ಸ್ಟೈಲಿಶ್ ಲುಕ್ ಗಾಗಿ ಲೆಹೆಂಗಾ ಜೊತೆ ಈ ರೀತಿ ಬ್ಲೌಸ್ ಕ್ಯಾರಿ ಮಾಡಿ

First Published Jun 8, 2022, 7:18 PM IST

ಲೆಹೆಂಗಾದೊಂದಿಗೆ ಯಾವ ರೀತಿಯ ಚೋಲಿ ಬ್ಲೌಸ್  (choli blouse) ನಿಮ್ಮನ್ನು ಹೆಚ್ಚು ಸ್ಟೈಲಿಶ್ ಆಗಿ ಮತ್ತು ಎಷ್ಟು ಜನರಿದ್ದರೂ ಸಹ ಅವರ ಮಧ್ಯೆ ಎದ್ದು ಕಾಣುವಂತೆ ಮಾಡುತ್ತೆ. ಆದ್ದರಿಂದ ಮದುಮಗಳ ಸಹೋದರಿ ಅಥವಾ ಸ್ನೇಹಿತರು ಇಂತಹ ಲೆಹೆಂಗಾ ಚೋಲಿ ಧರಿಸುವ ಮೂಲಕ ಸ್ಟೈಲಿಶ್ ಲುಕ್ ಪಡೆಯಬಹುದು. 

ಲೆಹೆಂಗಾಗಳಿಗಾಗಿ ಬ್ಲೌಸ್ ವಿನ್ಯಾಸಗಳನ್ನು ಹುಡುಕುವುದು ನಿಮಗೆ ಕಷ್ಟದ ಕೆಲಸವಾಗಿರಬಹುದು ಅಲ್ವಾ? ಇಲ್ಲಿ ನಾವು ನಿಮಗೆ ಕೆಲವೊಂದು ಹೆಚ್ಚು ಸುಂದರವಾದ ಮತ್ತು ಸ್ಟೈಲಿಶ್ ಆಗಿರುವ ಲೆಹೆಂಗಾ ಚೋಲಿಯನ್ನು (lehenga choli)ಕಾಣಬಹುದು. ಇಲ್ಲಿ ಸುಂದರವಾದ ಲೆಹೆಂಗಾ ಚೋಲಿ ಮತ್ತು ಬ್ಲೌಸ್ ಡಿಸೈನ್ ಬಗ್ಗೆ ಮಾಹಿತಿ ನೀಡಲಾಗಿದೆ.

ಬೇಸಿಗೆಗೆ ಆರಾಮದಾಯಕ ಬಟ್ಟೆ ಆರಿಸಿ ಮತ್ತು ನಂತರ ಅದಕ್ಕೆ ತಕ್ಕಂತೆ ವಿನ್ಯಾಸಗೊಳಿಸಿ. ನೀವು ಜಾರ್ಜೆಟ್ ಅಥವಾ ಶಿಫಾನ್ ಫ್ಯಾಬ್ರಿಕ್ (shiffon fabric) ಬ್ಲೌಸ್ ಆಯ್ಕೆ ಮಾಡುತ್ತಿದ್ದರೆ, ತೋಳಿನಲ್ಲಿ ಲೈನಿಂಗ್ ಅನ್ನು ಹಾಕಬೇಡಿ. ಇದು ಚೋಲಿಯ ಲುಕ್ ಹೆಚ್ಚಿಸುತ್ತೆ, ಅಲ್ಲದೆ ಬೇಸಿಗೆಯಲ್ಲಿ ಸ್ಟೈಲಿಶ್ ಲುಕ್ ನೀಡುತ್ತೆ.

1. ಡೀಪ್ ನೆಕ್ ಫುಲ್ ಸ್ಲೀವ್ಸ್
ಈ ರೀತಿಯ ಕೆಲವು ಫುಲ್ ಸ್ಲೀವ್ಸ್ ಡೀಪ್ ವೀ ನೆಕ್ ಬ್ಲೌಸ್ (full sleeve deep neck) ಲೆಹೆಂಗಾದೊಂದಿಗೆ ಸ್ಟೈಲಿಶ್ ಆಗಿ ಕಾಣುತ್ತೆ. ಯಾವಾಗಲೂ ಡೀಪ್ ನೆಕ್ ಧರಿಸಿದ್ರೆ ಅದನ್ನು ಕಾನ್ಫಿಡೆನ್ಸ್ ನಿಂದ ಕ್ಯಾರಿ ಮಾಡಿ. ನೀವು ಬಯಸಿದರೆ,  ಡೀಪ್ ಫ್ಲಂಜಿಂಗ್ ನೆಕ್ ಕೂಡ ಟ್ರೈ ಮಾಡಬಹುದು. ಇದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ನಲ್ಲಿದೆ. ಬಾಲಿವುಡ್ ದಿವಾಸ್ ಕೂಡ ಅಂತಹ ಬ್ಲೌಸ್ ಕ್ಯಾರಿ ಮಾಡೋದು ಕಾಣಬಹುದು. 

