ನಾವೆಲ್ಲರೂ ಅಪ್-ಟು-ಡೇಟ್ ಆಗಿ ಕಾಣಲು ಬಯಸುತ್ತೇವೆ ಮತ್ತು ಇದಕ್ಕಾಗಿ, ನಾವು ಪ್ರತಿದಿನ ವಾರ್ಡ್ರೋಬ್‌ನಲ್ಲಿ ವಿವಿಧ ಬದಲಾವಣೆಗಳನ್ನು ಮಾಡುತ್ತಲೇ ಇರುತ್ತೇವೆ. ಇದನ್ನು ಮಾಡುವ ಮೂಲಕ, ನಾವು ಇತ್ತೀಚಿನ ಫ್ಯಾಷನ್ ಟ್ರೆಂಡ್ ಅನುಸರಿಸಲು ಸಾಧ್ಯವಾಗುತ್ತದೆ. ಮದುವೆಯ ದಿನ ಎಲ್ಲರಿಗೂ ವಿಶೇಷ. ಅದಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಅದೇ ಸಮಯದಲ್ಲಿ, ಈ ಎಲ್ಲಾ ಕಾರ್ಯಗಳನ್ನು ಸ್ಮರಣೀಯವಾಗಿಸಲು, ನಾವು ಮತ್ತು ನೀವು ಮದುವೆಗೆ ಮುಂಚಿತವಾಗಿ ಪ್ರಿ-ವೆಡ್ಡಿಂಗ್ ಶೂಟ್ (Pre-wedding shoot) ಮಾಡಿಸೋದು ಈಗ ಫ್ಯಾಷನ್. ಆದರೆ ಈ ಫೋಟೋಶೂಟ್‌ಗಳಲ್ಲಿ ನಾವು ಯಾವ ರೀತಿಯ ಉಡುಗೆ ಧರಿಸಬೇಕು?
ಹೆಚ್ಚಿನ ಜನರು ಪ್ರಿ-ವೆಡ್ಡಿಂಗ್ ಶೂಟ್ ಗೆ ಯಾವ ರೀತಿಯ ಡ್ರೆಸ್ ಧರಿಸೋದು ಅನ್ನೋ ಕನ್ ಫ್ಯೂಶನ್ ನಲ್ಲೇ ಇರುತ್ತಾರೆ. ಕೊನೆಗೆ ಅವಸರದಲ್ಲಿ ಯೋಚಿಸದೆ ಸ್ಟೈಲಿಂಗ್ (Styling)ಮಾಡುತ್ತೇವೆ. ಇಂದು ನಾವು ನಿಮ್ಮ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಗಾಗಿ ಟ್ರೈ ಮಾಡಬಹುದಾದ ಮತ್ತು ಅದ್ಭುತವಾಗಿ ಕಾಣುವ ಕೆಲವು ಉಡುಗೆಗಳನ್ನು ನಿಮಗೆ ಹೇಳಲಿದ್ದೇವೆ.
ಶಾರ್ಟ್ ಡ್ರೆಸ್ (Short dress)
ಸುಮಾರು 500 ರೂ.ಗಳಿಂದ 1000 ರೂ.ಗಳವರೆಗಿನ ದರದಲ್ಲಿ ನೀವು ಸುಂದರವಾದ ಶಾರ್ಟ್ ಡ್ರೆಸ್ ಖರೀದಿಸಬಹುದು. ಪ್ರೀ-ವೆಡ್ಡಿಂಗ್ ಫೋಟೋಶೂಟ್ ಗಾಗಿ ನೀವು ಮಾಡರ್ನ್ ಲುಕ್ ಕ್ಯಾರಿ ಮಾಡಲು ಬಯಸಿದರೆ, ನೀವು ಅಂತಹ ಉಡುಪನ್ನು ಆಯ್ಕೆ ಮಾಡಬಹುದು. ಆನ್ ಲೈನ್ ನಲ್ಲಿ ನಿಮಗೆ ಬೇಕಾದಷ್ಟು ಆಯ್ಕೆಗಳು ಸಹ ಲಭ್ಯವಿದೆ.
ಈ ರೀತಿಯ ಡ್ರೆಸ್ ಜೊತೆಗೆ ಮೇಕಪ್ ಗಾಗಿ(Makeup) ನ್ಯೂಡ್ ಶೇಡ್ಸ್ ಆರಿಸಿ.. ಇದಲ್ಲದೆ, ನೀವು ಕೂದಲಿಗೆ ತೆರೆದ ನಯವಾದ ಕೇಶವಿನ್ಯಾಸವನ್ನು ಆಯ್ಕೆ ಮಾಡೋದನ್ನು ಮರೆಯಬೇಡಿ. ಅಲ್ಲದೆ, ಆಭರಣಗಳಿಗಾಗಿ ನೀವು ಸ್ಟಡ್ ಇಯರಿಂಗ್ಸ್ ಮಾತ್ರ ಕ್ಯಾರಿ ಮಾಡಿ. ಇದು ನಿಮಗೆ ಪರ್ಫೆಕ್ಟ್ ಲುಕ್ ನೀಡುತ್ತೆ. ಆದರೆ ಮಲ್ಟಿ ಕಲರ್ ಡ್ರೆಸ್ ಮಾತ್ರ ಆಯ್ಕೆ ಮಾಡಬೇಡಿ, ಡ್ರೆಸ್ ಸಿಂಪಲ್ ಆಗಿರಲಿ.
