ಮದುವೆ, ಪಾರ್ಟಿಗಳಲ್ಲಿ ಕ್ಲಾಸಿ ಲುಕ್ ಪಡೆಯಲು ಧರಿಸಿ ಸ್ಟೈಲಿಶ್ ಚೋಕರ್

First Published | Dec 24, 2022, 6:31 PM IST

ಯಾವುದೇ ಪಾರ್ಟಿ ಅಥವಾ ಫಂಕ್ಷನ್ ನಲ್ಲಿ ಸ್ಟೈಲಿಶ್ ಆಗಿ ಕಾಣುವುದು ಬಹಳ ಮುಖ್ಯ. ಮುಂಬರುವ ದಿನಗಳಲ್ಲಿ ನೀವು ಸಮಾರಂಭದಲ್ಲಿ ಭಾಗವಹಿಸುತ್ತಿದ್ದರೆ, ಈ ಟಿಪ್ಸ್ ಗಳ ಸಹಾಯದಿಂದ, ನಿಮ್ಮ ಉಡುಗೆಗೆ ನೀವು ಪರ್ಫೆಕ್ಟ್ ಆಗಿರೋ ಚೋಕರ್ ಆಯ್ಕೆ ಮಾಡಬಹುದು.
 

ಚಳಿಗಾಲದ ಋತುವು ವಿವಾಹ-ಪಾರ್ಟಿಯ ವಾತಾವರಣವನ್ನು ಒಟ್ಟಿಗೆ ತರುತ್ತದೆ. ಈ ಸಮಾರಂಭಗಳಿಗೆ ಹಾಜರಾಗುವ ಪ್ರತಿಯೊಬ್ಬರೂ ಟ್ರೆಂಡ್ ಗೆ ಅನುಗುಣವಾಗಿ ಫ್ಯಾಷನೆಬಲ್ ಆಗಿ ಕಾಣಲು ಬಯಸುತ್ತಾರೆ. ವಿಶೇಷವಾಗಿ ಹುಡುಗಿಯರು ಪ್ರತಿ ಸಂದರ್ಭದಲ್ಲೂ ತಮ್ಮನ್ನು ತಾವು ಸ್ಟೈಲಿಶ್ ಆಗಿ ತೋರಿಸಲು ಶ್ರಮಿಸುತ್ತಾರೆ. ತಮ್ಮ ಉಡುಗೆ ತೊಡುಗೆಗಳಿಂದ ಹಿಡಿದು ಆಭರಣಗಳವರೆಗೆ, ಮಹಿಳೆಯರು ಎಲ್ಲವನ್ನೂ ಪರ್ಫೆಕ್ಟ್ ಆಗಿ ಕ್ಯಾರಿ ಮಾಡುತ್ತಾರೆ.

ಇದೀಗ ಎಲ್ಲೆಡೆ ಮದುವೆ ಸಮಾರಂಭಗಳು (wedding season) ನಡೆಯುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಮುಂಬರುವ ದಿನಗಳಲ್ಲಿ ನೀವು ಮದುವೆ ಸಮಾರಂಭ ಅಥವಾ ಪಾರ್ಟಿಯಲ್ಲಿ ಭಾಗವಹಿಸಲು ಹೋಗುತ್ತಿದ್ದರೆ ಮತ್ತು ಸೀರೆಯನ್ನು ಧರಿಸಲು ಯೋಜಿಸುತ್ತಿದ್ದರೆ, ನಿಮ್ಮ ಸೀರೆ ಬ್ಲೌಸ್ ಆಯ್ಕೆ ಮಾಡುವ ಮೂಲಕ ನೀವು ಯಾವ ರೀತಿಯ ಚೋಕರ್ ಆಯ್ಕೆ ಮಾಡಬಹುದು ಮತ್ತು ನಿಮ್ಮನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡಬಹುದು ಅನ್ನೋದನ್ನು ತಿಳಿಸುತ್ತೇವೆ.

Tap to resize

ಡೀಪ್ ನೆಕ್ ಬ್ಲೌಸ್ (Deep Neck Blouse): ನೀವು ಡೀಪ್ ನೆಕ್ ಬ್ಲೌಸ್ ಧರಿಸಿದ್ದರೆ ಮತ್ತು ಆಭರಣಗಳನ್ನು ಇನ್ನೂ ಆಯ್ಕೆ ಮಾಡಲು ಸಾಧ್ಯವಾಗದಿದ್ದರೆ, ನೀವು ಅದರೊಂದಿಗೆ ಚೋಕರ್ ಕ್ಯಾರಿ ಮಾಡಬಹುದು. ಇದಕ್ಕಾಗಿ, ಕುಂದನ್ ಅಥವಾ ಮುತ್ತಿನ ವರ್ಕ್ ಇರೋ ಚೋಕರ್ ಆಯ್ಕೆ ಮಾಡಬಹುದು. ಇದನ್ನು ಧರಿಸುವುದರಿಂದ ನಿಮ್ಮ ಕುತ್ತಿಗೆ ಖಾಲಿಯಾಗುವುದಿಲ್ಲ ಜೊತೆಗೆ ಸ್ಟೈಲಿಶ್ ಆಗಿಯೂ ಕಾಣುತ್ತದೆ. ಇದರೊಂದಿಗೆ, ನೀವು ಇಯರಿಂಗ್ಸ್ ಧರಿಸದೇ ಇದ್ದರೂ ಪರವಾಗಿಲ್ಲ. 
 

