ಕೂದಲಿನ ಸಮಸ್ಯೆ ನಿವಾರಿಸಲು ಕಾಫಿ ಹೇರ್ ಮಾಸ್ಕ್ !

First Published Dec 30, 2022, 6:08 PM IST

ಕಾಫಿ ಕುಡಿಯೋದರಿಂದ ದೇಹಕ್ಕೆ ಶಕ್ತಿ ಸಿಗುತ್ತೆ, ಆದರೆ ಇದು ಕೂದಲಿಗೆ ಸಹ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಕೆಫೀನ್ ಕೂದಲಿಗೆ ತುಂಬಾನೇ ಪ್ರಯೋಜನಕಾರಿ . ಕಾಫಿ ಬಳಸುವ ಮೂಲಕ ನೀವು ಕೂದಲನ್ನು ಬಲವಾಗಿ ಮತ್ತು ಹೊಳೆಯುವಂತೆ ಮಾಡಬಹುದು.ಹೇಗೆ ಅನ್ನೋದನ್ನು ನೋಡಿ.

ಜನರು ಹೆಚ್ಚಾಗಿ ಕಾಫಿ ಕುಡಿಯುವ ಮೂಲಕ ದಿನ ಪ್ರಾರಂಭಿಸುತ್ತಾರೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತೆ. ಆದರೆ, ನಿಮಗೆ ತಿಳಿದಿದೆಯೇ, ಕಾಫಿ ಕೂದಲಿಗೆ (coffee hair mask) ತುಂಬಾ ಪ್ರಯೋಜನಕಾರಿ. ಹೌದು, ಇದರಲ್ಲಿರುವ ಕೆಫೀನ್ ಕೂದಲಿನ ಬೆಳವಣಿಗೆಗೆ ತುಂಬಾ ಸಹಾಯಕ. ಇದರಿಂದ ಕೂದಲಿನ ಆರೋಗ್ಯ ಕಾಪಾಡೋದು ಹೇಗೆ? ಯಾವ ರೀತಿ ಅದನ್ನು ಬಳಸಬಹುದು? ನಿಮ್ಮ ಎಲ್ಲಾ ಸಂಶಯಗಳಿಗೆ ಇಲ್ಲಿದೆ ಉತ್ತರ. 

ಮನೆಯಲ್ಲಿ, ನೀವು ನಿಮ್ಮದೇ ಆದ ಕಾಫಿ ಹೇರ್ ಮಾಸ್ಕ್ ತಯಾರಿಸಬಹುದು. ಇದನ್ನು ಬಳಸೋದರಿಂದ, ಕೂದಲು ಬಿಳಿಯಾಗೋದನ್ನು (gray hair) ತಪ್ಪಿಸುತ್ತೆ, ಹಾಗೆಯೇ ಕೂದಲು ಉದ್ದ ಮತ್ತು ದಟ್ಟವಾಗಿರುತ್ತೆ. ಆದ್ದರಿಂದ ಕಾಫಿ ಬಳಸಿಕೊಂಡು ಹೇರ್ ಮಾಸ್ಕ್ ತಯಾರಿಸೋದು ಹೇಗೆ ಎಂದು ತಿಳಿಯೋಣ.

Latest Videos


ಕಾಫಿ ಮತ್ತು ಕೊಬ್ಬರಿ ಎಣ್ಣೆ ಹೇರ್ ಮಾಸ್ಕ್ (coffee and coconut oil hair mask)

ತೆಂಗಿನೆಣ್ಣೆ ಕೂದಲಿಗೆ ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುತ್ತೆ . ಇದು ನೆತ್ತಿಯ ತೇವಾಂಶವನ್ನು ಉಳಿಸಿಕೊಳ್ಳುತ್ತೆ. ಜೊತೆಗೆ ಕೂದಲಿಗೆ ಉತ್ತಮ ಪೋಷಣೆಯನ್ನು ನೀಡುತ್ತದೆ. ಇವೆರಡನ್ನು ಬಳಸೋದು ಕೂದಲಿಗೆ ಉತ್ತಮ ಪರಿಹಾರ ನೀಡುತ್ತದೆ. ಇದನ್ನು ಬಳಸೋದು ಹೇಗೆ ಅನ್ನೋದನ್ನು ನೋಡೋಣ. 

ಸಾಮಗ್ರಿಗಳು

1 ಚಮಚ ಕಾಫಿ ಪುಡಿ, 1 ಚಮಚ ತೆಂಗಿನೆಣ್ಣೆ

ತಯಾರಿಸೋದು ಹೇಗೆ?
- ಕಾಫಿ ಪುಡಿ ಮತ್ತು ಕೊಬ್ಬರಿ ಎಣ್ಣೆಯನ್ನು ಒಂದು ಬೌಲ್ ನಲ್ಲಿ ತೆಗೆದುಕೊಳ್ಳಿ.
- ಈ ಮಿಶ್ರಣವನ್ನು ಚೆನ್ನಾಗಿ ವಿಸ್ಕ್ ಮಾಡಿ.
- ನಂತರ ಇದನ್ನು ಕೂದಲಿಗೆ ಹಚ್ಚಿ, ಸುಮಾರು 30 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.