ಸ್ಯಾಟೀನ್ ಸೀರೆ(Satin saree)
ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಲುಕ್ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಗಳಲ್ಲಿ ತುಂಬಾನೆ ಜನಪ್ರಿಯತೆ ಗಳಿಸಿದೆ. ನೀವೂ ಸಹ ಅಂತಹ ಲುಕ್ ಹೊಂದಲು ಬಯಸಿದರೆ, ಸ್ಯಾಟಿನ್ ಸೀರೆ ಆಯ್ಕೆ ಮಾಡಬಹುದು. ಸ್ಯಾಟಿನ್ ಹೊರತುಪಡಿಸಿ ಬೇರೆ ಯಾವುದೇ ಬಟ್ಟೆಯಿಂದ ಮಾಡಿದ ಸೀರೆ ಕ್ಯಾರಿ ಮಾಡಲು ಬಯಸಿದರೆ, ನೀವು ಶಿಫಾನ್ ಸೀರೆ ಆಯ್ಕೆ ಮಾಡಬಹುದು. ಈ ರೀತಿಯ ಸೀರೆಯನ್ನು ಸುಮಾರು 1000 ರೂ.ಗಳಿಂದ 1500 ರೂ.ದರದಲ್ಲಿ ಪಡೆಯುತ್ತೀರಿ.
ಈ ರೀತಿಯ ಸೀರೆಯೊಂದಿಗೆ ಸ್ಲೀವ್ ಲೆಸ್(Sleeve less)ಮತ್ತು ಬ್ಯಾಕ್ ಲೆಸ್ ಬ್ಲೌಸ್ ಕ್ಯಾರಿ ಮಾಡಿದ್ರೆ, ನಿಮ್ಮ ಲುಕ್ ತುಂಬಾನೆ ಚೆನ್ನಾಗಿರುತ್ತೆ. ಇದಲ್ಲದೆ, ನೀವು ಕೂದಲಿಗೆ ಓಪನ್ ವೇವ್ ಕರ್ಲ್ಸ್ ಹೇರ್ಸ್ಟೈಲ್ ಅನ್ನು ಆಯ್ಕೆ ಮಾಡಬಹುದು. ಮೇಕಪ್ ಮಿನಿಮಮ್ ಆಗಿದ್ದಷ್ಟು ಚೆನ್ನಾಗಿರುತ್ತೆ.
ಗೌನ್ (Gown)
ಸಾದಾ ಗೌನ್ ಗಳನ್ನು ಕ್ಯಾರಿ ಮಾಡೋದು ಸಹ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಗಳಿಗೆ ಬೆಸ್ಟ್ ಆಯ್ಕೆ. ಈ ರೀತಿಯಾಗಿ, ನೀವು ರಫಲ್, ಸಾದಾ, ವೆಲ್ವೆಟ್ ಮತ್ತು ಇತರ ಅನೇಕ ರೀತಿಯ ಗೌನ್ ಮಾದರಿಗಳು ಮತ್ತು ವಿನ್ಯಾಸಗಳನ್ನು ಕಾಣಬಹುದು. ವಿಶೇಷವಾಗಿ ಉದ್ದನೆಯ ಗೌನ್‌ಗಳಿಗೆ ಆದ್ಯತೆ ನೀಡಲಾಗುತ್ತದೆ. ಅಂತಹ ಲುಕ್ ಸಾಕಷ್ಟು ರಾಯಲ್ ಆಗಿ ಕಾಣುತ್ತದೆ. ಈ ರೀತಿಯ ಗೌನ್.
ಈ ರೀತಿಯ ಗೌನ್‌ನೊಂದಿಗೆ, ನೀವು ಅರ್ಧ ಪೋನಿಟೇಲ್ ಹೇರ್ ಸ್ಟೈಲ್ ಮಾಡಬಹುದು ಮತ್ತು ಅದನ್ನು ಕ್ರೌನ್ ಶೈಲಿಯ ಹೇರ್ ಬ್ಯಾಂಡ್ ನಿಂದ ಅಲಂಕರಿಸಬಹುದು ಮತ್ತು ನಿಮ್ಮ ಲುಕ್ ಹೆಚ್ಚಿಸಬಹುದು. ಇದರ ಜೊತೆ ಹೆವಿ ಅಥವಾ ನ್ಯೂಡ್ ಮೇಕಪ್(Nude makeup) ಎರಡೂ ಸಹ ತುಂಬಾನೆ ಚೆನ್ನಾಗಿ ಕಾಣುತ್ತೆ.