ಹುಣಸೆ ಎಲೆಗಳಿಂದ ಪಡೆಯಿರಿ ನ್ಯಾಚುರಲ್ ಕಪ್ಪು ಕೂದಲು

First Published | Sep 16, 2022, 3:53 PM IST

ಸುಂದರವಾದ ಕಪ್ಪು ರೇಷ್ಮೆಯಂತಹ ಕೂದಲು ಯಾರಿಗೆ ಬೇಡ ಹೇಳಿ. ಪ್ರತಿಯೊಬ್ಬ ಮಹಿಳೆಯೂ ಇದನ್ನೇ ಬಯಸುತ್ತಾರೆ. ಸುಂದರವಾದ ಕೂದಲು ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸುತ್ತೆ, ಆದರೆ ಚಿಕ್ಕ ವಯಸ್ಸಿನಲ್ಲಿ ಹಠಾತ್ ಬಿಳಿ ಕೂದಲು ಕಾಣಿಸಿಕೊಂಡರೆ ಏನು ಮಾಡೋದು? ಈ ಬಿಳಿ ಕೂದಲು ನಿಮಗೆ ಮುಜುಗರವನ್ನುಂಟು ಮಾಡುತ್ತೆ ಅಲ್ವಾ?. ಬಿಳಿ ಕೂದಲು ಬಾರದಿರಲು, ಪ್ರತಿಯೊಬ್ಬರೂ ತಮ್ಮ ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಏನೇನೋ ಕೆಮಿಕಲ್ ಯುಕ್ತ ಪ್ರಾಡಕ್ಟ್ ಗಳನ್ನ ಬಳಕೆ ಮಾಡುತ್ತಾರೆ, ಇದರಿಂದ ಮುಂದೊಂದು ದಿನ ಕೂದಲು ಹಾಳಾಗುತ್ತದೆ. ಹಾಗಿದ್ರೆ ನ್ಯಾಚುರಲ್ ರೆಮಿಡಿ ಏನು?

ಕಪ್ಪಾದ ಮತ್ತು ದಟ್ಟವಾದ ಕೂದಲು(Hair) ಪ್ರತಿಯೊಬ್ಬರಿಗೂ ಇಷ್ಟ. ಆದರೆ ವಯಸ್ಸಾಗುವ ಮೊದಲು ಕೂದಲು ಬಿಳಿ ಬಣ್ಣಕ್ಕೆ ತಿರುಗಿದಾಗ, ನಾವು ತಕ್ಷಣವೇ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಕೂದಲಿನ ಆರೈಕೆ ಉತ್ಪನ್ನಗಳತ್ತ ಓಡುತ್ತೇವೆ. ಅಂತಹ ಕೂದಲಿನ ಆರೈಕೆ ಉತ್ಪನ್ನಗಳು ರಾಸಾಯನಿಕಗಳನ್ನು ಹೊಂದಿರುತ್ತವೆ, ಇದು ಕೆಲವೊಮ್ಮೆ ಕೂದಲನ್ನು ದುರ್ಬಲಗೊಳಿಸಬಹುದು ಮತ್ತು ಹಾನಿಗೊಳಿಸಬಹುದು. ಈ ಸಮಸ್ಯೆಯನ್ನು ತೊಡೆದುಹಾಕಲು ನೀವು ಹುಣಸೆ ಎಲೆಗಳನ್ನು ಬಳಸಬಹುದು.

ಹುಣಸೆಹಣ್ಣಿನಲ್ಲಿ(Tamarind) ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮತ್ತು ನೈಸರ್ಗಿಕ ಕೂದಲಿನ ಕಲರಿಂಗ್ ಏಜೆಂಟ್ ಗಳಿವೆ, ಇದು ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡಲು ಮತ್ತು ಅನೇಕ ಕೂದಲಿನ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತೆ . ಹುಣಸೆ ಎಲೆಗಳನ್ನು ಆರೋಗ್ಯಕರ ಮತ್ತು ಹೊಳೆಯುವ ಕೂದಲಿಗೆ ಅನೇಕ ರೀತಿಯಲ್ಲಿ ಬಳಸಲಾಗುತ್ತೆ. ಬನ್ನಿ ಇದನ್ನು ಹೇಗೆ ಬಳಸಲಾಗುತ್ತೆ ಎಂದು ತಿಳಿದುಕೊಳ್ಳೋಣ

Latest Videos


ಹುಣಸೆ ಎಲೆಯನ್ನು ಹೇಗೆ ಬಳಸೋದು:
ಹುಣಸೆ ಎಲೆಗಳಲ್ಲಿ ವಿಟಮಿನ್ ಸಿ(Vitamin C) ಯಥೇಚ್ಛವಾಗಿ ಕಂಡುಬರುತ್ತೆ, ಆದ್ದರಿಂದ ಕೂದಲು ನೈಸರ್ಗಿಕವಾಗಿ ಕಪ್ಪಾಗಿರಿಸುತ್ತೆ ಮತ್ತು ಶುಷ್ಕತೆ, ಸ್ಪ್ಲಿನ್ಟ್  ಎಂಡ್ಸ್ ಮತ್ತು ತಲೆಹೊಟ್ಟಿನಂತಹ ಅನೇಕ ಕೂದಲಿನ ಸಮಸ್ಯೆಗಳನ್ನು ಪರಿಹರಿಸಬಹುದು. ಇದನ್ನು ಯಾವೆಲ್ಲಾ ರೀತಿಯಲ್ಲಿ ಬಳಕೆ ಮಾಡಬಹುದು ಅನ್ನೋದನ್ನು ತಿಳಿಸುತ್ತೇವೆ. 

