ನೀಲಿ ಸೀರೆಯಲ್ಲಿ ಮುದ್ದಾಗಿ ಪೋಸ್ ಕೊಟ್ಟ ಕರಾವಳಿ ಬೆಡಗಿ, ಬ್ಲೂ ಕ್ವೀನ್ ಎಂದು ಹೊಗಳಿದ ಫ್ಯಾನ್ಸ್‌

Published : Jan 14, 2024, 11:34 AM IST

ಕರ್ನಾಟಕ ಮೂಲದ ಚೆಲುವೆ ಕೃತಿ ಶೆಟ್ಟಿ, ತೆಲುಗು, ತಮಿಳು ಚಿತ್ರರಂಗದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್. ಇತ್ತೀಚೆಗೆ ಅವರು ಬ್ಲೂ ಕಲರ್ ಸ್ಯಾರಿಯಲ್ಲಿ ಸಖತ್ ಸ್ಟೈಲಿಶ್ ಆಗಿ ಫೋಸ್ ನೀಡಿದ್ದು, ಪಡ್ಡೆಹುಡುಗರ ಮನಸ್ಸು ಕದ್ದಿದ್ದಾರೆ.  

PREV
18
ನೀಲಿ ಸೀರೆಯಲ್ಲಿ ಮುದ್ದಾಗಿ ಪೋಸ್ ಕೊಟ್ಟ ಕರಾವಳಿ ಬೆಡಗಿ, ಬ್ಲೂ ಕ್ವೀನ್ ಎಂದು ಹೊಗಳಿದ ಫ್ಯಾನ್ಸ್‌

ಕರ್ನಾಟಕ ಮೂಲದ ಚೆಲುವೆ ಕೃತಿ ಶೆಟ್ಟಿ, ತೆಲುಗು, ತಮಿಳು ಚಿತ್ರರಂಗದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್. ಇತ್ತೀಚೆಗೆ ಅವರು ಬ್ಲೂ ಕಲರ್ ಸ್ಯಾರಿಯಲ್ಲಿ ಸಖತ್ ಸ್ಟೈಲಿಶ್ ಆಗಿ ಫೋಸ್ ನೀಡಿದ್ದು, ಪಡ್ಡೆಹುಡುಗರ ಮನಸ್ಸು ಕದ್ದಿದ್ದಾರೆ.  

28

ಬ್ಲ್ಯೂ ಸೀರೆಯುಟ್ಟ ಕೃತಿ ಶೆಟ್ಟಿ ಹೇರ್ ಓಪನ್ ಬಿಟ್ಟು ಮುದ್ದು ಮುದ್ದಾಗಿ ಫೋಟೋಗೆ ಫೋಸ್ ನೀಡಿದ್ದು, 'ಹ್ಯಾಪಿ ಸಂಕ್ರಾಂತಿ' ಎಂದು ಶೀರ್ಷಿಕೆ ನೀಡಿದ್ದಾರೆ.

38

ಟಾಲಿವುಡ್ ಇಂಡಸ್ಟ್ರಿಯಲ್ಲಿ ಮೋಸ್ಟ್ ವಾಂಟೆಡ್ಹೀರೋಯಿನ್‌ಗಳಲ್ಲಿ ಕೃತಿ ಶೆಟ್ಟಿ  ಒಬ್ಬರು.  ಮಂಗಳೂರಿನ ಬೆಡಗಿ ಈಕೆ. ಹಲವು ಖ್ಯಾತ ನಟರ ಜೊತೆ ತೆರೆ ಹಂಚಿಕೊಂಡು ಮಿಂಚುತ್ತಿದ್ದಾರೆ. ಆದ್ರೆ ಇತ್ತೀಚಿಗೆ ನಟಿಸಿದ ಹಲವು ಸಿನಿಮಾಗಳು ಫ್ಲಾಪ್ ಆಗುತ್ತಿವೆ. ಆದರೂ ನಟಿ ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರ್ತಾರೆ.

48

ಬ್ಲೂ ಸೀರೆಯ ಈ ಫೋಟೋಗೆ ನೆಟ್ಟಿಗರು ಲೈಕ್ಸ್‌, ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ. ಬ್ಲೂ ಕ್ವೀನ್‌, ಗಾರ್ಜಿಯಸ್, ಬ್ಯೂಟಿಫುಲ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

58

ಕೃತಿ ಶೆಟ್ಟಿ ನಟನೆ ಆರಂಭಿಸಿದ್ದು ಹಿಂದಿ ಸಿನಿಮಾ ಮೂಲಕ. ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಸಿನಿಮಾದಲ್ಲಿ ಬಾಲನಟಿಯಾಗಿ ಕೃತಿ ನಟಿಸಿದ್ದರು. ಕೃತಿ ಶೆಟ್ಟಿ ‘ಉಪ್ಪೇನ’ ಚಿತ್ರದ ಮೂಲಕ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.  

68

ಈ ಸಿನಿಮಾ ಸಖತ್‌ ಹಿಟ್‌ ಆಗಿತ್ತು.  ನಾಯಕಿಯಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾದಲ್ಲೇ ತನ್ನ ಅಭಿನಯ ಮತ್ತು ಸೌಂದರ್ಯದ ಕೃತಿ ಸಿನಿ ಪ್ರೇಕ್ಷಕರ ಮನಗೆದ್ದರು.

78

ಉಪ್ಪೇನಾ ನಂತರ ನಾನಿ ಜತೆ ‘ಶ್ಯಾಮ್ ಸಿಂಗ ರಾಯ್’ ಹಾಗೂ ನಾಗ ಚೈತನ್ಯ ಜೊತೆ ‘ಬಂಗಾರರಾಜು’ ಸಿನಿಮಾಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು.

88

ಇತ್ತೀಚಿಗೆ ಕೃತಿ ನಟಿಸಿದ ಸಾಲು ಸಾಲು ಚಿತ್ರಗಳ ಫ್ಲಾಪ್‌ ಆಗಿದ್ದಲ್ಲದೇ ಅವರಿಗೆ ಬರುತ್ತಿದ್ದ ಆಫರ್‌ಗಳು ದಿಢೀರ್ ಕಡಿಮೆಯಾಗಿದೆ. ಇತ್ತೀಚೆಗಷ್ಟೇ ಕೃತಿ ‘ಕಸ್ಟಡಿ’ ಸಿನಿಮಾ ಮೂಲಕ ಕಮ್‌ಬ್ಯಾಕ್‌ ಮಾಡಿದ್ದರು.  

Read more Photos on
click me!

Recommended Stories