National Underwear Day ಈ ದೇಶದಲ್ಲಿ ಹೆಣ್ಮಕ್ಕಳು ಬ್ರಾ - ಪ್ಯಾಂಟಿ ಧರಿಸಲೂ ರೂಲ್ಸ್ ಫಾಲೋ ಮಾಡಬೇಕು!

First Published | Aug 5, 2024, 5:22 PM IST

ಒಳ ಉಡುಪುಗಳು ಮಹಿಳೆಯರು ಮತ್ತು ಪುರುಷರಿಗೆ ಅಗತ್ಯವಾಗಿ ಬೇಕಾಗಿರೋ ವಸ್ತ್ರ. ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಪ್ರತಿವರ್ಷ ಆಗಸ್ಟ್ 5 ರಂದು ರಾಷ್ಟ್ರೀಯ ಒಳ ಉಡುಪು ದಿನವನ್ನು ಆಚರಿಸಲಾಗುತ್ತದೆ. ಒಳ ಉಡುಪುಗಳಿಗೆ ಸಂಬಂಧಿಸಿದ ಇತಿಹಾಸವು 7000 ವರ್ಷಗಳಷ್ಟು ಹಳೆಯದು. ಇವುಗಳ ಬಗ್ಗೆ ಇಂಟ್ರೆಸ್ಟಿಂಗ್ ವಿಷ್ಯಗಳನ್ನ ತಿಳಿಯೋಣ. 
 

ರಾಷ್ಟ್ರೀಯ ಒಳ ಉಡುಪು ದಿನವನ್ನು (National Underwear Day) ಆಗಸ್ಟ್ 5 ರಂದು ಆಚರಿಸಲಾಗುತ್ತದೆ. ಬಟ್ಟೆಯಲ್ಲಿ ಒಳ ಉಡುಪು ಎಷ್ಟು ಮುಖ್ಯ ಅನ್ನೋದು ತಿಳಿದೇ ಇದೆ. ಅದು ಮಹಿಳೆಯರಾಗಿರಲಿ ಅಥವಾ ಪುರುಷರಾಗಿರಲಿ, ಒಳ ಉಡುಪುಗಳು ನಮಗೆ ಬೇಕಾಗುತ್ತವೆ. ಯಾಕಂದ್ರೆ ದೇಹ ಫಿಟ್ ಆಗಿ, ಎಲ್ಲೂ ನಮ್ಮನ್ನ ತಪ್ಪಾಗಿ ಬಿಂಬಿಸದಂತೆ ಕಾಪಾಡೋದಕ್ಕೆ ಒಳ ಉಡುಪು ಬೇಕೇ ಬೇಕು.
 

ಒಳ ಉಡುಪು ಚರ್ಮದೊಂದಿಗೆ ನೇರ ಸಂಪರ್ಕದಲ್ಲಿರುತ್ತವೆ ಮತ್ತು ಚರ್ಮವನ್ನು ರಕ್ಷಿಸುತ್ತದೆ. ಆದ್ರೆ ನಿಮಗೆ ಗೊತ್ತಾ? ಒಳ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಿರುವ ವಿಶ್ವದ ಕೆಲವು ಸ್ಥಳಗಳಿವೆ, ಅದರಲ್ಲೂ ಮಹಿಳೆಯರು ಒಳ ಉಡುಪು ಧರಿಸುವಂತಿಲ್ಲವಂತೆ ಈ ದೇಶದಲ್ಲಿ. ಅದ್ಯಾವ ದೇಶ ಬ್ರಾ ಧರಿಸೋದನ್ನೆ ನಿಷೇಧಿಸಿದೆ ಎಂದು ನಿಮಗೂ ಅಚ್ಚರಿಯಾಗಿರಬಹುದು ಅಲ್ವ? ಬನ್ನಿ ಆ ದೇಶದ ಬಗ್ಗೆ ತಿಳಿಯೋಣ. 

Tap to resize

ಈ ದೇಶದಲ್ಲಿ ಮಹಿಳೆಯರು ಬ್ರಾ ಮತ್ತು ಪ್ಯಾಂಟಿ ಧರಿಸೋದು ನಿಷೇಧ
ದೇಶದ ಮತ್ತು ವಿಶ್ವದ ಮಹಿಳೆಯರು ಹೆಚ್ಚಾಗಿ ಇಷ್ಟ ಪಡೋದೆ ತಮ್ಮ ಬಟ್ಟೆಗಳನ್ನು, ಈ ಬಟ್ಟೆಗಳ ವಿಷ್ಯದಲ್ಲೇ ಮನೆಯಲ್ಲಿ ಜಗಳಗಳು ನಡೆಯುತ್ತೆ. ಆದ್ರೆ ಅನೇಕ ದೇಶಗಳಲ್ಲಿ ಮಹಿಳೆಯರ ಉಡುಪುಗಳ ಬಗ್ಗೆ ಅನೇಕ ನಿಯಮಗಳನ್ನು ಸಹ ಮಾಡಲಾಗಿದೆ. ಅಮೆರಿಕದ ಮಿಸ್ಸೌರಿಯಲ್ಲಿ ಮಹಿಳೆಯರಿಗಾಗಿ ಬಹಳ ವಿಚಿತ್ರವಾದ ಕಾನೂನು ಇದೆ. ಇಲ್ಲಿ ಮಹಿಳೆಯರು ಬ್ರಾ ಮತ್ತು ಪ್ಯಾಂಟಿ ಅಥವಾ ಇತರ ಯಾವುದೇ ರೀತಿಯ ಒಳ ಉಡುಪುಗಳನ್ನು (innerwear) ಧರಿಸೋದನ್ನೇ ನಿಷೇಧಿಸಲಾಗಿದೆ. ಈ ಕಾನೂನಿನಿಂದ ಮಹಿಳೆಯರು ಅದೆಷ್ಟು ಮುಜುಗರಕ್ಕೆ ಒಳಗಾಗಿದ್ದಾರೆ ಅನ್ನೋದು ಗೊತ್ತಾ? 

