ರೇಷ್ಮೆ ಸೀರೆಯುಟ್ಟು ನಾಚಿದ ವೈಷ್ಣವಿ, ಸೀರೆಲಿ ಹುಡುಗೀನಾ ನೋಡಲೇಬಾರದು ಎಂದ ಫ್ಯಾನ್ಸ್‌!

First Published | Oct 15, 2023, 6:23 PM IST

ಸೀತಾ ರಾಮ ನಟಿ ವೈಷ್ಣವಿ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಹೊಸದಾಗಿ ಫೋಟೋ ಶೇರ್ ಮಾಡಿಕೊಂಡಿದ್ದು, ರೇಷ್ಮೆ ಸೀರೆಯುಟ್ಟು ಮಿಂಚುತ್ತಿದ್ದಾರೆ. ವೈಷ್ಣವಿ ಗೌಡ ಅವರ ಲೇಟೆಸ್ಟ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. 

ಕಿರುತೆರೆ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರ್ತಾರೆ. ಮಾಡರ್ನ್‌, ಟ್ರೆಡಿಷನಲ್ ಲುಕ್‌ನಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ರೇಷ್ಮೆ ಸೀರೆಯುಟ್ಟುಕೊಂಡಿರೋ ಫೋಟೋಸ್ ಶೇರ್ ಮಾಡಿದ್ದು, ಫ್ಯಾನ್ಸ್‌ ಫುಲ್ ಖುಷ್ ಆಗಿದ್ದಾರೆ.

ನೇರಳೆ ಝರಿಯಂಚಿನ ಆಕಾಶನೀಲಿ ಬಣ್ಣದ ಸೀರೆ ಉಟ್ಟ ವೈಷ್ಣವಿ ಗೌಡ ಫೋಟೋಗೆ ಫೋಸ್ ನೀಡಿದ್ದಾರೆ. ಕಾಸಿನ ಸರ, ಜುಮ್ಕಾ, ಮುಡಿಗೆ ಮಲ್ಲಿಗೆ ಮುಡಿದು ಕ್ಯೂಟ್ ಆಗಿ ಸ್ಮೈಲ್ ಕೊಟ್ಟಿದ್ದಾರೆ. 

Tap to resize

ಸೀತಾ ರಾಮ ನಟಿ ವೈಷ್ಣವಿ ಗೌಡ ಸದ್ಯ ಸೀತಾರಾಮ ಸೀರಿಯಲ್‌ ಮೂಲಕ ಪ್ರೇಕ್ಷಕರ ಮನಸು ಕದ್ದಿದ್ದಾರೆ. ಮುದ್ದು ಪುಟಾಣಿ ಸಿಹಿ ಅಮ್ಮನಾಗಿ ಕಾಣಿಸಿಕೊಂಡಿರುವ ವೈಷ್ಣವಿ ಪಾತ್ರಕ್ಕೆ ಭಾರೀ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. ನಟಿಯ ಸೀರೆಯುಟ್ಟ ಫೋಟೋಗಳಿಗೆ 42,000ಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

ನೆಟ್ಟಿಗರು ನಾನಾ ರೀತಿ ಕಾಮೆಂಟ್ ಸಹ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಸಹಜ ಸುಂದರಿ ಈ ವೈಷ್ಣವಿ ಭುವನ ಮನೋಹರಿ' ಎಂದಿದ್ದಾರೆ. ಮತ್ತೊಬ್ಬರು, 'ಸೀರೇಲಿ ಹುಡುಗೀರ ನೋಡಲೇ ಬಾರದು ನಿಲ್ಲಲ್ಲ' ಎಂದು ಕಮೆಂಟಿಸಿದ್ದಾರೆ.

ವೈಷ್ಣವಿ ಅವರಿಗೆ 1 ಮಿಲಿಯನ್​ಗೂ ಅಧಿಕ ಫಾಲೋವರ್ಸ್ ಇದ್ದಾರೆ. ವೈಷ್ಣವಿ ಆಗಾಗ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಟ್ರೆಂಡಿಂಗ್‌ ಮ್ಯೂಸಿಕ್‌ಗೆ ಮಾಡೋ ರೀಲ್ಸ್‌ಗಳು ಸಹ ವೈರಲ್ ಆಗುತ್ತವೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸೀತಾರಾಮ' ಸೀರಿಯಲ್‌ನಲ್ಲಿ ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ ಮಿಂಚುತ್ತಿದ್ದಾರೆ.  ಸೀತಾರಾಮ ಸೀರಿಯಲ್‌ ಜೀ ಕನ್ನಡದಲ್ಲಿ ಟಿಆರ್‌ಪಿಯಲ್ಲೂ, ಜನಪ್ರಿಯತೆಯಲ್ಲೂ ಮುಂದಿರೋ ಸೀರಿಯಲ್ ಆಗಿದೆ. 

ಈ ಸೀರಿಯಲ್‌ನಲ್ಲಿ ಸದ್ಯಕ್ಕೀಗ ಸೀತಾ (ವೈಷ್ಣವಿಗೌಡ) ಬಹಳ ಕಷ್ಟದಲ್ಲಿದ್ದಾಳೆ. ಆದರೆ, ನಿಜ ಜೀವನದಲ್ಲಿ ವೈಷ್ಣವಿ ಫುಲ್‌ ಎಂಜಾಜ್‌ ಮಾಡುತ್ತಿದ್ದಾರೆ. ಧಾರಾವಾಹಿಯಲ್ಲಿ ಸದಾ ಸಿಂಪಲ್‌ ಆಗಿ ಕಾಣುವ ಸೀತಾ ಲುಕ್‌ ಸೀರೆ ಲುಕ್‌ಗೆ ನೆಟ್ಟಿಗರು ಬ್ಯೂಟಿಫುಲ್ ಅಂತಿದ್ದಾರೆ.

Latest Videos

click me!