ಈ ಈಸಿ ಟಿಪ್ಸ್ ಫಾಲೋ ಮಾಡಿ ನೋ ಮೇಕಪ್ ಲುಕ್ ಪಡೆಯಿರಿ!

First Published Sep 6, 2022, 5:45 PM IST

ಹೆಚ್ಚಿನ ಮಹಿಳೆಯರು ಸಿಂಪಲ್ ಮತ್ತು ಕ್ಲಾಸಿ ಲುಕ್ (Classy Look) ಪಡೆಯಲು ನೋ ಮೇಕಪ್ ಲುಕ್ (No Make Up Look) ಹೊಂದಲು ಇಷ್ಟಪಡ್ತಾರೆ. ಇದು ಸ್ಟಾಂಡರ್ಡ್ ಲುಕ್ ನೀಡುವುದರ ಜೊತೆಗೆ, ಸ್ಟೈಲಿಶ್ (Stylish) ಆಗಿ ಕಾಣುವಂತೆ ಮಾಡುತ್ತದೆ. ಲೈಟ್ ಆಗಿ ಮೇಕಪ್ ಮಾಡಿದ ನಂತರವೂ, ಅನೇಕ ಬಾರಿ ಮೇಕಪ್ ಅನ್ನು ಮರೆಮಾಡೋದು ಸಾಧ್ಯವಾಗೋದಿಲ್ಲ. ಹಾಗಾದ್ರೆ ನೋ ಮೇಕಪ್ ಲುಕ್ ಪಡೆಯೋದು ಹೇಗೆ? ಇದಕ್ಕಾಗಿ ನೀವು ಏನು ಮಾಡಬೇಕು. ಕೆಲವೇ ಕೆಲವು ಮೇಕಪ್ ಪ್ರಾಡಕ್ಟ್ ಬಳಸಿ ನೀವು ನೋ ಮೆಕಪ್ ಲುಕ್ ಪಡೆಯೋದು ಹೇಗೆ ಅನ್ನೋದನ್ನು ನೋಡೋಣ.

ಹೆಚ್ಚಿನ ಮಹಿಳೆಯರು ಮೇಕಪ್(Makeup) ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುತ್ತಾರೆ. ಮಹಿಳೆಯರು ಪಾರ್ಟಿಗಳಂತಹ ವಿಶೇಷ ಸಂದರ್ಭಗಳಲ್ಲಿ ಹೆವಿ ಮೇಕಪ್ ಲುಕ್ ಕ್ಯಾರಿ ಮಾಡಲು ಇಷ್ಟಪಡ್ತಾರೆ. ಆದರೆ ಆಫೀಸ್, ಇನ್ನಿತರ ಸಂದರ್ಭಗಳಲ್ಲಿ ನೋ ಮೇಕಪ್ ಲುಕ್ ಇಷ್ಟಪ್ಡ್ತಾರೆ. ಲೈಟ್ ಮೇಕಪ್ ಮಾಡುವಾಗ, ಅನೇಕ ಬಾರಿ ಮಹಿಳೆಯರು ನೋ ಮೇಕಪ್ ಲುಕ್  ಕ್ಯಾರಿ ಮಾಡಲು ಟ್ರೈ ಮಾಡ್ತಾರೆ. ನೀವು ಬಯಸಿದರೆ, ಕೆಲವು ವಿಧಾನಗಳನ್ನು ಟ್ರೈ ಮಾಡೋ ಮೂಲಕ ಮೇಕಪ್ ಮಾಡಿದರೆ ಸುಲಭವಾಗಿ ನೋ ಮೇಕಪ್ ಲುಕ್ (No Make Up Look) ನಿಮ್ಮದಾಗಿಸಿಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ನೋ ಮೇಕಪ್ ಲುಕ್ ಟ್ರೆಂಡ್ ಗಮನಾರ್ಹವಾಗಿ ಹೆಚ್ಚಾಗಿದೆ. ಹಾಗಾಗಿ ಸಿಂಪಲ್ ಮತ್ತು ಸೋವರ್ ಲುಕ್ ಗೆ ವಿಶೇಷ ಗಮನ ನೀಡುವ ಮಹಿಳೆಯರು ಮೇಕಪ್ ಹೈಲೈಟ್ ಮಾಡೋದನ್ನು ತಪ್ಪಿಸುತ್ತಾರೆ. ಇದರ ಹೊರತಾಗಿಯೂ, ಮುಖದ ಮೇಲೆ ಮೇಕಪ್ ಸಂಪೂರ್ಣವಾಗಿ ಮರೆ ಮಾಚಲು ಮಹಿಳೆಯರಿಗೆ ಕಷ್ಟವಾಗುತ್ತೆ. ಹಾಗಾದ್ರೆ ನೋ ಮೇಕಪ್ ಲುಕ್ (No makeup look)ಕ್ಯಾರಿ ಮಾಡೋದು ಹೇಗೆ? ಬನ್ನಿ ನೋಡೋಣ. 

