ಶುರು ಶುರುವಿಗೆ ಎಲ್ಲೋ ಮಿಸ್ ಆಗಿ ಒಂದೇ ಬಣ್ಣದ ಡ್ರೆಸ್ ಹಾಕ್ಕೊಂಡು ಬರ್ತಿರಬಹುದು ಅಂದುಕೊಂಡ್ರು ಇವರ ಫ್ಯಾನ್ಸ್. ಆದರೆ ಮತ್ತೆ ಮತ್ತೆ ಕೆಂಬಣ್ಣದ ಸುಂದರಿಯಾಗಿಯೇ ಕಾಣಿಸಿಕೊಳ್ಳಲಾರಂಭಿಸಿದಾಗ, ‘ಏನಿದು?’ ಅನ್ನೋ ಪ್ರಶ್ನೆ ಬಂತು.
‘ಮೆಥಡ್ ಡ್ರೆಸ್ಸಿಂಗ್’ ಅಂದರು ಈ ಹಾಲುಬಿಳುಪಿನ ಚೆಲುವೆ. ಹೀಗಾಗಿ ಬಾಲಿವುಡ್‌ನಲ್ಲಿ ‘ಮೆಥಡ್ ಡ್ರೆಸ್ಸಿಂಗ್’ ಟ್ರೆಂಡ್‌ಗೆ ಮರುಜೀವ ನೀಡಿದ್ದು ಶ್ರದ್ಧಾ ಕಪೂರ್ ಎನ್ನಬಹುದು. ಇದಕ್ಕೆ ಕಾರಣ ಈಕೆಯ ನಟನೆಯ ‘ಸ್ತ್ರೀ 2’ ಸಿನಿಮಾ. ಇದೊಂದು ಹಾರರ್ ಮೂವಿ.
ಔಟ್ ಔಟ್ ರೆಡ್ ಶೇಡ್‌ನಲ್ಲಿದೆ. ಈ ಸಿನಿಮಾದ ಭಾಗವಾಗಿರುವ ಶ್ರದ್ಧಾ ಕೂಡಾ ಸಿನಿಮಾದ ಪ್ರತಿನಿಧಿಯಂತೆ ಎಲ್ಲೆಲ್ಲೂ ಕೆಂಪು ಉಡುಗೆಯಲ್ಲೇ ಕಾಣಿಸಿಕೊಳ್ತಿದ್ದಾರೆ.
ಈ ಪ್ರಯೋಗಕ್ಕೆ ‘ಮೆಥಡ್ ಡ್ರೆಸ್ಸಿಂಗ್’ ಎಂಬ ಹೆಸರನ್ನೂ ಹೇಳಿದ್ದಾರೆ. ಮತ್ತೆ ನೋಡಿದರೆ ಹಾಲಿವುಡ್ ಸಿನಿಮಾದಲ್ಲಿ ಬಹಳ ಹಿಂದೆಯೇ ಇಂಥಾ ಪ್ರಯೋಗ ಮಾಡ್ತಿದ್ದರು.
‘ಇದು ನಟಿಯರು ತಮ್ಮ ಪಾತ್ರವನ್ನು ಸಂಭ್ರಮಿಸೋ ಬಗೆ’ ಎಂದು ಹಾಲಿವುಡ್ ನಟಿ ಬ್ಲೇಕ್ ಲೈವ್ಲೀ ಹೇಳ್ತಾರೆ. ಆಕೆ ಇತ್ತೀಚೆಗೆ ‘ಇಟ್ ಎಂಡ್ಸ್ ವಿತ್ ಯುಎಸ್’ ಅನ್ನೋ ಸಿನಿಮಾದ ಪ್ರಮೋಶನ್‌ಗೆ ಈ ಥರ ಮೆಥಡ್ ಡ್ರೆಸ್‌ನಲ್ಲಿ ಬಂದು ಸುದ್ದಿ ಆದ್ರು.
ಶ್ರದ್ಧಾ ರಕ್ತಕೆಂಪಿನ ಸೀರೆ, ಬಾಡಿಕಾನ್, ಮಿಡಿ ಡ್ರೆಸ್ ಅಂತ ವೈವಿಧ್ಯಮಯ ವೆರೈಟಿಯ ಡ್ರೆಸ್‌ಗಳನ್ನು ತೊಡುವ ಮೂಲಕ ಕೆಂಪಿನ ಮಹತ್ವ ಹೆಚ್ಚಿಸಿದ್ದಾರೆ. ಶ್ರದ್ಧಾ ಸ್ಟೈಲ್‌ಗೆ ಮಾರುಹೋಗಿರುವ ಕಾಲೇಜ್ ಹುಡುಗೀರೂ ಕೆಂಬಣ್ಣದ ವೈವಿಧ್ಯಮಯ ಉಡುಗೆಯಲ್ಲಿ ಹುಡುಗರ ಎದೆಬಡಿತ ಹೆಚ್ಚಿಸುತ್ತಿದ್ದಾರೆ.