ಹೇರ್ ಸ್ಪ್ರೇ (Hair spray)ಮಾಡಿ -
ಕೂದಲನ್ನು ಆರೋಗ್ಯಕರವಾಗಿಡಲು ಹುಣಸೆ ಎಲೆಗಳಿಂದ ಹೇರ್ ಸ್ಪ್ರೇಯನ್ನು ತಯಾರಿಸಬಹುದು, ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತೆ. ಕೂದಲಿನ ಉತ್ತಮ ಆರೋಗ್ಯಕ್ಕಾಗಿ ನೀವು ಕೆಮಿಕಲ್ ಯುಕ್ತ ಹೇರ್ ಸ್ಪ್ರೇ ಬಿಟ್ಟು, ಈ ಹೇರ್ ಸ್ಪ್ರೇ ಬಳಸಿದ್ರೆ ಕೂದಲು ಉತ್ತಮವಾಗಿರುತ್ತೆ. 

- ಹೇರ್ ಸ್ಪ್ರೇ ತಯಾರಿಸಲು, ಮೊದಲು ಅರ್ಧ ಕಪ್ ಹುಣಸೆ ಎಲೆಗಳನ್ನು 5 ಕಪ್ ನೀರಿಗೆ ಸೇರಿಸಿ ಕುದಿಸಿ ಮತ್ತು ಅದು ತಣ್ಣಗಾಗುವವರೆಗೆ ಕಾಯಿರಿ ಮತ್ತು ನಂತರ ಅದನ್ನು ನಿಮ್ಮ ಕೂದಲಿಗೆ ಸ್ಪ್ರೇ ಮಾಡಿ ಮತ್ತು ಸ್ವಲ್ಪ ಸಮಯದ ನಂತರ ಕೂದಲನ್ನು ಸ್ವಚ್ಛವಾದ ನೀರಿನಿಂದ ತೊಳೆಯಿರಿ. ಈ ಪ್ರಕ್ರಿಯೆಯನ್ನು ಪ್ರತಿದಿನ ಮಾಡುವ ಮೂಲಕ, ನೀವು ಕೂದಲಿನಲ್ಲಿರುವ ಬ್ಯಾಕ್ಟೀರಿಯಾ(Bacteria) ಮತ್ತು ಕೊಳಕಿನಿಂದ ಪರಿಹಾರವನ್ನು ಪಡೆಯಬಹುದು.

ಹೇರ್ ಮಾಸ್ಕ್ (Hair mask)ತಯಾರಿಸಿ -
- ಕೂದಲಿನ ಸಮಸ್ಯೆಗಳನ್ನು ತೊಡೆದುಹಾಕಲು ಮತ್ತು  ಕೂದಲಿಗೆ ನೈಸರ್ಗಿಕ ಹೊಳಪನ್ನು ತರಲು, ಹುಣಸೆ ಎಲೆಗಳಿಂದ ಮಾಡಿದ ಹೇರ್ ಮಾಸ್ಕ್ ಬಳಸಬಹುದು, ಇದು ಕೂದಲಿನ ಮೇಲ್ಮೈಯಲ್ಲಿರುವ ತಲೆಹೊಟ್ಟನ್ನು ತೆಗೆದುಹಾಕುತ್ತೆ ಮತ್ತು ಅಕಾಲಿಕವಾಗಿ ಬಿಳಿಯಾಗುವ ಕೂದಲಿನಿಂದ ಪರಿಹಾರವನ್ನು ಪಡೆಯಬಹುದು.

- ಈ ಹೇರ್ ಮಾಸ್ಕ್ ತಯಾರಿಸಲು, ಮೊದಲು ಹುಣಸೆ ಎಲೆಗಳನ್ನು ಮಿಕ್ಸರ್ ಗ್ರೈಂಡರ್ನಲ್ಲಿ ಮೊಸರಿನೊಂದಿಗೆ(Curd) ಅರೆದು ಹೇರ್ ಮಾಸ್ಕ್ ತಯಾರಿಸಿ ನಂತರ ಈ ಮಾಸ್ಕ್ ಅನ್ನು  ಕೈಗಳಿಂದ ನಿಮ್ಮ ಕೂದಲಿಗೆ ಹಗುರವಾಗಿ ಮಸಾಜ್ ಮಾಡಿ ಮತ್ತು ಅದನ್ನು ಒಣಗಿಸಿ ಮತ್ತು ಸ್ವಚ್ಛವಾದ ನೀರಿನಿಂದ ತೊಳೆಯಿರಿ.

click me!