ಭಾರತದಲ್ಲಿ ಎರಡನೇ ಬಾರಿಗೆ ಸ್ಪರ್ಧೆ ನಡೆಯುತ್ತಿದೆ. 130 ದೇಶಗಳ ರೂಪದರ್ಶಿಯರು ಇದರಲ್ಲಿ ಭಾಗಿಯಾಗಲಿದ್ದಾರೆ. ಸಿನಿ ಶೆಟ್ಟಿ 2 ಆಗಸ್ಟ್ 2001 ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು. ಆದರೂ ಈಕೆ ಕನ್ನಡತಿ, ಕರಾವಳಿ ಬೆಡಗಿ, ಉಡುಪಿಯ ಜಿಲ್ಲೆಯ ಇನ್ನಂಜೆಯವರು. ವಿಶೇಷ ಸಂದರ್ಶನವೊಂದರಲ್ಲಿ, ಸಿನಿ ಶೆಟ್ಟಿ ತನ್ನ ಸಿದ್ಧತೆಗಳು ಮತ್ತು ಮಿಸ್ ವರ್ಲ್ಡ್ 2023 ರ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ.