ಸ್ಲಿಮ್, ಫಿಟ್ ಆಗಿ ಕಾಣಲು ಧರಿಸೋ ಶೇಪ್ ವೇರ್ ತರುತ್ತೆ ಆರೋಗ್ಯಕ್ಕೆ ಕುತ್ತು!

First Published May 20, 2023, 3:41 PM IST

ಶೇಪ್ ವೇರ್ ಬಹಳ ಕಡಿಮೆ ಸಮಯದಲ್ಲಿ ತುಂಬಾ ಜನಪ್ರಿಯತೆ ಪಡೆದಿದೆ. ಇದಲ್ಲದೆ, ಈ ಶೇಪ್ ವೇರ್ ವಿವಿಧ ದೇಹದ ಪ್ರಕಾರದ ಗಾತ್ರಗಳು ಮತ್ತು ಬಣ್ಣಗಳಲ್ಲಿ ಇರುತ್ತವೆ, ಇದನ್ನು ನಿಮ್ಮ ಅನುಕೂಲಕ್ಕೆ ವಂತಕ್ಕೆ ಅನುಗುಣವಾಗಿ ಖರೀದಿಸಬಹುದು.

ಪ್ರತಿಯೊಬ್ಬ ಹುಡುಗಿಯೂ ಭಾರತೀಯ ಉಡುಗೆಯಿಂದ ಪಾಶ್ಚಿಮಾತ್ಯರವರೆಗೆ (Indian to westerwear) ಪ್ರತಿಯೊಂದು ಉಡುಗೆಯಲ್ಲಿ ಪರಿಪೂರ್ಣವಾಗಿ ಕಾಣಲು ಬಯಸುತ್ತಾಳೆ. ಆದರೂ, ಹೆಚ್ಚಿನ ಮಹಿಳೆಯರ ಈ ಕನಸು ಕೇವಲ ಕನಸಾಗಿ ಉಳಿದಿದೆ ಮತ್ತು ಈ ಅಪೂರ್ಣ ಕನಸನ್ನು ಪೂರೈಸಲು, ಮಾರುಕಟ್ಟೆಯಲ್ಲಿ ಬಂದಿರುವ ಹೊಸ ಟ್ರೆಂಡ್ ಶೇಪ್ ವೇರ್. ಅನಗತ್ಯ ದೇಹದ ಕೊಬ್ಬನ್ನು ಮರೆಮಾಡಲು ಮತ್ತು ನಿಮ್ಮ ನೆಚ್ಚಿನ ಉಡುಗೆಗೆ ಹೊಂದಿಕೊಳ್ಳಲು ಈ ಶೇಪ್ ವೇರ್ ತುಂಬಾ ಪರಿಣಾಮಕಾರಿ.

ಬಹಳ ಕಡಿಮೆ ಸಮಯದಲ್ಲಿ, ಈ ಶೇಪ್ ವೇರ್ (shapewear) ಜನಪ್ರಿಯತೆ ಪಡೆದಿದೆ.  ಪಾರ್ಟಿ ಅಥವಾ ವಿಶೇಷ ಸಂದರ್ಭದಲ್ಲಿ, ಈ ಶೇಪ್ ವೇರ್ ಸಹಾಯದಿಂದ, ಮಹಿಳೆಯರು ತಮ್ಮ ನೆಚ್ಚಿನ ಉಡುಪನ್ನು ಧರಿಸುವ ಮೂಲಕ ಕಾನ್ಫಿಡೆನ್ಸ್ ಅನುಭವಿಸುತ್ತಾರೆ. ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
 

ಕೆಲವರು, ಇದನ್ನು ಪ್ರತಿದಿನ ಧರಿಸುವ ಅಭ್ಯಾಸ ರೂಢಿ ಮಾಡಿಕೊಂಡಿದ್ದಾರೆ. ಅದು ಕಚೇರಿಗೆ ಹೋಗುವ ಮಹಿಳೆಯರಾಗಿರಲಿ ಅಥವಾ ಕಾಲೇಜಿಗೆ ಹೋಗುವ ಹುಡುಗಿಯರಾಗಿರಲಿ, ಅವರಲ್ಲಿ ಕೆಲವರು ಇದನ್ನು ಪ್ರತಿದಿನ ಧರಿಸುತ್ತಾರೆ. ಇಂದು ಈ ಲೇಖನದಲ್ಲಿ, ಪ್ರತಿದಿನ ಶೇಪ್ ವೇರ್ ಧರಿಸುವುದು ಆರೋಗ್ಯಕರ ಆಯ್ಕೆಯೇ ಅಥವಾ ಅಲ್ಲವೇ ಎಂದು ತಿಳಿಯೋಣ.

ಶೇಪ್ ವೇರ್ ಧರಿಸಿದ ನಂತರ, ನಮ್ಮ ದೇಹವು ಆಕಾರದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ಈ ಶೇಪ್ ವೇರ್‌ನಿಂದಾಗಿ ಹೆಚ್ಚುವರಿ ಫ್ಯಾಟ್ ಕಾಣಿಸಿಕೊಳ್ಳೋದಿಲ್ಲ. ಈ ರೀತಿಯಾಗಿ ಗಂಟೆಗಳವರೆಗೆ ಸ್ನಾಯುಗಳು ಕುಗ್ಗುವುದು (weak muscles) ಆರೋಗ್ಯಕ್ಕೆ ಸೂಕ್ತವೇ ಅಥವಾ ಅಲ್ಲವೇ ಎಂದು ತಿಳಿದುಕೊಳ್ಳುವುದು ಅವಶ್ಯಕ. 