ಬ್ರಾ ಎಂಬ ಪದ ಎಲ್ಲಿಂದ ಬಂತು?
ಒಂದು ವರದಿ ಪ್ರಕಾರ, ಮೊದಲ ಆಧುನಿಕತೆ ಫ್ರಾನ್ಸ್‌ನಲ್ಲಿ ಹುಟ್ಟಿಕೊಂಡಿತು,  ಬ್ರಾ ಎಂಬ ಪದ ಫ್ರಾನ್ಸ್‌ನಿಂದ ಬಂದಿದೆ, ಅದರ ಹೆಸರು 'ಬ್ರೇಸಿಯರ್' ಎಂಬ ಪದದಿಂದ ಬಂದಿದೆ. ಇದು ಫ್ರೆಂಚ್ ಪದ. ಇದರರ್ಥ ದೇಹದ ಮೇಲ್ಭಾಗ. ಅದರ ಇತಿಹಾಸದ ಬಗ್ಗೆ ಹೇಳೋದಾದ್ರೆ, ಮೇ 30, 1869 ರಂದು, ಫ್ರಾನ್ಸ್‌ನ ಹರ್ಮಿನಿ ಕ್ಯಾಡೋಲ್ ಎಂಬುವವರು ಕಾರ್ಸೆಟ್ ಅನ್ನು ಎರಡು ತುಂಡುಗಳಾಗಿ ಕತ್ತರಿಸುವ ಮೂಲಕ ಒಳ ಉಡುಪು ತಯಾರಿಸಿದರು. ಕ್ರಮೇಣ, ಬ್ರಾದ ಅನೇಕ ರೂಪಗಳು ಬಂದವು, ಆದರೆ ಇಂದಿಗೂ ಇದನ್ನು ಬ್ರಾ (Bra) ಹೆಸರಲ್ಲೇ ಧರಿಸಲಾಗುತ್ತದೆ.

ಚೀನಾದಲ್ಲಿ, ಹುಡುಗರು ಒಳ ಉಡುಪುಗಳನ್ನು ಧರಿಸಿ ಈ ಕೆಲಸ ಮಾಡ್ತಾರೆ
ಮತ್ತೊಂದೆಡೆ,  ಚೀನಾದ ಬಗ್ಗೆ ಹೇಳೋದಾದ್ರೆ, ಆರೋಗ್ಯಕರ ದೇಹಕ್ಕಾಗಿ ಮಹಿಳೆಯರು ಒಳ ಉಡುಪುಗಳನ್ನು ಧರಿಸುವುದು ಎಷ್ಟು ಮುಖ್ಯ ಎಂದು ಚೀನಾ ಸರ್ಕಾರಕ್ಕೆ ಗೊತ್ತು. ಇದನ್ನು ಗಮನದಲ್ಲಿಟ್ಟುಕೊಂಡು, ಹುಡುಗಿಯರ ಒಳ ಉಡುಪುಗಳನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮಗಳಲ್ಲಿ (social media) ಒಳ ಉಡುಪು ಉದ್ಯಮವನ್ನು ಉತ್ತೇಜಿಸುವಂತೆ ಸರ್ಕಾರ ದೇಶದ ಹುಡುಗರನ್ನು ಕೇಳಿತ್ತು. ಈ ಪ್ರಚಾರದ ವಿಶೇಷವೆಂದರೆ ಹುಡುಗರು ಸ್ವತಃ ಒಳ ಉಡುಪುಗಳನ್ನು ಧರಿಸಿ ವೀಡಿಯೊ ಜಾಹೀರಾತು ಶೂಟಿಂಗ್ ಮಾಡುತ್ತಿದ್ದರು.

ಪುರುಷರ ಒಳ ಉಡುಪುಗಳ ಇತಿಹಾಸವು 7000 ವರ್ಷಗಳಷ್ಟು ಹಳೆಯದು
ಪುರುಷರ ಒಳ ಉಡುಪುಗಳು ಯಾವಾಗಲೂ ಇಂಟ್ರೆಸ್ಟಿಂಗ್ ವಿಷಯ. 7,000 ವರ್ಷಗಳ ಹಿಂದೆ ಪುರುಷರ ಒಳ ಉಡುಪುಗಳ ಮೊದಲ ಮತ್ತು ಪ್ರಾಥಮಿಕ ರೂಪವೆಂದರೆ ಲಂಗೋಟಿ. ಇದಾದ ನಂತ್ರ ಬಾಕ್ಸರ್ ಶಾರ್ಟ್ಸ್ (boxer shorts) ಅನ್ನು ಒಳ ಉಡುಪುಗಳಾಗಿ ತಯಾರಿಸಲಾಯಿತು, ಇದು ತಕ್ಷಣದ ಯಶಸ್ಸನ್ನು ಪಡೆಯಲಿಲ್ಲ. ಸಮಯ ಕಳೆದಂತೆ ಪುರುಷರ ಒಳ ಉಡುಪುಗಳು ಬೆಳೆಯತೊಡಗಿತು. 

Latest Videos

click me!