Fashion Tips: ಹೊಸ ವರ್ಷಕ್ಕೆ ನಿಮ್ಮ ಲುಕ್ ಬದಲಾಯಿಸಿ, ಹೊಸ ಲುಕ್ ಪಡೆಯಲು ಬಯಸಿದರೆ, ನಿಮಗಾಗಿ ಇಲ್ಲಿದೆ ಫ್ಯಾಷನ್ ಟಿಪ್ಸ್. ನೀವು ಕೂಡ ಹೊಸ ವರ್ಷಕ್ಕೆ ಸ್ಟೈಲಿಶ್ ಆಗಿ ಕಾಣಬೇಕು ಎಂದಾದರೆ, ನೀವು ಇಲ್ಲಿ ತಿಳಿಸಿರುವ ಫ್ಯಾಷನ್ ಟಿಪ್ಸ್ ಫಾಲೋ ಮಾಡಿ. ಹೊಸ ವರ್ಷ ಖಂಡಿತವಾಗಿಯೂ ಸಖತ್ ಆಗಿರುತ್ತೆ.
ಹೊಸ ವರ್ಷವು ನಿಮ್ಮನ್ನು ನೀವು ಮತ್ತೆ ಎಕ್ಸ್ ಪ್ಲೋರ್ ಮಾಡಲು ಸೂಕ್ತ ಅವಕಾಶ ನಿಡುತ್ತಿದೆ. ನಿಮ್ಮ ಹಳೆಯ ವಾರ್ಡ್ರೋಬ್ ಅನ್ನು ರಿಫ್ರೆಶ್ ಮಾಡುವುದು, ಚೆನ್ನಾಗಿ ಹೊಂದಿಕೊಳ್ಳುವ ಬಟ್ಟೆಗಳನ್ನು ಆಯ್ಕೆ ಮಾಡುವುದು ಮತ್ತು ಮೇಕಪ್ ಬಗ್ಗೆ ಗಮನ ಕೊಡುವಂತಹ ಸರಳ ಫ್ಯಾಷನ್ ಟಿಪ್ಸ್ ನಿಮ್ಮ ಹಳೆಯ ಲುಕ್ ಬದಲಾಯಿಸಿ ಸ್ಟೈಲಿಶ್ ಲುಕ್ ನೀಡುತ್ತದೆ.
27
ಹೊಸ ವರ್ಷದಲ್ಲಿ ಹೊಸ ಲುಕ್
ಹೊಸ ವರ್ಷ ಎಂದರೆ ಕೇವಲ ವರ್ಷದ ಬದಲಾವಣೆಯಲ್ಲ; ಹೊಸ ಲುಕ್‌ನೊಂದಿಗೆ ನಿಮ್ಮನ್ನು ಪ್ರಸ್ತುತಪಡಿಸಿಕೊಳ್ಳುವುದೂ ಆಗಿದೆ. ಇಂದು, ಹೊಸ ವರ್ಷದಲ್ಲಿ ನಿಮಗೆ ಹೊಸ ಲುಕ್ ನೀಡುವ ಕೆಲವು ಫ್ಯಾಷನ್ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
37
ನಿಮ್ಮ ವಾರ್ಡ್ರೋಬ್ ಅನ್ನು ರಿಫ್ರೆಶ್ ಮಾಡಿ
ನಿಮ್ಮ ಲುಕ್ ಅನ್ನು ರಿಫ್ರೆಶ್ ಮಾಡಲು, ನಿಮ್ಮ ವಾರ್ಡ್ರೋಬ್ ಅನ್ನು ಕ್ಲೀನ್ ಮಾಡುವುದು ಮುಖ್ಯ. ನ್ಯೂಟ್ರಲ್ ಶೇಡ್ ಇರುವ ಒಂದೆರಡು ಟ್ರೆಂಡಿ ಡ್ರೆಸ್ ಗಳನ್ನು ಸೇರಿಸುವುದರಿಂದ ನಿಮ್ಮ ಲುಕ್ ತಕ್ಷಣವೇ ರಿಫ್ರೆಶ್ ಆಗುತ್ತದೆ.
ನಿಮ್ಮ ಬಟ್ಟೆಗಳು ಎಷ್ಟೇ ದುಬಾರಿಯಾಗಿದ್ದರೂ, ಅವು ಸರಿಯಾಗಿ ಹೊಂದಿಕೊಳ್ಳದಿದ್ದರೆ, ಅವು ನಿಮ್ಮನ್ನು ಕೆಟ್ಟದಾಗಿ ಕಾಣುವಂತೆ ಮಾಡುತ್ತದೆ. ಆದ್ದರಿಂದ, ಹೊಸ ವರ್ಷದಲ್ಲಿ, ನಿಮ್ಮ ಬಟ್ಟೆಗಳ ಫಿಟ್‌ಗೆ ವಿಶೇಷ ಗಮನ ಕೊಡಿ.
57
ಸ್ಟೈಲಿಶ್ ಆಕ್ಸೆಸರೀಸ್
ಕೆಲವೊಮ್ಮೆ, ನಿಮ್ಮ ಲುಕ್ ಬದಲಾಯಿಸಲು ಆಕ್ಸೆಸರೀಸ್ ಕೂಡ ಬೇಕಾಗುತ್ತದೆ.. ಕ್ಲಾಸಿಕ್ ವಾಚ್, ಮಿನಿಮಲ್ ಜ್ಯುವೆಲ್ಲರಿ, ಸ್ಟೈಲಿಶ್ ಬ್ಯಾಗ್ ಅಥವಾ ಉತ್ತಮ ಪಾದರಕ್ಷೆಗಳು ನಿಮ್ಮ ಲುಕ್ ಅನ್ನು ಬದಲಾಯಿಸಬಹುದು.
67
ಬಣ್ಣಗಳ ಆಯ್ಕೆ
ನೀವು ಇಲ್ಲಿಯವರೆಗೆ ಸೇಫ್ ಬಣ್ಣಗಳಿಗೆ ಅಂಟಿಕೊಂಡಿದ್ದರೆ, ಹೊಸ ವರ್ಷವು ಪ್ರಯೋಗ ಮಾಡಲು ಸೂಕ್ತ ಸಮಯ. ನಿಮ್ಮ ಸ್ಟೈಲ್ ಬದಲಾಯಿಸಲು, ನಿಮ್ಮ ಲುಕ್ ಗೆ ಕೆಲವು ಬ್ರೈಟ್ ಬಣ್ಣಗಳನ್ನು ಸೇರಿಸಬಹುದು.
77
ಕಂಫರ್ಟೇಬಲ್ ಆಗಿರಲಿ
ಸ್ಟೈಲಿಶ್ ಲುಕ್ ನಿಮ್ಮನ್ನು ಬದಲಾಯಿಸಬಹುದು, ಆದರೆ ಅದು ನಿಮ್ಮ ಕಂಫರ್ಟೇಬಲ್ ಜೊತೆ ರಾಜಿ ಮಾಡಿಕೊಳ್ಳಬಾರದು. ಬಟ್ಟೆಗಳನ್ನು ನೀವು ದಿನಪೂರ್ತಿ ಧರಿಸೋದರಿಂದ ಫಿಟ್ ಆಗಿರುವ ಜೊತೆಗೆ ಕಂಫರ್ಟೇಬಲ್ ಆಗಿರುವ ಬಟ್ಟೆಗಳನ್ನು ಧರಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.