ಮದ್ವೆ ಸುದ್ದಿ ಬೆನ್ನಲ್ಲೇ ಹಾಟ್ ಅವತಾರದಲ್ಲಿ ರಶ್ಮಿಕಾ, VIROSH ಎಂಗೇಜ್‌ಮೆಂಟ್ ಯಾವಾಗ ಎಂದ ಫ್ಯಾನ್ಸ್‌!

First Published | Jan 9, 2024, 10:23 AM IST

ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಸದ್ಯದಲ್ಲೇ ಮದ್ವೆಯಾಗ್ತಾರೆ, ಫೆಬ್ರವರಿಯಲ್ಲಿ ಎಂಗೇಜ್‌ಮೆಂಟ್ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡ್ತಿದೆ. ಇದೆಲ್ಲದರ ಮಧ್ಯೆ ರಶ್ಮಿಕಾ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಹಾಟ್ ಫೋಸ್ ಕೊಟ್ಟಿರುವ ಫೋಟೋವನ್ನು ಶೇರ್ ಮಾಡ್ಕೊಂಡಿದ್ದಾರೆ. 

ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳ ಸಕ್ಸಸ್ ಬೆನ್ನಲ್ಲಿಯೇ ಬಾಲಿವುಡ್, ಟಾಲಿವುಡ್ ಅಂತ ಫುಲ್ ಬಿಝಿಯಾಗಿದ್ದಾರೆ. ಇದೆಲ್ಲದರ ಮಧ್ಯೆಯೂ ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ಪೋಸ್ಟ್ ಮಾಡೋದನ್ನು ಮಾತ್ರ ಮರೆಯೋದಿಲ್ಲ.

ಇತ್ತೀಚಿಗೆ ರಶ್ಮಿಕಾ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಹಾಟ್ ಫೋಸ್ ಕೊಟ್ಟಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅನಿಮಲ್ ಚಿತ್ರದ ಸಕ್ಸಸ್ ಪಾರ್ಟಿಗೆ ರಶ್ಮಿಕಾ ಈ ಬ್ಲ್ಯಾಕ್ ಗೌನ್ ಧರಿಸಿದ್ದರು.

Tap to resize

ಕಿರಿಕ್‌ ಬೆಡಗಿಯ ಬ್ಲ್ಯಾಕ್ ಡ್ರೆಸ್‌ನ ಹಾಟ್‌ ಅವತಾರಕ್ಕೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಸಿಜ್ಲಿಂಗ್‌, ಹಾಟ್‌, ಬ್ಯೂಟಿ ಎಂದೆಲ್ಲಾ ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.

ಸಾಲು ಸಾಲು ಹಿಟ್‌ ಸಿನಿಮಾಗಳ ಬಳಿಕ ರಶ್ಮಿಕಾ ಮಂದಣ್ಣ ಮತ್ತೆ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಅನಿಮಲ್ ಸಿನಿಮಾದಲ್ಲಿ ಗೀತಾಂಜಲಿ ಪಾತ್ರದಲ್ಲಿ ರಶ್ಮಿಕಾ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಪುಷ್ಪಾ ಸಿನಿಮಾ ಹಿಟ್‌ ಆಗುವುದರೊಂದಿಗೆ ರಶ್ಮಿಕಾ ಮಂದಣ್ಣ ನಟನೆ ಎಲ್ಲರಿಗೂ ಅರ್ಥವಾಗಿದೆ. ಗ್ಲಾಮರ್‌ ಪಾತ್ರವೇ ಆಗಲಿ, ಡಿ ಗ್ಲಾಮರ್‌ ಪಾತ್ರವೇ ಆಗಲಿ ರಶ್ಮಿಕಾ ಯಶಸ್ವಿಯಾಗಿ ನಿಭಾಯಿಸುತ್ತಾರೆ.

ರಶ್ಮಿಕಾ ಮಂದಣ್ಣ ಪ್ರಸ್ತುತ ತಮ್ಮ ಇತ್ತೀಚಿನ ಬಾಲಿವುಡ್ ಚಿತ್ರವಾದ ಅನಿಮಲ್ ಸಿನಿಮಾ ಸೂಪರ್‌ಹಿಟ್ ಆಗಿರುವ ಖುಷಿಯಲ್ಲಿದ್ದಾರೆ. ಇದರಲ್ಲಿ ಅವರು ರಣಬೀರ್ ಕಪೂರ್ ಜೊತೆ ನಟಿಸಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ ಈ ಚಿತ್ರವು ಡಿಸೆಂಬರ್ 1 ರಂದು ಬಿಡುಗಡೆಯಾದಾಗಿನಿಂದ ಬಾಕ್ಸ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.

ಇದರ ಜೊತೆಗೆ ಪುಷ್ಪಾ 2 ಚಿತ್ರೀಕರಣದಲ್ಲಿ ನಿರತರಾಗಿರುವ ನಟಿ  ಚಿತ್ರೀಕರಣವನ್ನು ಮಧ್ಯದಲ್ಲಿಯೇ ಬಿಟ್ಟಿದ್ದಾರೆ ಎಂದು ಇತ್ತೀಚಿನ ಮಾಧ್ಯಮ ವರದಿಗಳು ಹೇಳಿವೆ.2ನೇ ಭಾಗದ ಚಿತ್ರೀಕರಣವನ್ನು ಮಧ್ಯದಲ್ಲೇ ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಕನ್ನಡದ ಕಿರಿಕ್ ಪಾರ್ಟಿಯಲ್ಲಿ ಮೊದಲ ಬಾರಿಗೆ ನಟಿಸಿದ ರಶ್ಮಿಕಾಗೆ ಆ ನಂತರ ಟಾಲಿವುಡ್, ಬಾಲಿವುಡ್‌ನಲ್ಲಿ ಲಕ್ ಕುದುರಿತು. ಆದರೂ ಇವತ್ತಿಗೂ ನಟಿ ಹಲವಾರು ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ.

ಆದರೂ ರಶ್ಮಿಕಾ ವಿವಾದಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಸಿನಿಮಾ ಕೆಲಸಗಳಲ್ಲಿ ಬಿಝಿಯಾಗಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

ಇದೆಲ್ಲದರ ಮಧ್ಯೆ ಈಗ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಸಹ ಬರುತ್ತಿದೆ. ಫೆಬ್ರವರಿ ಎರಡನೇ ವಾರದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ.  

Latest Videos

click me!