2 ಸಾವಿರಕ್ಕಿಂತ ಹೆಚ್ಚು ಯಾವತ್ತೂ ಬಟ್ಟೆಗೆ ವೆಚ್ಚ ಮಾಡಿಲ್ಲ: ಮೃನಾಲ್ ಠಾಕೂರ್

First Published Apr 5, 2024, 12:46 PM IST

ಗಲತ್ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೃನಾಲ್ ಶಾಪಿಂಗ್ ಹಾಗೂ ಬಟ್ಟೆಗಳಿಗೆ ತಾವು ಎಷ್ಟು ವೆಚ್ಚ ಮಾಡುತ್ತಾರೆ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. ನಾನು ತೀರಾ ಹೆಚ್ಚೆಂದರೆ 2 ಸಾವಿರ ರೂಪಾಯಿಗಳ ಬಟ್ಟೆಗಳನ್ನು ಖರೀದಿಸುತ್ತೇನೆ. ಅದೂ ಕೂಡ ಕೆಲವೊಮ್ಮೆ ನನಗೆ ವೇಸ್ಟ್ ಎನಿಸುತ್ತದೆ ಎಂದು ಮೃನಾಲ್ ಹೇಳಿದ್ದಾರೆ.

ಸೀತಾರಾಮ ಸಿನಿಮಾದಿಂದ ಬಹಳಷ್ಟು ಖ್ಯಾತಿ ಗಳಿಸಿದ ನಟಿ ಮೃನಾಲ್ ಠಾಕೂರ್ ನಟನೆಯ ಫ್ಯಾಮಿಲಿ ಸ್ಟಾರ್ ಸಿನಿಮಾ ಇಂದು ಬಿಡುಗಡೆಯಾಗಿದ್ದು, ನಟ ವಿಜಯ ದೇವರಕೊಂಡ ಹಾಗೂ ಮೃನಾಲ್ ನಟನೆಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಸಿನಿಮಾ ಪ್ರಮೋಷನ್‌ಗಾಗಿ ನಟಿ ಮೃನಾಲ್ ಹಲವು ಟಿವಿ ಚಾನಲ್‌ಗಳಲ್ಲಿ ಸಂದರ್ಶನ ನೀಡಿದ್ದು, ತಮ್ಮ ವೈಯಕ್ತಿಕ ಬದುಕಿನ ಹಲವು ವಿಚಾರಗಳ ಬಗ್ಗೆ ನಟಿ ಮಾತನಾಡಿದ್ದಾರೆ.

ಗಲತ್ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೃನಾಲ್ ಶಾಪಿಂಗ್ ಹಾಗೂ ಬಟ್ಟೆಗಳಿಗೆ ತಾವು ಎಷ್ಟು ವೆಚ್ಚ ಮಾಡುತ್ತಾರೆ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. 

ತಾವು ಧರಿಸುವ ಬಟ್ಟೆಗಳ ಬಗ್ಗೆ ಕೇಳಿದಾಗ ಮಾತನಾಡಿದ ಸೀತಾರಾಮ ನಟಿ, ತಾನು ಯಾವತ್ತೂ 2 ಸಾವಿರ ರೂಪಾಯಿಗಿಂತ ಹೆಚ್ಚು ಹಣವನ್ನು ಒಂದು ಬಟ್ಟೆಗೆ ಯಾವತ್ತೂ ವೆಚ್ಚ ಮಾಡುವುದಿಲ್ಲ ಎಂದು ಹೇಳಿದ್ದಾರೆ. 

ಅಲ್ಲದೇ ಬಟ್ಟೆಗೆ ಹೆಚ್ಚೆಚ್ಚು ವೆಚ್ಚ ಮಾಡುವುದನ್ನು ದುಂದುವೆಚ್ಚ ಅಥವಾ ವೇಸ್ಟ್ ಎಂದೇ ನಾನು ಭಾವಿಸುವೆ ಎಂದು ಅವರು ಹೇಳಿದ್ದಾರೆ. 

ಕೆಲವೊಂದು ಬಟ್ಟೆಗಳನ್ನು ನೀವು ಮತ್ತೊಮ್ಮೆ ಧರಿಸುವುದೇ ಇಲ್ಲ,  ನಾನು ಧರಿಸಿರುವ ಈ ಬಟ್ಟೆಗಳು ನನ್ನದಲ್ಲ, ನಾನು ಅವುಗಳನ್ನು ಕೆಲ ಮೂಲಗಳಿಂದ ತೆಗೆದುಕೊಂಡಿದ್ದೇನೆ.

ನಾನು ತೀರಾ ಹೆಚ್ಚೆಂದರೆ 2 ಸಾವಿರ ರೂಪಾಯಿಗಳ ಬಟ್ಟೆಗಳನ್ನು ಖರೀದಿಸುತ್ತೇನೆ. ಅದೂ ಕೂಡ ಕೆಲವೊಮ್ಮೆ ನನಗೆ ವೇಸ್ಟ್ ಎನಿಸುತ್ತದೆ ಎಂದು ಮೃನಾಲ್ ಹೇಳಿದ್ದಾರೆ.

