ನೆಟ್ಟೆಡ್​ ಡ್ರೆಸ್‌ನಲ್ಲಿ ಆ ಭಾಗ ತೋರಿಸಿದ ದಿಶಾ ಪಟಾನಿ: ಗೋಣಿಚೀಲದಲ್ಲಿ ಡ್ರೆಸ್ ಹೊಲಿಸಿದ್ರಾ ಅನ್ನೋದಾ!

First Published | Aug 10, 2024, 8:32 PM IST

ಬಾಲಿವುಡ್ ಬೆಡಗಿ ದಿಶಾ ಪಟಾನಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೀಗ ನಟಿ ಇನ್ಸ್ಟಾಗ್ರಾಮ್‌ನಲ್ಲಿ ಬೋಲ್ಡ್ ಅಂಡ್ ಹಾಟ್ ಫೋಟೋಸ್​ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾಗೆ ಬೆಂಕಿ ಹಚ್ಚಿದ್ದಾರೆ.

ಸಿನಿಮಾಗಳಲ್ಲಿ ಅಲ್ಲದೇ ತನ್ನ ಹಾಟ್ ಬ್ಯೂಟಿ  ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಬೆಳೆಸಿಕೊಳ್ಳುವಲ್ಲಿ ದಿಶಾ ಮುಂಚೂಣಿಯಲ್ಲಿದ್ದಾರೆ. ಆಗಾಗ ಬಿಕಿನಿಯಲ್ಲಿ ಕಾಣಿಸಿಕೊಳ್ಳುವ ನಟಿ ಈಗ ಡಿಫರೆಂಟ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಬಿ-ಟೌನ್‌ ಸುಂದರಿ ದಿಶಾ ಪಟಾನಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್. ಜೊತೆಗೆ ಯಾವಾಗಲೂ ಕ್ರೇಜ್ ಕ್ರಿಯೇಟ್ ಮಾಡುವುದರಲ್ಲಿ ಮುಂಚೂಣಿಯಲ್ಲಿರುವ ದಿಶಾ ಪಠಾನಿ ಹೊಸ ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Tap to resize

ಹೌದು! ನೆಟ್ಟೆಡ್​ ಡ್ರೆಸ್‌ನಲ್ಲಿ ನಟಿ ದಿಶಾ ಪಟಾಣಿ ಶಿಲಾಬಾಲಿಕೆಯಂತೆ ಕಾಣಿಸಿಕೊಂಡಿದ್ದಾರೆ. ಅವರು ತೊಟ್ಟ ನೆಟ್ಟೆಡ್​ ಡ್ರೆಸ್‌ ನೋಡಲು ಗೋಣಿ ಚೀಲದಂತಿದ್ದು, ಕ್ಯಾಮೆರಾಗೆ ವಿವಿಧ ಭಂಗಿಗಳಲ್ಲಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. 
 

ನಟಿ ದಿಶಾ ಪಟಾಣಿ ಹೊಸ ಲುಕ್ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಪಡ್ಡೆ ಹುಡುಗರ ನಿದ್ದೆಯಂತೂ ಹಾಳಾಗಿದೆ ಅಂತಲೇ ಹೇಳಬಹುದು. ಇನ್ನು ದಿಶಾ ಡ್ರೆಸ್ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

ದಿಶಾ ಪಟಾನಿ ತೊಟ್ಟ ಡ್ರೆಸ್ ನೋಡಿ ನೆಟ್ಟಿಗರು, ಗೋಣಿಚೀಲದಲ್ಲಿ ಡ್ರೆಸ್ ಹೊಲಿಸಿದ್ರಾ, ಇದೆಂಥಾ ಫ್ಯಾಷನ್ ಎಂದು ನಟಿಯನ್ನು ಕಾಲೆಳೆದಿದ್ದಾರೆ. ಹಾಗೆಯೇ ಪಡ್ಡೆಹೈಕ್ಳು ಸೋ ಸೆಕ್ಸಿ, ಹಾಟ್ ಬ್ಯೂಟಿ ಎಂದು ಕಮೆಂಟ್ ಮಾಡಿದ್ದಾರೆ.

ದಿಶಾ ಪಟಾನಿ ಆಚೆ ಕಾಣಿಸಿಕೊಂಡಾಗೆಲ್ಲ ಅವರ ಫೋಟೋಗಳು ವೈರಲ್ ಆಗುತ್ತದೆ. ಅವರ ಬೋಲ್ಡ್ ಅಂಡ್ ಹಾಟ್ ಫ್ಯಾಷನ್ ಸ್ಟೈಲ್ ಅನ್ನು ಫಾಲೋ ಮಾಡುವ ಮಂದಿಯೂ ತುಂಬಾ ಇದ್ದಾರೆ. ಸದ್ಯ ಇವರ ಫೋಟೋಸ್‌ಗಳು ಸಖತ್ ವೈರಲ್ ಆಗಿವೆ.

ಡಾರ್ಲಿಂಗ್ ಪ್ರಭಾಸ್ ಅಭಿನಯದ ಕಲ್ಕಿ 2898 AD ಸಿನಿಮಾದಲ್ಲಿ ದಿಶಾ ಪಟಾನಿ ಕಾಣಿಸಿಕೊಂಡಿದ್ದು, ತಮ್ಮ ನಟನೆಯಿಂದ ಪ್ರೇಕ್ಷಕರನ್ನು ಬೆರಗುಗೊಳಿಸಿದರು. ಸ್ಕ್ರೀನ್ ಟೈಮ್ ಸ್ವಲ್ಪ ಕಡಿಮೆಯಾದರೂ ಉತ್ತಮವಾಗಿ ಅಭಿನಯಿಸಿದ್ದಾರೆ.

Latest Videos

click me!