2. ರಫಲ್ ಸ್ಲೀವ್ ಬ್ಲೌಸ್
ರಫಲ್ ಸ್ಲೀವ್ ಹೊಂದಿರುವ ಬ್ಲೌಸ್ ಲೆಹೆಂಗಾಗಳೊಂದಿಗೆ ಸಾಕಷ್ಟು ವಿಭಿನ್ನವಾಗಿ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ. ನೀವು ಅಂತಹ ಬ್ಲೌಸ್ ಅನ್ನು ಲೆಹೆಂಗಾದೊಂದಿಗೆ ನಿಶ್ಚಿತಾರ್ಥ ಅಥವಾ ಕಾಕ್ ಟೇಲ್ ಪಾರ್ಟಿಗೆ ಕ್ಯಾರಿ ಮಾಡಬಹುದು. 

3. ನೂಡಲ್ ಸ್ಟ್ರಾಪ್ ಬ್ಲೌಸ್
ಫಾಯಿಲ್ ಪೇಪರ್ ವರ್ಕ್ ನೊಂದಿಗೆ ನೂಡಲ್ ಸ್ಟ್ರಾಪ್ ಬ್ಲೌಸ್ (noodle strap blouse) ಸಹ ನಿಮ್ಮ ಲುಕ್ ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತೆ. ಆದರೆ ನಿಮ್ಮ ಕೈಗಳನ್ನು ಟೋನ್ ಮಾಡಿದಾಗ ಮಾತ್ರ ಸ್ಲೀವ್ ಲೆಸ್ ಆಯ್ಕೆಯನ್ನು ಆರಿಸಿ. ಇಲ್ಲದಿದ್ದರೆ, ಇದು ಲುಕ್ ನ್ನು ಹಾಳುಮಾಡಬಹುದು.

4. ಬ್ಯಾಕ್ ಲೆಸ್ ಬ್ಲೌಸ್ : 
ರಿಸೆಪ್ಶನ್ ಪಾರ್ಟಿಗೆ ನೀವು ಸ್ಟೈಲಿಶ್ ಆಗಿ ಕಾಣಲು ಬಯಸಿದ್ರೆ ಆವಾಗ ಬ್ಯಾಕ್ ಲೆಸ್ ಬ್ಲೌಸ್  (back less blouse)ಕ್ಯಾರಿ ಮಾಡಿ. ಇದು ಬೋಲ್ಡ್ ಜೊತೆಗೆ ಸ್ಟೈಲಿಶ್ ಲುಕ್ ನೀಡುತ್ತೆ. ಇದರಿಂದ ನೀವು ಎಲ್ಲರ ನಡುವೆ ಎದ್ದು ಕಾಣುವಿರಿ. ನಿಮ್ಮ ಲುಕ್ ಗೆ ಹುಡುಗರು ಬೋಲ್ಡ್ ಆಗೋದು ಖಂಡಿತಾ. 

5. ರೌಂಡ್ ನೆಕ್ ಬ್ಲೌಸ್ : 
ಇಂತಹ ಬ್ಲೌಸ್ ನಿಮ್ಮ ಸಿಂಪಲ್ ಲೆಹೆಂಗಾವನ್ನು ಸಹ ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತೆ.ಇದನ್ನು ನೀವು ಸ್ಟೈಲಿಶ್ ಆಗಿ ಕ್ಯಾರಿ ಮಾಡಬಹುದು. ನೀವು ಡೀಪ್ ರೌಂಡ್ ನೆಕ್ (round neck) ಮಾಡಬಹುದು ಅಥವಾ ಸಾದಾ ರೌಂಡ್ ನೆಕ್ ಸಹ ಟ್ರೈ ಮಾಡಬಹುದು. ಯಾವುದೇ ಆದರೂ ನಿಮ್ಮ ಲುಕ್ ಮಾತ್ರ ವಾವ್ ಎನಿಸುವಷ್ಟು ಚೆನ್ನಾಗಿ ಕಾಣುತ್ತೆ. 
 

click me!