ದುಬಾರಿಯಾಗಿದೆ ಎಂಬ ಕಾರಣಕ್ಕೆ ಆ ಬಟ್ಟೆಗಳನ್ನು ನೀವು ಮತ್ತೆ ಮತ್ತೆ ಧರಿಸಲು ಸಾಧ್ಯವಾಗದು, ನಿಮ್ಮ ವಾರ್ಡ್‌ರೋಬ್‌ನಲ್ಲಿ ಕ್ಲಾಸಿ ಸ್ಟೇಟ್‌ಮೆಂಟ್ ನೀಡುವ  ಬಟ್ಟೆಗಳ ಸಂಗ್ರಹವನ್ನು  ಹೊಂದಿರುವುದು ಒಳ್ಳೆಯದು

ಅದರೆ ಅದಕ್ಕಾಗಿ ಬ್ರಾಂಡ್ ಮೊರೆ ಹೋಗುವುದು ಹಣ ವ್ಯರ್ಥ ಮಾಡಿದಂತೆ, ನಾನು ಆ ಹಣದಲ್ಲಿ ಆಹಾರಕ್ಕೆ, ಕೆಲವು ಸಸ್ಯಗಳು, ಮನೆ ಅಥವಾ ಕೃಷಿ ಭೂಮಿಯಲ್ಲಿ ಹೂಡಿಕೆ ಮಾಡಲು ಬಯಸುವೆ ಎಂದು ಮೃನಾಲ್ ಹೇಳಿದ್ದಾರೆ. 


ಮೃನಾಲ್ ಅವರು ತೆಲುಗಿನ ಸೀತಾರಾಮಂ ಚಿತ್ರದ ಮೂಲಕ ತೆಲುಗು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು ಇದಾದ ನಂತರ ಹಾಯ್ ನಾನಾ ಚಿತ್ರಕ್ಕೆ ಸಹಿ ಹಾಕಿದ್ದರು. ಇಂದು ಬಿಡುಗಡೆಯಾದ ಫ್ಯಾಮಿಲಿ ಸ್ಟಾರ್ ಅವರ ಮೂರನೇ ತೆಲುಗು ಚಿತ್ರವಾಗಿದೆ. 

ಇತ್ತೀಚಿನ ಸಂದರ್ಶನವೊಂದರಲ್ಲಿ, ಮೃನಾಲ್ ಠಾಕೂರ್ ಅವರು ತಮ್ಮ ಫ್ಯಾಷನ್ ಆಯ್ಕೆಗಳ ಬಗ್ಗೆ ತಮ್ಮ ನಿಲುವನ್ನು ಹಂಚಿಕೊಂಡಿದ್ದರು, ಶ್ರೀಮಂತಿಕೆಯ ಬದಲು ಸರಳತೆ ಮತ್ತು ಮಿತವ್ಯಯವನ್ನು ಅವರು ಒತ್ತಿ ಹೇಳಿದರು. ನಾನು ಬಟ್ಟೆಗಾಗಿ ಇದುವರೆಗೆ ಖರ್ಚು ಮಾಡಿರುವ ಗರಿಷ್ಠ ಹಣ 2,000 ರೂಪಾಯಿಗಳು,  ಬಜೆಟ್ ಸ್ನೇಹಿ ಮತ್ತು ಕಡಿಮೆ ಸೊಬಗಿಗೆ ತಾವು ಮೊದಲ ಆದ್ಯತೆ ನೀಡುವುದಾಗಿ ಅವರು ಹೇಳಿದ್ದರು. 

ಇಂದು ಬಿಡುಗೆಯಾಗಿರುವ ಫ್ಯಾಮಿಲಿ ಸ್ಟಾರ್ ಚಿತ್ರವನ್ನು ಪರಶುರಾಮ್ ಪೆಟ್ಲ ನಿರ್ದೇಶಿಸಿದ್ದಾರೆ  ದಿಲ್ ರಾಜು ಮತ್ತು ಶಿರಿಶ್ ಇದಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಈ ಚಿತ್ರದೊಂದಿಗೆ ನಟ ವಿಜಯ್ ದೇವರಕೊಂಡ ಮತ್ತೊಮ್ಮೆ ಚಿತ್ರ ನಿರ್ಮಾಪಕ ಪರಶುರಾಮ್ ಪೆಟ್ಲಾ ಅವರೊಂದಿಗೆ ಕೆಲಸ ಮಾಡಿದ್ದಾರೆ.  ಈ ಸಿನಿಮಾಗಿಂತ ಮೊದಲು ಗೀತ ಗೋವಿಂದಂ ಸಿನಿಮಾವನ್ನು ಪರಶುರಾಮ್ ಪೆಟ್ ನಿರ್ದೇಶಿಸಿದ್ದರು. ಇದರಲ್ಲಿ ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟಿಸಿದ್ದರು. ಇದು ಸೂಪರ್ ಹಿಟ್ ಆಗಿತ್ತು.

click me!