ಪ್ರತಿದಿನ ಶೇಪ್ ವೇರ್ ಧರಿಸುವುದು ಆರೋಗ್ಯಕರ ಅಭ್ಯಾಸವೇ?
ಸ್ಲಿಮ್ ಮತ್ತು ಫಿಟ್ ಆಗಿ ಕಾಣಲು ಬಯಸುವ ಮಹಿಳೆಯರು ಪ್ರತಿದಿನ ಗಂಟೆಗಳ ಕಾಲ ಶೇಪ್ ವೇರ್ ಧರಿಸುತ್ತಾರೆ. ಆದರೆ ಪ್ರತಿದಿನ ಶೇಪ್ ವೇರ್ ಧರಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ತಿಳಿಸಿದ್ದಾರೆ. ಇದಲ್ಲದೆ, ಈ ಕಾರಣದಿಂದಾಗಿ, ದೇಹದ ಪ್ರಮುಖ ಅಂಗಗಳ ಮೇಲೆ ಬಿಗಿತ ಉಂಟಾಗುತ್ತದೆ, ಇದು ಜೀರ್ಣಕ್ರಿಯೆ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ಉಸಿರಾಟ ಮತ್ತು ರಕ್ತ ಪರಿಚಲನೆಯಲ್ಲಿ (blood circulation) ತೊಂದರೆಗಳು ಉಂಟಾಗಬಹುದು ಎಂದು ಸಹ ತಿಳಿಸಿದ್ದಾರೆ.  

ಶೇಪ್ ವೇರ್ ಎಷ್ಟು ಸಮಯ ಬಳಸುವುದು ಸುರಕ್ಷಿತ?
ವಿಶೇಷ ಸಂದರ್ಭಗಳಲ್ಲಿ ಮಾತ್ರ ಶೇಪ್ ವೇರ್ ಧರಿಸುವುದು ಸೂಕ್ತ, ಆದರೆ ಅದನ್ನು ದೀರ್ಘಕಾಲ ಬಳಸುವುದು ಉತ್ತಮವಲ್ಲ. ಆವಾಗವಾಗ ಅದಕ್ಕೆ ವಿರಾಮ ನೀಡಬೇಕು. ಇದರಿಂದ ದೇಹವು ಮುಕ್ತವಾಗಿ ಉಸಿರಾಡಲು ಮತ್ತು ಚೇತರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಶೇಪ್ ವೇರ್ ಆಯ್ಕೆ ಮಾಡುವುದು ಹೇಗೆ?
ಅನೇಕ ಜನರು ತಮಗಾಗಿ ಪರ್ಫೆಕ್ಟ್ ಶೇಪ್ ವೇರ್ ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವರಿಗೆ ಅವುಗಳ ಗಾತ್ರ ತಿಳಿದಿಲ್ಲ. ಇದಲ್ಲದೆ, ಕೆಲವರು ತಮ್ಮ ಫಿಟ್ಟಿಂಗ್‌ಗಳಿಂದ ಸಣ್ಣ ಗಾತ್ರಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಅವರ ದೇಹವು ಇನ್ನಷ್ಟು ಬಿಗಿಯಾಗಿ ಕಾಣುತ್ತದೆ. ಹಾಗಾಗಿ ಸರಿಯಾದ ಗಾತ್ರ ಆರಿಸಿ ಮತ್ತು ನಿಮಗೆ ಸರಿ ಹೊಂದುತ್ತಾ ನೋಡಿ, ತುಂಬಾ ಬಿಗಿಯಾದ ಸ್ಟೈಲ್‌ಗಳನ್ನು ತಪ್ಪಿಸಿ.

ಶೇಪ್ ವೇರ್‌ನಿಂದ ಏನೆಲ್ಲಾ ಅಪಾಯ ಉಂಟಾಗಬಹುದು?  (side effects of shapewear)
ಶೇಪ್ ವೇರ್ ದೈನಂದಿನ ಬಳಕೆಗೆ ಸಂಬಂಧಿಸಿದ ಅನೇಕ ಅಪಾಯಗಳಿವೆ.  ದೀರ್ಘಕಾಲದವರೆಗೆ ಹೆಚ್ಚು ಬಿಗಿ ಮತ್ತು ಸಂಕುಚಿತ ಉಡುಪು ಧರಿಸುವುದರಿಂದ ಅನೇಕ ಅಪಾಯಗಳಿವೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಆಕ್ಯುಪೇಷನಲ್ ಸೇಫ್ಟಿ ಅಂಡ್ ಎರ್ಗೊನಾಮಿಕ್ಸ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಶೇಪ್ ವೇರ್ ಶ್ವಾಸಕೋಶದ ಕಾರ್ಯ, ಕಿಬ್ಬೊಟ್ಟೆಯ ಅಸ್ವಸ್ಥತೆ ಮತ್ತು ಶರೀರದ ಮೇಲೂ ಪರಿಣಾಮ ಬೀರುತ್ತವೆ ಎಂದು ಕಂಡುಬಂದಿದೆ.ಜೊತೆಗೆ ಇದು ಸ್ನಾಯುಗಳ ಮೇಲೂ ಪರಿಣಾಮ ಬೀರುತ್ತದೆ. 

click me!