ಸ್ಟೈಲಿಶ್ ಗೌನ್‌ ತೊಟ್ಟ ಫೋಟೋಸ್ ಶೇರ್ ಮಾಡಿದ ನಟಿ ಸ್ನೇಹಾ, ವಯಸ್ಸು 42 ಅಂದ್ರೆ ನಂಬೋಕಾಗ್ತಿಲ್ಲ ಎಂದ ಫ್ಯಾನ್ಸ್‌!

Published : Jan 14, 2024, 04:32 PM ISTUpdated : Jan 14, 2024, 04:45 PM IST

ಖ್ಯಾತ ನಟಿ ನಟಿ ಸ್ನೇಹಾ ಸಿನಿರಂಗದಿಂದ ದೂರವುಳಿದಿದ್ರೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ. ಸದ್ಯ ಗೌನ್ ತೊಟ್ಟಿರೋ ಅವ್ರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

PREV
18
ಸ್ಟೈಲಿಶ್ ಗೌನ್‌ ತೊಟ್ಟ ಫೋಟೋಸ್ ಶೇರ್ ಮಾಡಿದ ನಟಿ ಸ್ನೇಹಾ, ವಯಸ್ಸು 42 ಅಂದ್ರೆ ನಂಬೋಕಾಗ್ತಿಲ್ಲ ಎಂದ ಫ್ಯಾನ್ಸ್‌!

ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಮಿಂಚಿದ ಖ್ಯಾತ ನಟಿ ನಟಿ ಸ್ನೇಹಾ. ಸದ್ಯ ಮದುವೆಯ ನಂತರ ನಟಿ, ಚಿತ್ರರಂಗದಿಂದ ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಯಾವುದೇ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ. ಬದಲಿಗೆ ಗಂಡ-ಮಕ್ಕಳೊಂದಿಗೆ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. 

28

ಹೋಮ್ಲಿ ಗರ್ಲ್ ಎಂದೇ ಹೆಸರು ಪಡೆದುಕೊಂಡಿರುವ ಸ್ನೇಹಾ ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಸುಂದರ ಪೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿರುತ್ತಾರೆ. ಟ್ರೆಡಿಶನಲ್‌, ಮಾಡರ್ನ್‌ ಲುಕ್‌ನಲ್ಲಿ ಫೋಟೋಸ್ ಪೋಸ್ಟ್ ಮಾಡುತ್ತಾರೆ.

38

ಸದ್ಯ ತಮಿಳಿನ ಈ ಖ್ಯಾತ ನಟಿ ನೇರಳೆ ಬಣ್ಣದ ಶೈನಿಂಗ್ ಗೌನ್‌ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಡಾರ್ಕ್‌ ಪರ್ಪಲ್‌ ಗೌನ್‌ನಲ್ಲಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಈ ಎಲಿಗೆಂಟ್ ಲುಕ್‌ಗೆ ಅಭಿಮಾನಿಗಳು ಸಹ ಫಿದಾ ಆಗಿದ್ದಾರೆ.

48

ವಾವ್ಹ್‌, ಬ್ಯೂಟಿಫುಲ್‌, ಹಾಟಿ, ಗಾರ್ಜಿಯಸ್ ಎಂದೆಲ್ಲಾ ಕಮೆಂಟಿಸಿದ್ದಾರೆ. ಸ್ನೇಹಾ, ಹೆಚ್ಚಾಗಿ ಟ್ರೆಡಿಶನಲ್ ಲುಕ್‌ನಲ್ಲಿ ಫೋಟೋಸ್ ಪೋಸ್ಟ್ ಮಾಡುತ್ತಿರುತ್ತಾರೆ. ಕೆಲವೇ ಕೆಲವೊಮ್ಮೆ ಮಾಡರ್ನ್ ಗೌನ್ ಧರಿಸಿರುವ ಫೋಟೋ ಪೋಸ್ಟ್ ಮಾಡುತ್ತಾರೆ.

58

ನಟಿ ಸೌಂದರ್ಯ ಮೃತಪಟ್ಟ ನಂತರ ಅವರು ಅಭಿನಯಿಬೇಕಿದ್ದ ಹಲವು ಸಿನಿಮಾಗಳಲ್ಲಿ ಜೀವ  ತುಂಬಿದ್ದು ಸ್ನೇಹಾ. ಆದರೆ ನಟ ಪ್ರಸನ್ನರನ್ನು ಮದುವೆಯಾದ ನಂತರ ಯಾವುದೇ ಸಿನಿಮಾದಲ್ಲಿ ಅಭಿನಯಿಸಿಲ್ಲ. ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದಾರೆ

68

ಮಲಯಾಳಂ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ಈ ನಟಿ ಕನ್ನಡದ ಸಿನಿಮಾದಲ್ಲೂ ನಟಿಸಿದ್ದಾರೆ. ರವಿಚಂದ್ರನ್ ಜೊತೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ದ್ರೌಪದಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

78

ಸ್ನೇಹಾ ಅವರು ಅಕ್ಟೋಬರ್ 12, 1981 ರಂದು ಭಾರತದ ಮುಂಬೈನಲ್ಲಿ ಜನಿಸಿದರು. ಇವರ ಹುಟ್ಟು ಹೆಸರು ಸುಹಾಸಿನಿ ರಾಜಾರಾಂ.
ಅವಳು ಮಾಡೆಲ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

88

ಅತ್ಯುತ್ತಮ ನಟಿಗಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅವರ ಅಭಿನಯಕ್ಕಾಗಿ ಅವರು ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2012ರಲ್ಲಿ, ಸ್ನೇಹಾ ಸಹ ನಟ ಪ್ರಸನ್ನರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ತಮಿಳು ಚಲನಚಿತ್ರ 'ಅಚ್ಚಮುಂಡು ಅಚ್ಚಮುಂಡು'ನಲ್ಲಿ ಇಬ್ಬರಿಗೂ ಪರಿಚಯವಾಗಿತ್ತು.

Read more Photos on
click me!

Recommended Stories