ಬಾಳೆಲೆ, ಗೋಣಿಚೀಲಾನೇ ಉಡುಪು ! ಫ್ಯಾಷನ್ ಜಗತ್ತಲ್ಲಿ ಕಣ್ಮನ ಸೆಳೆಯುತ್ತಿದೆ ಡಿಫರೆಂಟ್ ದಿರಿಸು

First Published | Jun 11, 2022, 4:33 PM IST

ಡಿಫರೆಂಟ್ ಆಗಿ ಡ್ರೆಸ್ (Dress) ಮಾಡೋದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದ್ರೆ ಇದಕ್ಕೋಸ್ಕರ ಲಕ್ಷಗಟ್ಟಲೆ ವ್ಯಯಿಸೋದು ಅಂದ್ರೆ ಯಾರಿಗೂ ಇಷ್ಟವಿರಲ್ಲ. ಆದ್ರೆ ಇಲ್ಲೊಂದಷ್ಟು ಮಂದಿ ನಾವು ದಿನನಿತ್ಯ ಬಳಸೋ ವಸ್ತು (Things)ಗಳಿಂದಲೇ ಸುಂದರ ಉಡುಪನ್ನು ತಯಾರಿಸಿದ್ದು, ಇದು ಎಲ್ಲೆಡೆ ವೈರಲ್ (Viral) ಆಗ್ತಿದೆ.

Photo courtesy: Rona

ಇದೇನಿದ್ರೂ ಫ್ಯಾಷನ್‌ (Fashion) ಜಮಾನ. ಇಲ್ಲಿ ಎಲ್ಲರೂ ಸ್ಟೈಲಿಶ್ ಆಗಿರಬೇಕೆಂದೇ ಬಯಸುತ್ತಾರೆ. ಆಕರ್ಷಕ ದಿರಿಸು, ಆಭರಣ, ಚಪ್ಪಲಿ, ಹಾರಗಳನ್ನು ಧರಿಸುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂ. ವ್ಯಯಿಸುತ್ತಾರೆ ಕೂಡಾ. ಹಿಂದೆಲ್ಲಾ ಅತ್ಯಾಕರ್ಷಕವಾಗಿ ಡಿಸೈನ್ ಮಾಡಿದ್ದ ಉಡುಪಿ ಅಂದ್ರೆ ಫ್ಯಾಷನೆಬಲ್‌ ಎಂದು ಗುರುತಿಸಕೊಳ್ಳುತ್ತಿತ್ತು. ಆದ್ರೆ ಇತ್ತೀಚಿಗೆ ಫ್ಯಾಷನ್ ಹೆಸರಿನಲ್ಲಿ ಚಿತ್ರ ವಿಚಿತ್ರ ಡ್ರೆಸ್‌ಗಳು ವೈರಲ್ ಆಗ್ತಿವೆ.

Photo courtesy: Rona

ಹರಿದ ಬಟ್ಟೆಗಳು ಸಹ ಟ್ರೆಂಡ್ ಆಗುತ್ತಿವೆ. ಹರಿದ ಪ್ಯಾಂಟ್, ಜಾಕೆಟ್‌, ಶರ್ಟ್ ಹಾಕಿದರೆ ಅದನ್ನೇ ಲೇಟೆಸ್ಟ್‌ ಟ್ರೆಂಡ್ ಎನ್ನಲಾಗುತ್ತಿದೆ. ಫ್ಯಾಷನ್ ಹೆಸರಿನಲ್ಲಿ ಬಟ್ಟೆ ತಯಾರಿಸಲು ಅದೆಷ್ಟೋ ವಸ್ತುಗಳನ್ನು, ಉಣ್ಣೆಯನ್ನು ಬಳಸಿಕೊಳ್ಳಲಾಗುತ್ತಿತ್ತು. ಆದ್ರೆ ಇಲ್ಲಿ ಕೆಲವರು ಪರಿಸರದಲ್ಲಿ ದೊರಕುವ ಎಲೆಗಳು, ತರಗೆಲೆಗಳು, ಕೆಲವು ವಸ್ತುಗಳನ್ನು ಬಳಸಿ ಸುಂದರ ಉಡುಪನ್ನು ತಯಾರಿಸಿದ್ದಾರೆ. 