ಕಾಫಿ ಪುಡಿ ಮತ್ತು ಜೇನುತುಪ್ಪದ ಹೇರ್ ಮಾಸ್ಕ್ (coffee powder and honey hair mask)

ಇದು ಅತ್ಯುತ್ತಮವಾದ ಹೇರ್ ಮಾಸ್ಕ್. ಜೇನುತುಪ್ಪವು ನೆತ್ತಿಯನ್ನು ಪೋಷಿಸುತ್ತೆ. ಇದು ಅನೇಕ ಕೂದಲಿನ ಸಮಸ್ಯೆಗಳಿಂದ ರಕ್ಷಿಸುತ್ತೆ. ಇದನ್ನು ಬಳಸಿಕೊಂಡು ನೀವು ಹೇರ್ ಮಾಸ್ಕ್ ತಯಾರಿಸಿದ್ರೆ, ಕೂದಲಿನ ಸಮಸ್ಯೆ ನಿವಾರಣೆಯಾಗೋದರ ಜೊತೆಗೆ ಕೂದಲು ಶೈನ್ ಕೂಡ ಆಗುತ್ತೆ. 

ಸಾಮಗ್ರಿಗಳು

1 ಟೀಸ್ಪೂನ್ ಕಾಫಿ ಪುಡಿ, 1 ಟೀಸ್ಪೂನ್ ಜೇನುತುಪ್ಪ

ತಯಾರಿಸುವುದು ಹೇಗೆ?
- ಒಂದು ಬೌಲ್ ನಲ್ಲಿ ಒಂದು ಟೀ ಚಮಚ ಕಾಫಿ ಪುಡಿ ತೆಗೆದುಕೊಳ್ಳಿ, ಅದಕ್ಕೆ ಜೇನುತುಪ್ಪವನ್ನು ಸೇರಿಸಿ.
- ಇದರ ಪೇಸ್ಟ್ ತಯಾರಿಸಿ, ಅದನ್ನುಕೂದಲಿಗೆ ಹಚ್ಚಿ.
 15-20 ನಿಮಿಷಗಳ ನಂತರ ಶಾಂಪೂವಿನಿಂದ ತೊಳೆಯಿರಿ.
ಇದು ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಸಹಾಯ ಮಡುತ್ತೆ.

ಹರಳೆಣ್ಣೆ - ಕಾಫಿ ಪುಡಿ (castor oil with coffee powder)

ಹರಳೆಣ್ಣೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹರಳೆಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ಬಳಸಿಕೊಂಡು ಹೇರ್ ಮಾಸ್ಕ್ ತಯಾರಿಸಬಹುದು. ಇದರಿಂದ ಕೂದಲು ಸ್ಟ್ರಾಂಗ್ ಆಗುತ್ತೆ, ಜೊತೆಗೆ ಕೂದಲು ಕಪ್ಪಾಗೋದು ಖಚಿತ. ಅದಕ್ಕಾಗಿ ಏನು ಮಾಡಬೇಕು ನೋಡೋಣ. 

ಸಾಮಗ್ರಿಗಳು

1 ಟೀಸ್ಪೂನ್ ಹರಳೆಣ್ಣೆ, 1 ಟೀಸ್ಪೂನ್ ಕಾಫಿ ಪುಡಿ

ತಯಾರಿಸುವ ವಿಧಾನ
- ಹರಳೆಣ್ಣೆ ಮತ್ತು ಕಾಫಿಯನ್ನು ಬೆರೆಸಿ ಪೇಸ್ಟ್ ತಯಾರಿಸಿ.
ಈಗ ಅದನ್ನು ಕೂದಲಿಗೆ ಹಚ್ಚಿಕೊಳ್ಳಿ.ಸ್ವಲ್ಪ ಸಮಯದ ನಂತ್ರ ಕೂದಲು  ವಾಶ್ ಮಾಡಿ. ಕೂದಲು ಹೇಗೆ ಸಾಫ್ಟ್ ಅಂಡ್ ಶೈನ್ ಆಗುತ್ತೆ ನೀವೇ ನೋಡಿ.  
ಈ ಹೇರ್ ಮಾಸ್ಕ್ ಗಳನ್ನು ನಿಯಮಿತವಾಗಿ ಬಳಕೆ ಮಾಡಿದ್ರೆ ಕೂದಲು ಸುಂದರವಾಗೋದ್ರಲ್ಲಿ ಸಂಶಯವೇ ಇಲ್ಲ. 
 

click me!