ಬೆಂಡೆಕಾಯಿ (ladies finger) ತಿನ್ನುವುದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ, ಆದರೆ ಬೆಂಡೆಕಾಯಿ ಕೂದಲಿಗೆ ತುಂಬಾ ಪ್ರಯೋಜನಕಾರಿ ಅನ್ನೋದು ನಿಮಗೆ ತಿಳಿದಿದೆಯೇ. ವಾಸ್ತವವಾಗಿ, ಬೆಂಡೆಕಾಯಿಯ ಬಳಕೆಯು ಕೂದಲು ಉದುರುವಿಕೆ, ಒಡೆಯುವಿಕೆ, ತೆಳುವಾಗುವಿಕೆ ಮುಂತಾದ ಸಮಸ್ಯೆಗಳನ್ನು ತೊಡೆದುಹಾಕಬಹುದು. ಇದು ಅನೇಕ ಪೋಷಕಾಂಶಗಳ ನಿಧಿ. ಇದರಲ್ಲಿ ವಿಟಮಿನ್-ಎ, ವಿಟಮಿನ್-ಸಿ ಮತ್ತು ವಿಟಮಿನ್-ಕೆ ಕಂಡುಬರುತ್ತವೆ. ಇದು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣವನ್ನು ಸಹ ಹೊಂದಿರುತ್ತದೆ, ಇವು ಕೂದಲನ್ನು ಆರೋಗ್ಯಕರವಾಗಿಡಲು ಬಹಳ ಮುಖ್ಯವಾದ ಪೋಷಕಾಂಶಗಳು ಎಂದು ಪರಿಗಣಿಸಲಾಗಿದೆ.