Latest Videos


Photo courtesy: Rona

ಥೈಲ್ಯಾಂಡ್‌ನಿಂದ ಬರುತ್ತಿರುವ ಮರುಬಳಕೆಯ ವಸ್ತುವಿನಿಂದ ಅವ್ರು ಈ ಸುಂದರ ಉಡುಪುಗಳನ್ನು ತಯಾರಿಸುತ್ತಿದ್ದಾರೆ. ಇದರಲ್ಲಿ ಗೋಣಿಯಿಂದ ತಯಾರಿಸಿದ ಗೌನ್, ಎಲೆಯಿಂದ ತಯಾರಿಸಿದ ಸ್ಕರ್ಟ್ ಟಾಪ್ ಸಹ ಸೇರಿದೆ. ಮಾತ್ರವಲ್ಲ ತೆಂಗಿನ ಗರಿಗಳನ್ನು ಬಿಡಿಸಿ ಅಗಲವಾಗಿ ತಯಾರಿಸಿರುವ ಅಗಲವಾದ ಅಟ್ರ್ಯಾಕ್ಟಿಕ್ ಎಲ್ಲರ ಗಮನ ಸೆಳೆದಿದೆ. 

Photo courtesy: Rona

ಮರಗಳಿಂದ ಬಿದ್ದ ಯಾರಿಗೂ ಬೇಡವಾದ ತರಗೆಲೆಯಿಂದ ತಯಾರಿಸಿದ ಸ್ಲಿಟ್ ಬಾಟಮ್ ಹಾಗೂ ಹಾಫ್ ಶೋಲ್ಡರ್ ಟಾಪ್‌ ಸಹ ಸಹ ತುಂಬಾ ಸುಂದರವಾಗಿದೆ. ನ್ಯೂಡ್‌ ಕಲರ್‌ನ ಈ ಡ್ರೆಸ್ ಹೆಚ್ಚು ಫ್ಯಾಷನೆಬಲ್‌ ಆಗಿ ಎಲ್ಲರ ಗಮನ ಸೆಳೆಯುತ್ತಿದೆ.

Photo courtesy: Rona

ಅದರಲ್ಲೂ ಬಾಳೆಲೆಯನ್ನು ಬಳಸಿ ಸಿದ್ಧಪಡಿಸಿರುವ ಸ್ಕರ್ಟ್‌ ಹಾಗೂ ಟಾಪ್ ಎಲ್ಲರ ಗಮನ ಸೆಳೀತಿದೆ. ಮಾತ್ರವಲ್ಲ ತೆಂಗಿನ ಗರಿಗಳನ್ನು ಬಿಡಿಸಿ ಅಗಲವಾಗಿ ತಯಾರಿಸಿರುವ ಅಗಲವಾದ ಗೌನ್‌ ಸಹ ಆಕರ್ಷಕವಾಗಿದೆ.

fashion dress

ಬೆರಗುಗೊಳಿಸುವ ಡ್ರೆಸ್‌ಗಳನ್ನು ಮಾಡಲು ಪಾಶ್ಚಿಮಾತ್ಯ ಪ್ರಪಂಚದ ಎಲ್ಲಾ ಸೌಕರ್ಯಗಳು ನಿಮಗೆ ಅಗತ್ಯವಿಲ್ಲ ಎಂದು ಈ ಪ್ರತಿಭಾವಂತ ವಿನ್ಯಾಸಕ ತೋರಿಸಿಕೊಟ್ಟಿದ್ದಾರೆ. ಸುಚನತ್ಡಾ ಕೇವ್ಸಾ-ಂಗಾ ಅವರು ಕೆಲವೊಂದು ಉಡುಪುಗಳನ್ನು ನೈಸರ್ಗಿಕ ಮತ್ತು ಮರುಬಳಕೆಯ ವಸ್ತುಗಳನ್ನು ಬಳಸಿ ತಯಾರಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

click me!