚ್ಚಿ, ಅದನ್ನು ಲವ್ ಬೈಟ್ ಮೇಲೆ ನಿಧಾನವಾಗಿ ಹಚ್ಚಿ. ಇದನ್ನು ಮಾಡಿದ ನಂತರ ಲವ್ ಬೈಟ್ ಡಲ್ ಆಗುತ್ತೆ. ಆದರೆ ನೀವು ಹೆಚ್ಚು ಪ್ರೆಸ್ ಮಾಡಬಾರದು, ಇಲ್ಲದಿದ್ದರೆ ಚರ್ಮದ ಮೇಲೆ ದದ್ದುಗಳು ಅಥವಾ ಗಾಯಗಳು ಉಂಟಾಗಬಹುದು.
ಆಲ್ಕೋಹಾಲ್ ಬಳಸಿ
4 ರಿಂದ 5 ಹನಿ ಆಲ್ಕೋಹಾಲ್ (alcohol) ತೆಗೆದುಕೊಳ್ಳಿ ಮತ್ತು ಅದನ್ನು ಲವ್ ಬೈಟ್ ಮಾರ್ಕ್ ಮೇಲೆ ಉಜ್ಜಿ. ಇದಕ್ಕಾಗಿ ನೀವು ಹತ್ತಿ ಚೆಂಡುಗಳನ್ನು ಬಳಸಬಹುದು. ಇದನ್ನು ದಿನಕ್ಕೆ 2 ಬಾರಿ ಮಾಡಿ. ತುಂಬಾ ವೇಗವಾಗಿ ಚರ್ಮವನ್ನು ಉಜ್ಜಬೇಡಿ. ಹಾಗೆ ಮಾಡುವುದರಿಂದ ನೀವು ಹೆಚ್ಚು ಪ್ರಯೋಜನ ಪಡೆಯುತ್ತೀರಿ.
ಪಾಲಕ್ ರಸ (Spinach juice)
ಪಾಲಕ್ ರಸದಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ. ವಿಟಮಿನ್-ಕೆ ಚರ್ಮದ ಮೇಲೆ ಯಾವುದೇ ರೀತಿಯ ಕಲೆಗಳನ್ನು ಹಗುರಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಟಮಿನ್-ಕೆ ಹೊಂದಿರುವ ಅನೇಕ ಕ್ರೀಮ್ ಗಳನ್ನು ಸಹ ನೀವು ಮಾರುಕಟ್ಟೆಯಲ್ಲಿ ಕಾಣಬಹುದು. ನೀವು ಅವುಗಳನ್ನು ಸಹ ಬಳಸಬಹುದು.
ಮೇಕಪ್ ಮಾಡಿ (makeup)
ಕನ್ಸೀಲರ್, ಫೌಂಡೇಶನ್ ಮತ್ತು ಕಾಂಪ್ಯಾಕ್ಟ್ ಪೌಡರ್ ಅನ್ನು ಬಳಸುವ ಮೂಲಕ, ನೀವು ಚರ್ಮದ ಮೇಲೆ ಯಾವುದೇ ರೀತಿಯ ಕಲೆಗಳನ್ನು ತೆಗೆದುಹಾಕಬಹುದು. ಆದರೆ ಇದು ಶಾಶ್ವತ ಪರಿಹಾರವಲ್ಲ. ಮೇಕಪ್ ತೆಗೆದುಹಾಕಿದಾಗ ಆ ಕಲೆ ಕಾಣಿಸಿಕೊಳ್ಳುತ್ತದೆ.
ಸೂಚನೆ- ಮೇಲೆ ತಿಳಿಸಿದ ಸಲಹೆಗಳಿಂದ ಲವ್ ಬೈಟ್ ಗುರುತುಗಳನ್ನು ತಕ್ಷಣವೇ ತೆಗೆದುಹಾಕಲಾಗುವುದು ಎನ್ನಲಾಗೋದಿಲ್ಲ. ನಿಮ್ಮ ಚರ್ಮವು ಸೂಕ್ಷ್ಮವಾಗಿದ್ದರೆ ಅಥವಾ ಲವ್ ಬೈಟ್ ನಿಂದ ನಿಮಗೆ ಚರ್ಮದ ಗಾಯ ಅಥವಾ ನೋವು ಉಂಟಾಗಿದ್ದರೆ, ವೈದ್ಯರನ್ನು ಸಂಪರ್ಕಿಸೋದು ಬೆಸ್ಟ್.