Published : Jan 11, 2024, 06:09 PM ISTUpdated : Jan 11, 2024, 06:12 PM IST
40ರ ವಯಸ್ಸಿಗೆ ಸರ್ಜರಿ ಮಾಡಿಸಿಕೊಂಡು ಟ್ರಾನ್ಸ್‌ವುಮನ್ ಆಗಿ ಬದಲಾದ ಸ್ವಪ್ನಿಲ್ ತಮ್ಮ ಈ ಪ್ರಯಾಣದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಗಂಡಾಗಿ ಹುಟ್ಟಿ ತಮ್ಮ 40 ವಯಸ್ಸಿಗೆ ಹೆಣ್ಣಾಗಿ ಬದಲಾದ ಸೈಸಾ ಶಿಂಧೆ ಅಲಿಯಾಸ್ ಬಾಲಿವುಡ್‌ನ ಖ್ಯಾತ ಫ್ಯಾಷನ್ ಡಿಸೈನರ್. ಹುಡುಗಿಯಾಗಿ ಬದಲಾಗುವ ಮೊದಲು ಸೈಶಾ ಈ ಹಿಂದೆ ಸ್ವಪ್ನಿಲ್ ಶಿಂಧೆ ಎಂಬ ಹೆಸರಿನಿಂದ ಗುರುತಿಸಿಕೊಂಡವರು.
212
ಆದರೆ 40ರ ವಯಸ್ಸಿಗೆ ಸರ್ಜರಿ ಮಾಡಿಸಿಕೊಂಡು ಟ್ರಾನ್ಸ್‌ವುಮನ್ ಆಗಿ ಬದಲಾದ ಸ್ವಪ್ನಿಲ್ ನಿಮ್ಮ ಹೃದಯದ ಮಾತು ಕೇಳಿ ಎನ್ನುವ ಅನೇಕರಿಗೆ ಸ್ಪೂರ್ತಿ. ಈಗ ಅವರು ತಮ್ಮ ಪ್ರಯಾಣದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
312
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರು ತನ್ನ ಈ ದೈಹಿಕ ಬದಲಾವಣೆಯ ನಂತರವೂ ಯಾವ ರೀತಿ ಬಹಳ ಗೌರವದಿಂದ ನಡೆಸಿಕೊಂಡರು ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ ಸೈಸಾ.
412
ಟಿಸ್ಕಾ ಚೋಪ್ರಾ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೈಸಾ ಶಿಂಧೆ ಅವರು ತಾನು ಶಸ್ತ್ರಚಿಕಿತ್ಸೆಗೆ ಒಳಗಾದ ವಿಚಾರವನ್ನು ಸಾರ್ವಜನಿಕವಾಗಿ ಘೋಷಿಸದೇ ಇದ್ದ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ
512
ಐಶ್ವರ್ಯಾ ರೈ ಜೊತೆಗಿನ ವ್ಯವಹಾರವೊಂದರಲ್ಲಿ ಅವರು ಮೊದಲಿಗೆ ತಾನು ಈಗ ಸ್ವಪ್ನಿಲ್ ಅಲ್ಲಾ ಸೈಸಾ ಎಂಬುದನ್ನು ಹೇಳಿಕೊಳ್ಳಲು ಮುಂದಾಗಿದ್ದೇನೆ ಎಂದು ತನ್ನ ಮ್ಯಾನೇಜರ್‌ಗೆ ತಿಳಿಸಿದ್ದರಂತೆ.
612
ನಾನು ಲಿಂಗ ಬದಲಿಸಿಕೊಂಡ ವಿಚಾರ ಪತ್ರಿಕೆಗಳಲ್ಲಿ ಬರಲಿಲ್ಲ, ನನ್ನ ಇಂಡಸ್ಟ್ರಿಯಲ್ಲಿರುವ ಕೆಲ ಆತ್ಮೀಯ ಸ್ನೇಹಿತರಿಗೆ ಮಾತ್ರ ಈ ವಿಚಾರ ಗೊತ್ತಿತ್ತು. ಇದೇ ಸಮಯದಲ್ಲಿ ಐಶ್ವರ್ಯಾ ರೈ ಜೊತೆ ಫಿಟ್ಟಿಂಗ್ ಇತ್ತು.
712
ಈ ವೇಳೆ ನಾನು ಐಶ್ವರ್ಯಾ ರೈ ಅವರ ಮ್ಯಾನೇಜರ್ ಬಳಿ ಹೇಳಿದೆ, ಸಿದ್ದರಾಗಿ, ಈಗ ಬರುತ್ತಿರುವುದು ಸ್ವಪ್ನಿಲ್ ಅಲ್ಲ ಸೈಶಾ, ಮ್ಯಾಮ್ ಸೇರಿದಂತೆ ಎಲ್ಲರೂ ಸರಿಯಾಗಿ ಸಹಜವಾಗಿ ಇದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಏಕೆಂದರೆ ನಾನು ಯಾರನ್ನು ಆಘಾತಗೊಳಿಸಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದೆ ಎಂದು ಹೇಳಿದ್ದಾರೆ ಸೈಸಾ.
812
ಇನ್ನು ಈ ವಿಚಾರ ಮ್ಯಾನೇಜರ್‌ಗೆ ತಿಳಿಸಿದ ನಂತರ ನಾನು ಐಶ್ವರ್ಯಾ ರೈ ಅವರ ಫಿಟ್ಟಿಂಗ್‌ಗೆ ಹೋಗಿದ್ದೆ. ಈ ವೇಳೆ ಐಶ್ವರ್ಯಾ ಎಂದಿನಂತೆ ಐಶ್ವರ್ಯಾ ಆಗಿಯೇ ಇದ್ದರು. ಅವರು ನನ್ನನ್ನು ಸೈಶಾ ಎಂಬ ಹೆಸರಿನಿಂದಲೇ ಕರೆದರು.
912
ಅಲ್ಲದೇ ನನ್ನ ಹೆಸರನ್ನು ಸರಿಯಾಗಿಯೇ ಉಚ್ಛಾರಣೆ ಮಾಡಿದರು. ಇದೇ ವೇಳೆ ಅವರ ಮಗಳು ಅರಾಧ್ಯಾ ಕೂಡ ಅಲ್ಲಿಗೆ ಬಂದರು. ಅವರಿಗೂ ಐಶ್ವರ್ಯಾ ಅವರು ಇವರು ಸೈಶಾ ಎಂದೇ ಪರಿಚಯಿಸಿದರು ಎಂದು ಹೇಳಿಕೊಂಡಿದ್ದಾರೆ ಸೈಶಾ.
1012
ಅಲ್ಲದೇ ಇದಾದ ನಂತರ ತಾನು ಈ ಬದಲಾವಣೆಯ ಮೂಲಕ ನನ್ನ ನೈಜ ಸ್ವರೂಪವನ್ನು ಸ್ವೀಕರಿಸಲು ಬಯಸಿದ್ದೆ. ಅಲ್ಲದೇ ಎಲ್ಲರಿಗೂ ನಾನು ಈ ವಿಚಾರವನ್ನು ತಿಳಿಸಲು ಬಯಸಿದೆ.
1112
ಆದರೆ ಈ ರೀತಿ ಘೋಷಣೆ ಮಾಡಲು ಭಯವಾಗುತ್ತಿದ್ದರೂ ತನ್ನೊಂದಿಗೆ ಕೆಲಸ ಮಾಡಿದ ಅದ್ಭುತ ಮಹಿಳೆಯರು ನನ್ನನ್ನು ಇದೇ ರೀತಿ ಸ್ವೀಕರಿಸುತ್ತಾರೆ ಎಂಬ ನಂಬಿಕೆ ನನಗಿತ್ತು ಎಂದು ಹೇಳಿಕೊಂಡಿದ್ದಾರೆ ಸೈಶಾ.
1212
ಸಿನಿಮಾ ಇಂಡಸ್ಟ್ರಿಯಲ್ಲಿರುವ ಮಹಿಳೆಯರು ಬೇರೆಯೇ ಹಂತದಲ್ಲಿ ಅದ್ಭುತವಾಗಿದ್ದಾರೆ. ಹಾಗಾಗಿ ನಾನು ಹೆದರುತ್ತಿದ್ದರು ಭಯಪಡುತ್ತಿರಲಿಲ್ಲ, ಏಕೆಂದರೆ ಆ ಜನರ ಬಗ್ಗೆ ನನಗೆ ಗೊತ್ತಿತ್ತು. ನಾನು ಅವರೊಂದಿಗೆ ಕೆಲಸ ಮಾಡಿದ್ದೆ. ಅದರಲ್ಲಿ ಕೆಲವು ನನಗೆ ಸ್ನೇಹಿತರಾಗಿದ್ದಾರೆ. ಹೀಗಾಗಿ ಅವರು ನನ್ನನ್ನು ಎಂದಿನಂತೆ ಸ್ವೀಕರಿಸುವರು ಎಂಬ ನಂಬಿಕೆ ನನಗಿತ್ತು ಎಂದು ಹೇಳಿದ್ದಾರೆ. ಸೈಶಾ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.