ಮಕ್ಕಳಿಗಾಗಿ ಸುಂದರವಾದ ಡಂಗರಿ ಡ್ರೆಸ್: ನಿಮ್ಮ ಮುದ್ದು ಮಗಳಿಗೆ ಹೊಸ ಫ್ಯಾಷನ್‌ ಅಲೆ!

Published : Jun 02, 2026, 08:49 AM IST

ಡಂಗರಿ ಡ್ರೆಸ್‌ಗಳು ಮಕ್ಕಳಿಗೆ ಮುದ್ದಾದ ಮತ್ತು ಆಕರ್ಷಕ ನೋಟವನ್ನು ನೀಡುತ್ತವೆ. ಈ ಲೇಖನದಲ್ಲಿ, ಮಕ್ಕಳಿಗಾಗಿ ಡೆನಿಮ್, ಆರಾಮದಾಯಕ ಕಾಟನ್, ಬೇಸಿಗೆಗೆ ಹೊಂದುವ ಶಾರ್ಟ್ಸ್ ಮತ್ತು ಹುಡುಗಿಯರಿಗಾಗಿ ಫ್ರಾಕ್ ಶೈಲಿಯ ವಿವಿಧ ಟ್ರೆಂಡಿ ಡಂಗರಿ ಡಿಸೈನ್‌ಗಳ ಬಗ್ಗೆ ವಿವರಿಸಲಾಗಿದೆ.

PREV
15
ಡಂಗರಿ ಡ್ರೆಸ್‌

ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಡಂಗರಿ ಡ್ರೆಸ್‌ಗಳು ತುಂಬಾನೇ ಚೆನ್ನಾಗಿ ಕಾಣುತ್ತದೆ. ಈ ಶೈಲಿಯ ಡ್ರೆಸ್‌ಗಳು ಪ್ಯಾಂಟ್, ಸ್ಕರ್ಟ್ ಅಥವಾ ಶಾರ್ಟ್ಸ್ ಒಳಗೊಂಡಿರುತ್ತವೆ. ಭುಜಗಳ ಮೇಲೆ ಪಟ್ಟಿಗಳೊಂದಿಗೆ ಧರಿಸಲಾಗುತ್ತದೆ. ಡುಂಗರಿಯೊಳಗೆ ಅಂದ್ರೆ ಟಾಪ್‌ಗೆ ಟೀ ಶರ್ಟ್ ಧರಿಸಲಾಗುತ್ತದೆ.

25
ಫ್ಲವರ್ ಪ್ಯಾಚ್‌ವರ್ಕ್

ಮಕ್ಕಳು ಡೆನಿಮ್ ಡಂಗರಿಯಲ್ಲಿ ಸಿಕ್ಕಾಪಟ್ಟೆ ಮುದ್ದಾಗಿ ಕಾಣುತ್ತಾರೆ. ನಿಮಗೆ ಮಗಳಿದ್ರೆ ಫ್ಲವರ್ ಪ್ಯಾಚ್‌ವರ್ಕ್ ಅಥವಾ ಎಂಬ್ರಿಡರಿ ವರ್ಕ್ ಮಾಡಿರುವ ಡೆನಿಮ್ ಆಯ್ಕೆ ಮಾಡಿಕೊಳ್ಳಿ. ಬ್ಲ್ಯೂ ಡೆನಿಮ್‌ಗೆ ವೈಟ್ ಟೀ ಶರ್ಟ್ ಹಾಕಿ. ಈ ಉಡುಗೆ ವಾಕಿಂಗ್ ಅಥವಾ ಶಾಪಿಂಗ್ ಹೋಗುತ್ತಿದ್ರೆ ಈ ಸ್ಟೈಲ್ ಟ್ರೈ ಮಾಡಿ

35
ಕಾಟನ್

ಇತ್ತೀಚಿನ ದಿನಗಳಲ್ಲಿ ಕಾಟನ್ ಡಂಗರಿಗಳು ಟ್ರೆಂಡಿಂಗ್‌ನಲ್ಲಿವೆ. ಸಿಂಪಲ್, ಚೆಕ್ಕರ್, ಲಾಂಗ್ ಲೆಂಥ್ ಇರೋ ಈ ರೀತಿಯ ಕಾಟನ್ ಬಟ್ಟೆ ಸೆಲೆಕ್ಟ್ ಮಾಡಿಕೊಳ್ಳಿ. ಮುಂಭಾಗದ ಪಾಕೆಟ್‌ಗಳನ್ನು ಹೊಂದಿರುವ ಡುಂಗರಿಗಳು ಮಕ್ಕಳಿಗೆ ಮುದ್ದಾಗಿ ಕಾಣುತ್ತವೆ. ಕಾಟನ್ ಬಟ್ಟೆ ಮಕ್ಕಳಿಗೆ ತುಂಬಾ ಆರಾಮದಾಯಕವಾಗಿಸುತ್ತವೆ.

45
ಶಾರ್ಟ್ಸ್ ಲುಕ್

ಬೇಸಿಗೆ ಕಾಲದಲ್ಲಿ ಮಕ್ಕಳಿಗೆ ಚಿಕ್ಕ ಡಂಗರಿಗಳು ಸೂಕ್ತ. ಡೆನಿಮ್ ಅಥವಾ ಕಾಟನ್ ಶಾರ್ಟ್ಸ್‌ಗಳು ಮಕ್ಕಳಿಗೆ ಆರಾಮದಾಯಕವಾಗಿದ್ದು, ಆಕರ್ಷಕ ನೋಟವನ್ನು ನೀಡುತ್ತದೆ. ಈ ವಿನ್ಯಾಸದ ಡ್ರೆಸ್‌ಗಳು ಮುಂಭಾಗ ಫ್ಲಾಪ್ ಮತ್ತು ಸೈಡ್ ಪಾಕೆಟ್‌ ಹೊಂದಿರುತ್ತವೆ. ಪಾಕೆಟ್‌ನೊಳಗೆ ಕೈಗಳನ್ನು ಹಾಕಿ ನಡೆಯುತ್ತಿದ್ರೆ ಎಲ್ಲ ಮಕ್ಕಳಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗುತ್ತಾರೆ.

55
ಫ್ರಾಕ್

ಫ್ರಾಕ್ ಶೈಲಿಯ ಡಂಗರಿಗಳು ಚಿಕ್ಕ ಹುಡುಗಿಯರಿಗೆ ಬೆಸ್ಟ್. ಅದರಲ್ಲಿಯೂ ಫ್ರಿಲ್ಡ್, ಫ್ಲವರ್ ಪ್ರಿಂಟೆಡ್, ಎ-ಲೈನ್ ಡಿಸೈನ್ಸ್‌ಗಳು ನಿಮಗೆ ಸಿಗುತ್ತವೆ. ಸ್ಲೀವ್‌ಲೆಸ್, ಹಾಫ್ ಸ್ಲೀಪ್‌ ಶೈಲಿಯ ಬಟ್ಟೆಗಳು ಮಕ್ಕಳಿಗೆ ಕ್ಯೂಟ್ ಲುಕ್ ನೀಡುತ್ತವೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories