ಮಿಲನ್ ಫ್ಯಾಷನ್ ವೀಕ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಕಪೂರ್ ಕುಟುಂಬದ ಸೊಸೆ; ಇಲ್ಲಿವೆ ನೋಡಿ Photos

Published : Sep 24, 2025, 04:16 PM IST

Alia Bhatt Style: ಒಂದು ಕ್ಷಣ ಆಲಿಯಾಳನ್ನು ನೋಡಿದ ವಿದೇಶಿ ಕ್ಯಾಮೆರಾಮೆನ್‌ಗಳು ಸಹ "ಆಲಿಯಾ, ಆಲಿಯಾ!" ಎಂದು ಕೂಗಲು ಪ್ರಾರಂಭಿಸಿದರು. ಹೌದು, ಮಿಲನ್ ಫ್ಯಾಷನ್ ವೀಕ್ ವಿಶ್ವದ ಅತಿದೊಡ್ಡ ಫ್ಯಾಷನ್ ವೀಕ್‌ಗಳಲ್ಲಿ ಒಂದಾಗಿದ್ದು, ಇಲ್ಲಿ ಆಲಿಯಾ ಭಟ್ ದೀಪಿಕಾ ಪಡುಕೋಣೆ ಅವರನ್ನೇ ಮೀರಿಸಿದ್ದಾರೆ. 

PREV
17
ದೀಪಿಕಾ ಕಾಣಿಸಿಕೊಂಡಿಲ್ಲ

ಮಿಲನ್ ಫ್ಯಾಷನ್ ವೀಕ್ (Milan Fashion Week) ವಿಶ್ವದ ಅತಿದೊಡ್ಡ ಫ್ಯಾಷನ್ ವೀಕ್‌ಗಳಲ್ಲಿ ಒಂದಾಗಿದ್ದು, ಇಲ್ಲಿ ಆಲಿಯಾ ಭಟ್ ದೀಪಿಕಾ ಪಡುಕೋಣೆ ಅವರನ್ನೇ ಮೀರಿಸಿದ್ದಾರೆ. ದೀಪಿಕಾ ಅವರ ತಾರಾಪಟ್ಟ ಉತ್ತುಂಗದಲ್ಲಿದ್ದರೂ ಇನ್ನೂ ಮಿಲನ್ ಫ್ಯಾಷನ್ ವೀಕ್‌ನಲ್ಲಿ ಕಾಣಿಸಿಕೊಂಡಿಲ್ಲ. ಏತನ್ಮಧ್ಯೆ ಕಪೂರ್ ಕುಟುಂಬದ ಪ್ರೀತಿಯ ಸೊಸೆ ವಿದೇಶದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಒಂದು ಕ್ಷಣ ಆಲಿಯಾಳನ್ನು ನೋಡಿದ ವಿದೇಶಿ ಕ್ಯಾಮೆರಾಮೆನ್‌ಗಳು ಸಹ "ಆಲಿಯಾ, ಆಲಿಯಾ!" ಎಂದು ಕೂಗಲು ಪ್ರಾರಂಭಿಸಿದರು.

27
ಬ್ಲಾಕ್ ಕಲರ್ ಗುಸ್ಸಿ ಬ್ಯಾಗ್

ವಿಡಿಯೋ ನೋಡಿದರೆ ಆಲಿಯಾಳನ್ನು ಕೂಗಿದಾಗ ಆಕೆ ನಾಚಿಕೆಪಡುತ್ತಾ ನಗುತ್ತಿರುವಂತೆ ಕಂಡುಬಂದಿದೆ. ಈಗ ಆಲಿಯಾಳ "ಬ್ಲ್ಯಾಕ್ ಮ್ಯಾಜಿಕ್" ನ ಫೋಟೋಗಳು ಮತ್ತು ವಿಡಿಯೋ ಆನ್‌ಲೈನ್‌ನಲ್ಲಿ ಕಾಡ್ಗಿಚ್ಚಿನಂತೆ ಹರಡಿವೆ. ಇನ್ನು ಲುಕ್ ಬಗ್ಗೆ ಹೇಳುವುದಾದರೆ, ಆಲಿಯಾ ಮತ್ತೊಮ್ಮೆ ತಮ್ಮ ಸ್ಟೈಲ್‌ನಿಂದ ಅಭಿಮಾನಿಗಳನ್ನು ಆಕರ್ಷಿಸಿದ್ದಾರೆ. ಆಲಿಯಾ ಅಡಿಯಿಂದ ಮುಡಿವರೆಗೆ ಕಪ್ಪು ಕಲರ್‌ನ ಪರಿಕರಗಳನ್ನು ಧರಿಸಿರುವುದು ಕಂಡುಬಂದಿದ್ದು, ಅವರ ಗುಸ್ಸಿ ಬ್ಯಾಗ್ ಕೂಡ ಕಪ್ಪು ಬಣ್ಣದ್ದಿರುವುದು ವಿಶೇಷ.

