Fashion Hacks : ಆನ್ಲೈನ್ ನಲ್ಲಿ ಖರೀದಿ ಮಾಡೋವಾಗ ಸೈಜ್ ಸಮಸ್ಯೆ ಕಾಡೋದು ಹೆಚ್ಚು. ಸರಿ ಸೈಜ್ ಆಯ್ಕೆ ಮಾಡಿದ್ರೂ ಜೀನ್ಸ್ ತುಂಬಾ ದೊಡ್ಡದಾಗುತ್ತೆ. ಸ್ವಲ್ಪ ಲೂಸ್ ಆಗಿದ್ರೆ ಟ್ರೈಲರ್ ಬಳಿ ಓಡ್ಬೇಕಾಗಿಲ್ಲ. ಮನೆಯಲ್ಲೇ ಹ್ಯಾಕ್ ಬಳಸಿ ನಿಮ್ಮ ಜೀನ್ಸ್ ಬಿಗಿಗೊಳಿಸ್ಬಹುದು.
ಕಾಟನ್ ಬಟ್ಟೆಗಳು ಖರೀದಿ ಮಾಡಿದಾಗ ಇದ್ದ ಸೈಜ್ ವಾಶ್ ಮಾಡಿದ್ಮೇಲೆ ಇರೋದಿಲ್ಲ. ಸಾಮಾನ್ಯವಾಗಿ ಬಟ್ಟೆ ಕುಗ್ಗುತ್ತೆ. ಟೈಟ್ ಫಿಟಿಂಗ್ ಬಟ್ಟೆ ಖರೀದಿ ಮಾಡಿದ್ರೆ ವಾಶ್ ನಂತ್ರ ಧರಿಸೋದು ಕಷ್ಟ. ಡೆನಿಮ್ ಕೂಡ ಹತ್ತಿ ಆಧಾರಿತ ಬಟ್ಟೆ. ಹತ್ತಿ ನಾರುಗಳು ತಾಪಮಾನದೊಂದಿಗೆ ಸ್ವಲ್ಪ ಕುಗ್ಗುತ್ವೆ. ನೀವು ಜೀನ್ಸ್ ಅನ್ನು ತುಂಬಾ ತಣ್ಣನೆಯ ನೀರಿನಲ್ಲಿ ನೆನೆಸಿದಾಗ ನಾರುಗಳು ಕುಗ್ಗುತ್ವೆ. ಇದ್ರಿಂದ ನಿಮ್ಮ ಜೀನ್ಸ್ ಸೈಜ್ ಚಿಕ್ಕದಾಗುತ್ತೆ.
25
ಐಸ್ ಟ್ರಿಕ್ ಬಳಕೆ ಹೇಗೆ?
ಮೊದಲು, ಟಬ್ನಲ್ಲಿ ಐಸ್ ಮತ್ತು ನೀರನ್ನು ತುಂಬಿಸಿ. ನಂತ್ರ ಜೀನ್ಸ್ ಅನ್ನು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಸಿ. ಅದನ್ನು 30 ನಿಮಿಷಗಳ ಕಾಲ ಹಾಗೆ ನೆನೆಯಲು ಬಿಡಿ. ಆ ಮೇಲೆ ಜೀನ್ಸ್ ತೆಗೆದು ಒಣಗಿಸಿ.
35
ಬಿಸಿ ನೀರಿನ ಬಳಕೆ
ನೀವು ಐಸ್ ನೀರಿನಲ್ಲಿ ಮಾತ್ರವಲ್ಲ ಬಿಸಿ ನೀರಿನ ಪ್ರಯೋಗ ಕೂಡ ಮಾಡಬಹುದು. ನೀವು ಜೀನ್ಸ್ ಅನ್ನು ಉಗುರುಬೆಚ್ಚಗಿನ ನೀರಿನಲ್ಲಿ ತೊಳೆದು ನಂತರ ಡ್ರೈಯರ್ನಲ್ಲಿ ಒಣಗಿಸಬೇಕು. ಹೀಗೆ ಮಾಡಿದ್ರೆ ನಿಮ್ಮ ಜೀನ್ಸ್ ಕುಗ್ಗುವ ಸಾಧ್ಯತೆ ಇರುತ್ತದೆ. ಇದನ್ನು ಐಸ್ ವಾಟರ್ ಪ್ರಯೋಗಕ್ಕಿಂತ ಹೆಚ್ಚು ಪರಿಣಾಮಕಾರಿ ಎನ್ನಲಾಗುತ್ತದೆ.
ನೀವು ಹತ್ತಿ ಡೆನಿಮ್, ಹೆಚ್ಚು ಸ್ಟ್ರೆಚ್ ಇಲ್ಲದ ಜೀನ್ಸ್ ಅಥವಾ ಹೊಸ ಅಥವಾ ಲಘುವಾಗಿ ಬಳಸಿದ ಜೀನ್ಸ್ಗಳಿಗೆ ಮಾತ್ರ ಈ ಪ್ರಯೋಗ ಮಾಡಬಹುದು. ಸ್ಪ್ಯಾಂಡೆಕ್ಸ್ ಅಥವಾ ಎಲಾಸ್ಟಿಕ್ನೊಂದಿಗೆ ಸ್ಟ್ರೆಚಬಲ್ ಆಗಿರುವ ಜೀನ್ಸ್ ಗೆ ಈ ಪ್ರಯೋಗ ಹೆಚ್ಚು ಪರಿಣಾಮಕಾರಿ ಅಲ್ಲ.
55
ಪ್ರತಿ ಬಾರಿ ಬೇಡ
ನಿಮ್ಮ ಜೀನ್ಸ್ ಸ್ವಲ್ಪ ಸಡಿಲವಿದ್ದರೆ ನೀವು ಐಸ್ ವಾಟರ್, ಬಿಸಿ ನೀರಿನ ಪ್ರಯೋಗ ಮಾಡಬಹುದು. ತುಂಬಾ ಸಡಿಲವಾಗಿದ್ದರೆ ಆಲ್ಟ್ರೆಷನ್ ಒಳ್ಳೆ ಆಯ್ಕೆ. ಹಾಗೆ ಪ್ರತಿ ಬಾರಿಯೂ ಈ ಟ್ರಿಕ್ ಬಳಸಬೇಡಿ. ಮೊದಲು ಬಟ್ಟೆ ಹೇಗಿದೆ ಎಂಬುದನ್ನು ಚೆಕ್ ಮಾಡಿ ನಂತ್ರ ಈ ಪ್ರಯತ್ನಕ್ಕೆ ಕೈ ಹಾಕಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.