ವಿ-ನೆಕ್ ಬ್ಲೌಸ್ (V Neck Blouse): ವಿ-ನೆಕ್ ಬ್ಲೌಸ್ ತುಂಬಾ ಬೋಲ್ಡ್ ಮತ್ತು ಸ್ಟೈಲಿಶ್ ಲುಕ್ ನೀಡುತ್ತದೆ. ಇದರೊಂದಿಗೆ ನೀವು ಚೋಕರ್ ಧರಿಸಲು ಬಯಸಿದ್ರೆ, ಕುಂದನ್ ವರ್ಕ್ ಇರುವ ಚೋಕರ್ ಧರಿಸಿ. ನೀವು ಮಲ್ಟಿ ಕಲರ್ ಚೋಕರ್ ಆಯ್ಕೆ ಮಾಡಿದರೆ, ಅದು ನಿಮ್ಮ ಒಟ್ಟಾರೆ ಲುಕ್ ನ್ನು ಮತ್ತಷ್ಟು ಚೆನ್ನಾಗಿ ಕಾಣುವಂತೆ ಮಾಡುತ್ತೆ.

ಕ್ಲೋಸ್ಡ್ ನೆಕ್ ಬ್ಲೌಸ್ (Closed Neck Blouse): ಕ್ಲೋಸ್ ನೆಕ್ ಬ್ಲೌಸ್ ಈ ದಿನಗಳಲ್ಲಿ ಸಾಕಷ್ಟು ಟ್ರೆಂಡಿಯಾಗಿದೆ. ಇದು ಸಾಕಷ್ಟು ಕ್ಲಾಸಿಯಾಗಿ ಕಾಣುತ್ತದೆ ಮತ್ತು ರಾಯಲ್ ಲುಕ್ ನೀಡುತ್ತದೆ. ಇದರೊಂದಿಗೆ ನೀವು ಹೆವಿ ಚೋಕರ್ ಧರಿಸಬಹುದು. ಕ್ಲೋಸ್ ನೆಕ್ ಬ್ಲೌಸ್ ನೊಂದಿಗೆ ಹೆವಿ ಚೋಕರ್ ಧರಿಸಿದ್ರೆ ನೀವು ಖಂಡಿತವಾಗಿಯೂ ಸಖತ್ತಾಗಿ ಕಾಣುವಿರಿ.

ಬೋಟ್ ನೆಕ್ ಬ್ಲೌಸ್ (Boat Neck Blouse): ನೀವು ಬೋಟ್ ನೆಕ್ ಬ್ಲೌಸ್ ಧರಿಸೋದಾದ್ರೆ, ಅದರೊಂದಿಗೆ ಹೆವಿ ಚೋಕರ್ ಕ್ಯಾರಿ ಮಾಡಬಹುದು. ಇದು ನಿಮ್ಮನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡುವುದು ಮಾತ್ರವಲ್ಲದೆ, ಸಾಕಷ್ಟು ಕ್ಲಾಸಿಯಾಗಿ ಕಾಣುತ್ತದೆ. ನೀವು ಬಯಸಿದರೆ, ಇದರೊಂದಿಗೆ ದೊಡ್ಡ ಗಾತ್ರದ ದುಂಡಗಿನ ಸ್ಟಡ್ ಇಯರಿಂಗ್ ಧರಿಸಬಹುದು.

ಆಕ್ಸಿಡೈಸ್ಡ್ ಚೋಕರ್ (Oxidised Choker): ಯಾವುದೇ ಸಮಾರಂಭದಲ್ಲಿ ನೀವು ಪಾಶ್ಚಾತ್ಯ ಡ್ರೆಸ್ ಧರಿಸಲು ಯೋಜಿಸುತ್ತಿದ್ದರೆ, ಅದರ ಜೊತೆಗೂ ಚೋಕರ್ (choker)  ಧರಿಸಬಹುದು. ಸೊಗಸಾದ ಲುಕ್ ಪಡೆಯಲು ನೀವು ಆಕ್ಸಿಡೈಸ್ಡ್ ಚೋಕರ್ ಆಯ್ಕೆ ಮಾಡಬಹುದು. ಶರ್ಟ್ ಗಳು, ಟಾಪ್ ಗಳು, ಗೌನ್ ಗಳೊಂದಿಗೆ ನೀವು ಈ ಚೋಕರ್ ಕ್ಯಾರಿ ಮಾಡಬಹುದು.

Latest Videos

click me!