ಬಾಲಿವುಡ್ ಸೆಲೆಬ್ರಿಟಿಗಳ ಕಲರ್ ಬ್ಯಾಗಿನ ಟ್ರೆಂಡ್... ಬಣ್ಣ ಮತ್ತು ಡಿಸೈನ್ ಮೀರಿದ ಫ್ಯಾಷನ್!

Published : Oct 10, 2025, 05:28 PM IST

ಗಾಢ ಬಣ್ಣಗಳ ಬೋಲ್ಡ್‌ ಲುಕ್‌ನ ಬ್ಯಾಗ್‌ ಟ್ರೆಂಡಿ ಆಗಿದೆ. ಇತ್ತೀಚೆಗೆ ಬಾಲಿವುಡ್‌ನ ಕ್ರೇಜಿ ನಿರ್ದೇಶಕ ಕರಣ್‌ ಜೋಹರ್‌ ಕಡು ಕೇಸರಿ ಬಣ್ಣದ ಬಾಯಿ ತೆರೆದ ಶಾರ್ಕ್‌ ಮೀನಿನ ವಿನ್ಯಾಸದ ಬ್ಯಾಗ್‌ ಸಖತ್‌ ಟ್ರೆಂಡಿಂಗ್‌ ಆಯ್ತು.

PREV
15
ಸಖತ್‌ ಸೌಂಡ್‌ ಮಾಡ್ತಿವೆ

ಬಾಲಿವುಡ್‌ನಲ್ಲಿ ಸೆಲೆಬ್ರಿಟಿಗಳ ಉಡುಗೆಗಳ ಜೊತೆಗೆ ಹ್ಯಾಂಡ್‌ಬ್ಯಾಗ್‌ಗಳು ಸಖತ್‌ ಸೌಂಡ್‌ ಮಾಡ್ತಿವೆ. ಮೊದಲೆಲ್ಲ ಹೆಚ್ಚಿನ ತಾರೆಯರು ಕೈಯಲ್ಲಿ ಕಡುಗಪ್ಪು ಅಥವಾ ಬಿಳಿ ಬಣ್ಣದ ದುಬಾರಿ ಬ್ಯಾಗ್‌ ಹಿಡಿದು ಓಡಾಡುತ್ತಿದ್ದರು.

25
ಟ್ರೆಂಡಿ ಆಗಿದೆ

ಆದರೆ ಈ ಗಾಢ ಬಣ್ಣಗಳ ಬೋಲ್ಡ್‌ ಲುಕ್‌ನ ಬ್ಯಾಗ್‌ ಟ್ರೆಂಡಿ ಆಗಿದೆ. ಇತ್ತೀಚೆಗೆ ಬಾಲಿವುಡ್‌ನ ಕ್ರೇಜಿ ನಿರ್ದೇಶಕ ಕರಣ್‌ ಜೋಹರ್‌ ಕಡು ಕೇಸರಿ ಬಣ್ಣದ ಬಾಯಿ ತೆರೆದ ಶಾರ್ಕ್‌ ಮೀನಿನ ವಿನ್ಯಾಸದ ಬ್ಯಾಗ್‌ ಸಖತ್‌ ಟ್ರೆಂಡಿಂಗ್‌ ಆಯ್ತು.

35
ಹುಡುಗ, ಹುಡುಗಿಯರಿಗೆ ಫನ್ನಿ

ಅದರ ಬಣ್ಣ, ಡಿಸೈನ್‌ ಜೆನ್‌ ಜೀ ಹುಡುಗ, ಹುಡುಗಿಯರಿಗೆ ಫನ್ನಿ ಅಂತನಿಸಿ ಅವರು ಇಂಥಾ ಬ್ಯಾಗ್‌ಗಳನ್ನು ಹಿಡಿದು ಅಡ್ಡಾಡಲು ಶುರು ಮಾಡಿದರು.

45
ಬ್ಯಾಗ್‌ನ ವ್ಯಾಮೋಹ

ಕರೀನಾ ಕಪೂರ್‌ಗಂತೂ ಕೇಸರಿ ಬಣ್ಣದ ಬ್ಯಾಗ್‌ ಬೆಸ್ಟ್‌ ಫ್ರೆಂಡ್‌ ಆಗಿ ಬಿಟ್ಟಿದೆ. ಡ್ರೆಸ್‌ ಬಣ್ಣ ಹೇಗೇ ಇರಲಿ, ಅವರು ಇದೇ ಹ್ಯಾಂಡ್‌ಬ್ಯಾಗ್‌ ಜೊತೆ ಕಾಣಿಸಿಕೊಳ್ತಾರೆ. ಪ್ರಿಯಾಂಕಾ ಚೋಪ್ರಾಗೆ ಮೊದಲಿಂದಲೂ ಕೆಂಪು ಬ್ಯಾಗ್‌ನ ವ್ಯಾಮೋಹ.

55
ಸಖತ್ ಟ್ರೆಂಡ್‌ ಆಗ್ತಿದೆ

ಇಶಾ ಗುಪ್ತಗೆ ಬ್ಯಾಗ್‌ ತುಂಬ ಬಣ್ಣಗಳಿದ್ದರೆ ಚೆಂದ. ಸದ್ಯಕ್ಕೀಗ ಬಾಲಿವುಡ್‌ ಸೆಲೆಬ್ರಿಟಿಗಳ ಕೈಬ್ಯಾಗ್‌ನ ಬೋಲ್ಡ್‌ ಕಲರೇ ಅವರ ಡ್ರೆಸ್‌ ಅನ್ನೂ ಮೀರಿ ಟ್ರೆಂಡ್‌ ಆಗ್ತಿದೆ.

Read more Photos on
click me!

Recommended Stories