ರಾಕಿ ಭಾಯ್ ಯಶ್ ತರ ದಪ್ಪಗೆ ಗಡ್ಡ, ಮೀಸೆ ಬೇಕಾ? ಹಾಗಿದ್ರೆ ಇವನ್ನು ಟ್ರೈ ಮಾಡಿ

First Published | Apr 6, 2024, 3:22 PM IST

ಏನೇ ಮಾಡಿದರೂ ನಿಮಗೆ ಗಡ್ಡ ಮೀಸೆ ಬರ್ತಾ ಇಲ್ವಾ? ಸ್ನೇಹಿತರೆಲ್ಲಾಏನೇನೋ ಕಾಲೆಳೆದು ತಮಾಷೆ ಮಾಡ್ತಿದ್ದಾರ?. ಇಂದು ನಾವು ನಿಮ್ಮ ಈ ಸಮಸ್ಯೆಗೆ ವಿಶೇಷವಾದ ಪರಿಹಾರ ತಂದಿದ್ದೇವೆ. ಈ ಮನೆ ಮದ್ದುಗಳ ಸಹಾಯದಿಂದ, ನೀವು ರಾಕಿ ಭಾಯ್ ಅವರಂತೆ ದಪ್ಪ ಗಡ್ಡವನ್ನು ಸಹ ಹೊಂದೋದು ಗ್ಯಾರಂಟಿ.
 

ಹುಡುಗರಿಗೆ ಗಡ್ಡ (Beard) ಎಷ್ಟು ಮುಖ್ಯ ಎಂದು ನೀವೇ ಊಹಿಸಬಹುದು. ಪುರುಷರು ತಮ್ಮ ಮುಖದ ಆರೈಕೆಗಾಗಿ ವಿವಿಧ ಸೌಂದರ್ಯ ಉತ್ಪನ್ನಗಳು ಮತ್ತು ಮನೆ ಮದ್ದುಗಳನ್ನು ಬಳಸುತ್ತಾರೆ ಅಲ್ವಾ? ಇತ್ತೀಚಿನ ದಿನಗಳಲ್ಲಿ, 15-16 ವರ್ಷದ ಹುಡುಗರು ಗಡ್ಡ ಬೆಳೆಯಬೇಕೆಂದು ತಮ್ಮ ಮುಖದ ಮೇಲೆ ಅನೇಕ ವಸ್ತುಗಳನ್ನು ಹಚ್ಚುತ್ತಿದ್ದಾರೆ. 
 

ಗಡ್ಡದ ಬೆಳವಣಿಗೆ ತುಂಬಾ ಕಡಿಮೆ ಇರುವವರಲ್ಲಿ ನೀವೂ ಒಬ್ಬರಾಗಿದ್ದರೆ ಅಥವಾ ನಿಮ್ಮ ಸ್ನೇಹಿತರು ನಿಮ್ಮನ್ನು ಏನೇನೋ ಹೇಳಿ ಕೆಟ್ನಾಗಿ ಆಡಿ ಕೊಳ್ಳುತ್ತಿದ್ದರೆ, ಇನ್ನು ಮುಂದೆ ಅದರ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಇಲ್ಲಿ ನೀಡಲಾದ ಐದು ವಿಧಾನಗಳನ್ನು ಬಳಸಿಕೊಂಡು ನೀವು ಹೆವಿ ಗಡ್ಡ ಮೀಸೆ ಬೆಳೆಸಬಹುದು. 
 

Latest Videos


ಚರ್ಮದ ಬಗ್ಗೆ ಕಾಳಜಿ ವಹಿಸಿ
ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ನಿಮ್ಮ ಚರ್ಮವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಯಾವುದೇ ರೀತಿಯ ಉತ್ಪನ್ನಗಳನ್ನು ಬಳಸುವ ಮೊದಲು ನಿಮ್ಮ ಚರ್ಮದ ಪ್ರಾಕಾರದ ಬಗ್ಗೆ ಕಾಳಜಿ ವಹಿಸಿ. ಮುಖವನ್ನು ಸ್ವಚ್ಚಗೊಳಿಸಲು ಕ್ಲೆನ್ಸರ್ ಮತ್ತು ಸನ್ಸ್ಕ್ರೀನ್ (sunscreen) ಬಳಸಿ. ನಿಮ್ಮ ಚರ್ಮದ ಬಗ್ಗೆ ನೀವು ಕಾಳಜಿ ವಹಿಸಿದಾಗ, ರಂಧ್ರಗಳಲ್ಲಿನ ಕೊಳೆಯನ್ನು ಕ್ಲೀನ್ ಮಾಡಿದಾಗ ಚರ್ಮವು ಗಡ್ಡ ಬೆಳೆಯಲು ಅನುಕೂಲವಾಗುವಂತೆ ಇರುತ್ತದೆ. 

ಬೆಳ್ಳುಳ್ಳಿಯನ್ನು ಬಳಸಿ 
ಅಂದಹಾಗೆ, ಗಡ್ಡ ಬೆಳೆಸಲು ಬಳಸುವ ಅನೇಕ ಮನೆಮದ್ದುಗಳನ್ನು ನೀವು ಕೇಳಿರಬಹುದು, ಆದರೆ ಇಂದು ನಾವು ನಿಮಗೆ ತುಂಬಾ ಎಫೆಕ್ಟಿವ್ ರೆಸಿಪಿ ಹೇಳಲಿದ್ದೇವೆ. ನೀವು ನಿಮಗೆ ಗಡ್ಡ ಚೆನ್ನಾಗಿ ಬೆಳೆಯಬೇಕು ಎಂದು ಬಯಸಿದರೆ ಎಲ್ಲಿ ಕೂದಲು ಬರಬೇಕು ಅಂತಹ ಜಾಗದಲ್ಲಿ ಬೆಳ್ಳುಳ್ಳಿಯನ್ನು ಚೆನ್ನಾಗಿ ಉಜ್ಜಿ . ನೀವು ಬಯಸಿದರೆ, ಲವಂಗ ಮತ್ತು ತೆಂಗಿನ ಎಣ್ಣೆಯನ್ನು ಬೆಳ್ಳುಳ್ಳಿ ರಸದಲ್ಲಿ (garlic juice) ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಬಹುದು.

ತೆಂಗಿನ ಎಣ್ಣೆಯನ್ನು ಹಚ್ಚಿ
ತೆಂಗಿನ ಎಣ್ಣೆ (Coconut oil) ನಮ್ಮ ಕೂದಲಿಗೆ ಪರಿಣಾಮಕಾರಿಯಾಗಿರುವಂತೆಯೇ, ಗಡ್ಡವನ್ನು ಬೆಳೆಸಲೂ ಬಳಸಬಹುದು. ಮುಖಕ್ಕೆ ಎಣ್ಣೆಯನ್ನು ಹಚ್ಚಿದಾಗಲೆಲ್ಲಾ, ಅದನ್ನು ಕೆಳಮುಖ ದಿಕ್ಕಿನಲ್ಲಿ, ಗಡ್ಡದ ದಿಕ್ಕಿನಲ್ಲಿ ಅನ್ವಯಿಸಲು ಪ್ರಾರಂಭಿಸಿ. ನೀವು ಪ್ರತಿದಿನ ರಾತ್ರಿ ಮಲಗುವ ಮೊದಲು ಮುಖವನ್ನು ಎಣ್ಣೆಯಿಂದ ಮಸಾಜ್ ಮಾಡಬಹುದು.

ದಾಲ್ಚಿನ್ನಿ ಮತ್ತು ನಿಂಬೆ ಪೇಸ್ಟ್
ನಿಮ್ಮ ಅಡುಗೆ ಮನೆಯಲ್ಲಿ ಅನೇಕ ವಸ್ತುಗಳಿವೆ. ಅವುಗಳನ್ನು ಮುಖದ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಬಳಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗಡ್ಡ ಬೆಳೆಸುವ ವಿಧಾನ ನಿಮಗೆ ಹೇಳಲಿದ್ದೇವೆ. ನೀವು ಮಾಡಬೇಕಾಗಿರುವುದು ಒಂದು ಟೀಸ್ಪೂನ್ ದಾಲ್ಚಿನ್ನಿಯಲ್ಲಿ ನಿಂಬೆ ರಸ (cinnamon and lemon) ಬೆರೆಸಿ ಪೇಸ್ಟ್ ಮಾಡಿ ಮತ್ತು ಗಡ್ಡದ ಭಾಗಗಳಿಗೆ ಹಚ್ಚಿ.

ಸಾಸಿವೆ ಎಣ್ಣೆ ಮತ್ತು ನೆಲ್ಲಿಕಾಯಿ
ಗಡ್ಡ ಬೆಳೆಸಲು ಒಂದು ಮಾರ್ಗವೆಂದರೆ ಆಮ್ಲಾ ಪುಡಿಯನ್ನು ಸಾಸಿವೆ ಎಣ್ಣೆಯಲ್ಲಿ (mustard oil) ಬೆರೆಸಿ ಹಚ್ಚುವುದು. ಇದು ನಿಮ್ಮ ಗಡ್ಡ ಬೆಳೆಸಲು ಸಹಾಯ ಮಾಡುತ್ತದೆ ಮತ್ತು ಕೆಲವೇ ದಿನಗಳಲ್ಲಿ ಮುಖದ ಮೇಲೆ ಸಣ್ಣ ಕೂದಲುಗಳು ಬರಲು ಪ್ರಾರಂಭಿಸಿರುವುದನ್ನು ನೀವು ನೋಡುತ್ತೀರಿ. ಹಿಂದಿನ ಮಹಿಳೆಯರು ಈ ಎಣ್ಣೆಯನ್ನು ಕೂದಲಿಗೆ ಬಳಸುತ್ತಿದ್ದರು. ಇದರಿಂದಾಗಿ ಅವರ ಕೂದಲು ಉದ್ದ ಮತ್ತು ದಟ್ಟವಾಗಿ ಕಾಣುತ್ತದೆ. ಪುರುಷರು ಸಹ ಇದನ್ನು ಬಳಸುತ್ತಿದ್ದರು. ಆದ್ದರಿಂದ ನೀವು ದಟ್ಟವಾದ ಗಡ್ಡವನ್ನು ಬಯಸಿದರೆ, ಖಂಡಿತವಾಗಿಯೂ ಇದನ್ನು ಟ್ರೈ ಮಾಡಿ.

click me!