37
ಸೂಪರ್ ಸ್ಟೈಲಿಶ್

ಕೆಲವು ದಿನಗಳ ಹಿಂದೆ ನಡೆದ ಮೆಟ್ ಗಾಲಾದಲ್ಲಿಯೂ ಆಲಿಯಾ ಗುಸ್ಸಿ ಸೀರೆಯನ್ನು ಧರಿಸಿದ್ದರು. ಈಗ ಅವರು ಗುಸ್ಸಿಯ ಇತ್ತೀಚಿನ ಕಲೆಕ್ಷನ್ ಲಾ ಫ್ಯಾಮಿಗ್ಲಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ತಮ್ಮನ್ನು ತಾವು ಸೂಪರ್ ಸ್ಟೈಲಿಶ್ ಮತ್ತು ವಿಶಿಷ್ಟವಾಗಿ ಕಾಣುವಂತೆ ಮಾಡಲು ಹಲವಾರು ಟ್ರಿಕ್ ಉಪಯೋಗಿಸಿರುವುದು ಕಂಡುಬರುತ್ತದೆ. ತದನಂತರ, "ಟೈಗರ್" ಕಿರುಚಿತ್ರದ ಪ್ರದರ್ಶನದಲ್ಲಿ ಗಮನ ಸೆಳೆದರು.

47
ಆಕರ್ಷಕ ಬ್ಯಾಗ್, ದಿರಿಸು

ಆಲಿಯಾ ಕೋಟ್‌ನ ಕೆಳಗೆ ಸ್ಕಿನ್ ಟೋನ್ಡ್ ಉಡುಪನ್ನು ಧರಿಸಿದ್ದರು . ಡ್ರೆಸ್ ಚಿಕ್ಕದಿದ್ದರೂ ಆಕೆಯ ಲುಕ್‌ಗೆ ಆಕರ್ಷಕ ಟಚ್ ನೀಡಿತು. ಪೋಸ್ ನೀಡುವಾಗ ಉಡುಪಿನ ಸ್ಲೀವ್ಸ್‌ ಅನ್ನು ಸರಿಸಿದ್ದರು. ಡ್ರೆಸ್‌ಗೆ ಲೇಸ್ ಇದ್ದರೂ ಕೋಟ್‌ನಿಂದ ಮರೆಮಾಡಲ್ಪಟ್ಟಿದೆ.

57
ದೊಡ್ಡ ಗಾತ್ರದ ಕೋಟ್‌

ಆಲಿಯಾ ಕಪ್ಪು ಬಣ್ಣದ ಫರ್ ಕೋಟ್ ಧರಿಸಿರುವುದು ಬೋಲ್ಡ್ ಮತ್ತು ಸ್ಟೈಲಿಶ್ ಆಗಿ ಕಾಣುವಂತೆ ಮಾಡಿತು. ದೊಡ್ಡ ಗಾತ್ರದ ಕೋಟ್‌ನ ಫುಲ್ ಲಾಂಗ್ ಸ್ಲೀವ್ಸ್, ಡ್ರಾಪ್ ಶೋಲ್ಡರ್, ವಿ ನೆಕ್‌ಲೈನ್ ಎಲ್ಲವೂ ಸ್ಪೆಷಲ್ ಟಚ್ ನೀಡುತ್ತಿತ್ತು. ಸೈಡ್ ಪಾಕೆಟ್‌ಗಳು ಸಹ. ಲುಕ್ ಅನ್ನು ಕಂಪ್ಲೀಟ್ ಮಾಡಲು ಆಲಿಯಾ ತಮ್ಮ ಸೊಂಟಕ್ಕೆ   ಗೋಲ್ಡ್ ಕಲರ್ ಗುಸ್ಸಿ ಚೈನ್ ಸಹ ಹಾಕಿದ್ದರು.

67
ಕಪ್ಪು ಪಾದರಕ್ಷೆ

ಇದಲ್ಲದೆ ಆಲಿಯಾ ಕಪ್ಪು ಪಾದರಕ್ಷೆಗಳನ್ನು ಸಹ ಆರಿಸಿಕೊಂಡಿದ್ದರು. ಅದು ಅವರ ಲುಕ್ ಅನ್ನು ಕಂಪ್ಲೀಟ್ ಮಾಡಿತಲ್ಲದೆ, ಹೈಲೈಟ್ ಮಾಡಿತು.

77
ಕಣ್ಮನ ಸೆಳೆದ ಆಲಿಯಾ ಲುಕ್

ಫೋಟೋ ನೋಡಿದಾಗ ಆಲಿಯಾಳ ಗುಸ್ಸಿ ಬ್ಯಾಗ್ ಕೂಡ ಗಮನ ಸೆಳೆಯಿತು. ಇವಿಷ್ಟು ಆಲಿಯಾಳ ಸೂಪರ್ ಸ್ಟೈಲಿಶ್ ಲುಕ್‌ನ ವಿವರ. ಸದ್ಯ ಇದು ಅವರ ಅಭಿಮಾನಿಗಳ ಕಣ್ಮನ ಸೆಳೆಯುತ್ತಿದೆ.

Read more Photos on
click me!

Recommended Stories