ಟ್ರೆಡಿಶನಲ್ ಲುಕ್‌ನಲ್ಲಿ 'ಶ್ರಾವಣಿ ಸುಬ್ರಹ್ಮಣ್ಯ' ನಟಿ ಆಸಿಯಾ, ಥೇಟ್ ಅಂಬಾನಿ ಸೊಸೆಯಂತೆ ಕಾಣ್ತಿದ್ದಾರಂತೆ!

First Published | Apr 6, 2024, 1:02 PM IST

ಝೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಶ್ರಾವಣಿ ಸುಬ್ರಹ್ಮಣ್ಯ. ಧಾರಾವಾಹಿಯಲ್ಲಿ ಆಸಿಯಾ ಫಿರ್ದೋಸ್ ಶ್ರಾವಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಆಸಿಯಾ ತಮ್ಮ ಟ್ರೆಡಿಶನಲ್ ಲುಕ್‌ನ ಫೋಟೋವನ್ನು ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಝೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಹೊಸ ಸೀರಿಯಲ್‌ಗಳಲ್ಲೊಂದು ಶ್ರಾವಣಿ ಸುಬ್ರಹ್ಮಣ್ಯ. ಧಾರಾವಾಹಿಯಲ್ಲಿ ಆಸಿಯಾ ಫಿರ್ದೋಸ್ ಶ್ರಾವಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಆಸಿಯಾ ಫಿರ್ದೋಸ್ ಯಾವಾಗಲೂ ತಮ್ಮ ಸುಂದರವಾದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಟ್ರೆಡಿಶನಲ್ ಲುಕ್‌ನ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Tap to resize

ಗೋಲ್ಡನ್ ಲಂಗ, ಬ್ಲೌಸ್ ಹಾಗೂ ರೆಡ್ ದುಪ್ಪಟ್ಟಾದಲ್ಲಿ ಆಸಿಯಾ ಮಿಂಚಿದ್ದಾರೆ. ಇದಕ್ಕೆ ಗ್ರ್ಯಾಂಡ್ ಆದ ಆಭರಣಗಳನ್ನು ಸಹ ಧರಿಸಿ ಅದ್ಭುತವಾಗಿ ಕಾಣುತ್ತಿದ್ದಾರೆ. ನೆಟ್ಟಿಗರು ಆಸಿಯಾ ಲುಕ್ ನೋಡಿ ಥೇಟ್ ಅಂಬಾನಿ ಕಿರಿ ಸೊಸೆ ರಾಧಿಕಾ ಮರ್ಚೆಂಟ್ ಕಾಣ್ತಿದ್ದೀರಿ ಎಂದು ಹೊಗಳಿದ್ದಾರೆ.

ಕನ್ಯಾಕುಮಾರಿ ಧಾರಾವಾಹಿಯಲ್ಲಿ ಕನ್ನಿಕಾ ಆಗಿ ಶ್ರೀಮಂತ ಮನೆತನದ ದೈವಭಕ್ತ ಹುಡುಗಿ ಮತ್ತು ದೇವಿಯಾಗಿ ಕಾಣಿಸಿಕೊಂಡ ಆಸಿಯಾ ಫಿರ್ದೋಸ್ ಇದೀಗ ಶ್ರಾವಣಿಯಾಗಿ ಜನಮನ ಗೆದ್ದಿದ್ದಾರೆ. 

ಕನ್ಯಾಕುಮಾರಿ ಧಾರಾವಾಹಿಯಲ್ಲಿ ಆಸಿಯಾಗೆ ಜೋಡಿಯಾಗಿ ನಟಿಸಿದ್ದ ಯಶ್ವಂತ್ ಗೌಡ (Yashwanth Gowda) ಅವರು ತೆಲುಗು ಕಿರುತೆರೆಯಲ್ಲಿ ಗಟ್ಟಿಮೇಳ ಧಾರಾವಾಹಿ ನಾಯಕಿ ಅಮೂಲ್ಯ ಜೊತೆಗೆ ನಟಿಸಿದ್ದ ಅಮ್ಮಾಯಿಗಾರು ಧಾರಾವಾಹಿಯ ರಿಮೇಕ್ ಆಗಿರುವ ಕನ್ನಡದ ಶ್ರಾವಣಿ ಸುಬ್ರಹ್ಮಣ್ಯ ದಲ್ಲಿ ಇದೀಗ ಶ್ರಾವಣಿಯಾಗಿ ಆಸಿಯಾ ನಟಿಸುತ್ತಿದ್ದಾರೆ. 

ತೆಲುಗಿನಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಧಾರಾವಾಹಿ ಕನ್ನಡದಲ್ಲಿ ಈಗಾಗಲೇ ಪ್ರಸಾರವಾಗಿ ಕೆಲ ದಿನಗಳು ಕಳೆದಿದ್ದು, ವೀಕ್ಷಕರಿಗೆ ಕಥೆ ಹಾಗೂ ಶ್ರಾವಣಿಯಾಗಿ ಆಸಿಯಾ ನಟನೆ ಎರಡೂ ಸಿಕ್ಕಾಪಟ್ಟೆ ಹಿಡಿಸಿದೆ. ಶ್ರೀಮಂತ ಮನೆಯಲ್ಲಿ ಹುಟ್ಟಿದರೂ ಅಪ್ಪನ ಪ್ರೀತಿಗೆ ಹಂಬಲಿಸುವ ಮಗಳಾಗಿ ಆಸಿಯಾ ಅದ್ಭುತವಾಗಿ ನಟಿಸಿದ್ದಾರೆ. 

ಅಪ್ಪನ ಪ್ರೀತಿಯನ್ನು ಹೇಗಾದರೂ ಪಡೆಯಬೇಕು ಎಂದು ಹಂಬಲಿಸುವ ಶ್ರಾವಣಿ ಒಂಥರಾ ಎಡವಟ್ಟು ರಾಣಿ, ಪದೇ ಪದೇ ತಪ್ಪುಗಳನ್ನು ಮಾಡುವ ಮೂಲಕ ಅಪ್ಪನಿಂದ ಬೈಸಿಕೊಳ್ಳುತ್ತಲೇ ಇರುತ್ತಾಳೆ. ಆದರೂ ಛಲ ಬಿಡದೆ ಒಂದಲ್ಲ ಒಂದು ಸಾಹಸ ಮಾಡುತ್ತಿರುತ್ತಾಳೆ ಶ್ರಾವಣಿ. 

ಶಿಕ್ಷಣ ಮಂತ್ರಿಯವರ ಮಗಳಾಗಿದ್ದರು ಓದಿನಲ್ಲಿ ಹಿಂದೆ ಬಿದ್ದಿರುವ ಶ್ರಾವಣಿ, ಪಾಸ್ ಆಗೋದಕ್ಕೆ ಹರಕೆ ಹೊತ್ತು, ಯಾವುದೋ ಸ್ವಾಮಿಗಳ ಮಾತು ಕೇಳಿ ದೇವರ ಮುಂದೆ ನಿಂತು ಪೂಜೆ ಮಾಡುವ ಪೆದ್ದು ಹುಡುಗಿ. ಫಿಸಿಕ್ಸ್ ಪರೀಕ್ಷೆಗೆ ಕೆಮೆಸ್ಟ್ರಿ ಓದಿ ಮತ್ತೆ ಫೈಲ್ ಆಗುವ ಶ್ರಾವಣಿಯ ಮುದ್ದು ಪೆದ್ದು ತನ ವೀಕ್ಷಕರಿಗೆ ಇಷ್ಟವಾಗಿದೆ. 

ಶ್ರಾವಣಿ ಪಾತ್ರದಲ್ಲಿ ಆಸಿಯಾ ಫಿರ್ದೋಸ್ ಅದ್ಭುತವಾಗಿ ನಟಿಸುತ್ತಿದ್ದು, ವೀಕ್ಷಕರೂ ಕೂಡ, ಈ ಪಾತ್ರಕ್ಕೆ ನಿಮ್ಮ ಆಯ್ಕೆ ಸರಿಯಾಗಿಯೇ ಇದೆ ಎಂದಿದ್ದಾರೆ. ಕನ್ಯಾಕುಮಾರಿ ಬಳಿಕ ದ್ವಂಧ್ವ ಎನ್ನುವ ಸಿನಿಮಾದಲ್ಲಿ, ಮಿಲನ ಎನ್ನುವ ವೆಬ್ ಸೀರೀಸ್ ನಲ್ಲೂ ನಟಿಸಿದ್ದಾರೆ ಆಸಿಯಾ.

ಇನ್ನು ಕೋಮಲ್ ಜೊತೆಗೆ ಕಾಲಾಯ ನಮಃ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಲಿದ್ದಾರೆ. ಇದರ ಮಧ್ಯೆ ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ ಆಸಿಯಾ. 

Latest Videos

click me!