ಮಾಯಿಶ್ಚರೈಸರ್(Moisturizer) ಹಚ್ಚಿ

ನೋ ಮೇಕಪ್ ಲುಕ್ ನಿಮ್ಮದಾಗಬೇಕೆಂದು ಇಷ್ಟ ಪಡ್ತೀರಾ?, ಅದಕ್ಕಾಗಿ ಮೊದಲನೆಯದಾಗಿ, ಚರ್ಮವನ್ನು ಹೈಡ್ರೇಟ್ ಆಗಿಡಬೇಕು. ಆದ್ದರಿಂದ ಚರ್ಮದ ಮೇಲೆ ಲೈಟ್ ಆಗಿ ಮಾಯಿಶ್ಚರೈಸರ್ ಬಳಸಿ. ಇದು ನಿಮ್ಮ ಚರ್ಮ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತೆ ಮತ್ತು ಮೇಕಪ್ ಹಾಕಿದ್ರೂ ನಿಮ್ಮದು ನ್ಯಾಚುರಲ್ ಲುಕ್ ತರ ತೋರಿಸುತ್ತೆ.

ಲೈಟ್ ಫೌಂಡೇಶನ್(Foundatrion) ಟ್ರೈ ಮಾಡಿ

ಮಾಯಿಶ್ಚರೈಸರ್ ಹಚ್ಚಿದ ನಂತರ, ಹೊಳೆಯುವ ಮತ್ತು ಫ್ಲೋಲೆಸ್ ಸ್ಕಿನ್ ಪಡೆಯಲು ನೀವು ಮುಖದ ಮೇಲೆ ಲೈಟ್ ಫೌಂಡೇಶನ್ ಅಥವಾ ಬಿಬಿ ಕ್ರೀಮ್ ಹಚ್ಚೋದ್ ಬೆಸ್ಟ್. ಇದು ನಿಮ್ಮ ಸ್ಕಿನ್ ಟೋನ್ ಅನ್ನು ತುಂಬಾ ಬ್ರೈಟ್ ಆಗಿ ಕಾಣುವಂತೆ ಮಾಡುತ್ತೆ, ಜೊತೆ ನ್ಯಾಚುರಲ್ ಲುಕ್ ನೀಡುತ್ತೆ.

ಕನ್ಸೀಲರ್ ನಿಂದ(Concealer) ಮಾರ್ಕ್ಸ್ ಗಳನ್ನು ಮರೆಮಾಡಿ

ನೋ ಮೇಕಪ್ ಲುಕ್ ಬೇಕು ಅನ್ನೋದಾದ್ರೆ ಯಾವತ್ತೂ ಕನ್ಸೀಲರ್ ಹಚ್ಚಲು ಮರೀಬೇಡಿ. ಕನ್ಸೀಲರ್ ಮೂಲಕ, ನೀವು ಮುಖದ ಪಿಂಪಲ್ ಮತ್ತು ಕಲೆಗಳನ್ನು ಸುಲಭವಾಗಿ ಕಾಣದಂತೆ ಮಾಡಬಹುದು. ಅಷ್ಟೇ ಅಲ್ಲ ಕನ್ಸೀಲರ್ ಹಚ್ಚಿದ ನಂತರ, ನಿಮ್ಮ ಮುಖದ ಶೈನಿಂಗ್ ತುಂಬಾ ನ್ಯಾಚುರಲ್ ಆಗಿ ಕಾಣುತ್ತೆ.

ಕಣ್ಣುಗಳಿಗೆ ಮಸ್ಕರಾ(Maskara) ಹಚ್ಚಿ

ಕಣ್ಣುಗಳು ಅಂದವಾಗಿ ಕಂಡ್ರೆ ನೀವೂ ಸಹ ಚೆನ್ನಾಗಿ ಕಾಣೋದ್ರಲ್ಲಿ ಡೌಟ್ ಇಲ್ಲ. ನೋ ಮೇಕಪ್ ಲುಕ್ ಗೆ ಕಣ್ಣುಗಳನ್ನು ಹೈಲೈಟ್ ಮಾಡಲು ಮಸ್ಕರಾ ಬಳಸೋದು ಉತ್ತಮ ಆಯ್ಕೆ. ಮಸ್ಕರಾ ಇಲ್ಲದೆ ನಿಮ್ಮ ಮೇಕಪ್ ಲುಕ್ ಅಪೂರ್ಣ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ, ಮಸ್ಕರಾವನ್ನು ಕಣ್ಣುಗಳಿಗೆ ಹಚ್ಚಿ.

ತುಟಿಗಳಿಗೆ ಲಿಪ್ ಬಾಮ್(Lip balm)

ನೋ  ಮೇಕಪ್ ಲುಕ್ ಒಂದು ರೀತಿಯ ಲೈಟ್ ಮೇಕಪ್. ಹಾಗಾಗಿ ತುಟಿಗಳ ಮೇಲಿನ ಡಾರ್ಕ್ ಶೇಡ್ ನ (Lip Shade) ಲಿಪ್ ಕಲರ್ ನಿಮ್ಮ ಲುಕ್  ಹಾಳುಮಾಡಬಹುದು. ವಿಶೇಷವಾಗಿ ನೋ ಮೇಕಪ್ ಲುಕ್  ಹೊಂದಲು ನೀವು ಇಷ್ಟಪಡೋದಾದ್ರೆ, ನೀವು ತುಟಿಗಳಿಗೆ ಲಿಪ್ ಬಾಮ್ ಹಚ್ಚಬಹುದು. ಇದು ನಿಮ್ಮ ತುಟಿಗಳನ್ನು ಹೈಡ್ರೇಟ್ (Hydrate) ಆಗಿರಿಸುತ್ತೆ ಮತ್ತು ನೋ  ಮೇಕಪ್ ಲುಕ್ ಸಹ ಪರ್ಫೆಕ್ಟ್ ಆಗಿರುತ್ತೆ.  

click me!