ಮಳೆಗಾಲ; ಹೊಳೆಯೋ ಚರ್ಮಕ್ಕೆ ಮಾಯಿಶ್ಚರೈಸರ್‌ ಬೇಕಾ? ಮನೆಯಲ್ಲೇ ಹೀಗ್ ಮಾಡಿ!

First Published | Jun 20, 2024, 5:39 PM IST

ಯಾವುದೇ ವಯಸ್ಸು ಅಥವಾ ಕಾಲವಿರಲಿ ಉತ್ತಮ ಚರ್ಮದ ಆರೈಕೆ ಅತ್ಯಗತ್ಯ.  ಮಳೆಗಾಲವೆಂದರೆ ಚರ್ಮಕ್ಕೆ ಮಾಯಿಶ್ಚರೈಸಿಂಗ್ ಬೇಡವೆಂದಲ್ಲ. ಮಾನ್ಸೂನ್‌ನಲ್ಲಿ ಕೂಡ ಡೀಹೈಡ್ರೇಶನ್ ಕಾರಣದಿಂದ ಚರ್ಮ ಡ್ರೈ ಆಗುತ್ತದೆ. ಈ ಮಳೆಗಾಲದಲ್ಲಿ ಹೊಳೆಯುವ ಮತ್ತು ಹೈಡ್ರೀಕರಿಸಿದ ಚರ್ಮವನ್ನು ಪಡೆಯುಲು ಈ ಮಾಯಿಶ್ಚರೈಸರ್‌ಗಳನ್ನು ಮನೆಯಲ್ಲೇ ಮಾಡಿ ಬಳಸಿ.

ಜೊಜೊಬಾ - ಬಾದಾಮಿ ಎಣ್ಣೆ ಮಾಯಿಶ್ಚರೈಸರ್:
ಬಾದಾಮಿ ಎಣ್ಣೆ ಮತ್ತು ಜೊಜೊಬಾ ಎಣ್ಣೆಯ ಸಮಾನ ಭಾಗಗಳನ್ನು ಮಿಶ್ರಣ ಮಾಡಿ. ರಾತ್ರಿ  ಮಲಗುವ ಮೊದಲು ಮುಖದ ಮೇಲೆ ನಿಧಾನವಾಗಿ ಮಸಾಜ್ ಮಾಡಿದರೆ ಚರ್ಮ ಹೊಳೆಯುತ್ತದೆ.

ಶಿಯಾ ಬಟರ್‌ ಮತ್ತು ಆಲಿವ್ ಆಯಿಲ್‌:
ಎರಡು ಚಮಚ ಶಿಯಾ ಬಟರ್‌ ಅನ್ನು ಒಂದು ಚಮಚ ಆಲಿವ್ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಇದು ಶುಷ್ಕತೆಯನ್ನು ತೊಡೆದು ಹಾಕಲು ಮತ್ತು ಮಳೆಗಾಲದಲ್ಲಿ  ಚರ್ಮವನ್ನು ರಿಫ್ರೆಶ್ ಮಾಡುತ್ತದೆ.

Latest Videos


ರೋಸ್ ವಾಟರ್, ಗ್ಲಿಸರಿನ್ ಮತ್ತು ಅಲೋವೆರಾ:
ಅರ್ಧ ಕಪ್ ಗ್ಲಿಸರಿನ್, ರೋಸ್ ವಾಟರ್ ಮತ್ತು ಅಲೋವೆರಾ ಜೆಲ್ ಎಲ್ಲಾ ಮೂರು ಪದಾರ್ಥಗಳನ್ನು ಮಿಶ್ರಣ ಮಾಡಿ ಮತ್ತು ಒದ್ದೆಯಾದ ಚರ್ಮದ ಮೇಲೆ ಹಚ್ಚಿಕೊಂಡಾಗ ದೊರೆಯುವ ಹೈಡ್ರೇಶನ್ ಅನ್ನು ಖಂಡಿತ ಇಷ್ಟಪಡುತ್ತೀರಿ.

Hibiscus

ಹೈಬಿಸ್ಕಸ್ ಮತ್ತು ಆರ್ಗಾನ್ ಆಯಿಲ್:
ಎರಡು ಚಮಚ ತೆಂಗಿನ ಎಣ್ಣೆಯನ್ನು ಕರಗಿಸಿ, ಅದಕ್ಕೆ ಒಂದು ಚಮಚ ಆರ್ಗನ್ ಎಣ್ಣೆ ಮತ್ತು ದಾಸವಾಳದ ಪುಡಿ ಸೇರಿಸಿ. ನಂತರ ಮಿಶ್ರಣವನ್ನು ಸೋಸಿ ರೋಸ್‌ ಆಯಿಲ್‌ನ ಕೆಲವು ಹನಿಗಳನ್ನು ಸೇರಿಸಿ ಬಳಸಿದರೆ ಗ್ಲೋಯಿಂಗ್‌ ಸ್ಕೀನ್‌  (Glowing Skin) ಪಡೆಯಬಹುದು.

ಬಾದಾಮಿ - ಬೀವ್ಯಾಕ್ಸ್‌ ಮಾಯಿಶ್ಚರೈಸರ್:
ಜೇನು ಮೇಣವನ್ನು ಡಬಲ್ ಬಾಯ್ಲರ್‌ನಲ್ಲಿ ಕರಗಿಸಿ ಕೊಳ್ಳಿ.  ಒಮ್ಮೆ ಮೇಣ ಕರಗಿದ ನಂತರ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿ. ಮಿಶ್ರಣವನ್ನು ತಣ್ಣಗಾಗಲು ಮತ್ತು ಗಟ್ಟಿಯಾಗಲು ಬಿಡಿ.

ಲೈಕೋರೈಸ್ ಟೀ ಮತ್ತು ಸೂರ್ಯಕಾಂತಿ ಎಣ್ಣೆ:
ಮಾನ್ಸೂನ್‌ನಲ್ಲಿ ಉತ್ತಮ ಮಾಯಿಶ್ಚರೈಸರ್‌ಗಾಗಿ ಒಂದು ಬಟ್ಟಲಿನಲ್ಲಿ ಎರಡು ಕಪ್ ಸೂರ್ಯಕಾಂತಿ ಎಣ್ಣೆಗೆ ಒಂದು ಕಪ್ ಕುದಿಸಿದ ಲೈಕೋರೈಸ್ ಟೀ ಮತ್ತು ಅಲೋವೆರಾ ಜೆಲ್ ಅನ್ನು ಮಿಶ್ರಣ ಮಾಡಿ ಬಳಸಿ.

ಶಿಯಾ ಬಟರ್‌ ಮತ್ತು ರೋಸ್ ಹಿಪ್ ಸೀಡ್ ಆಯಿಲ್ ಮಾಯಿಶ್ಚರೈಸರ್:
6 ಚಮಚ ಶಿಯಾ ಬಟರ್‌ ಅನ್ನು ಕರಗಿಸಿ ನಂತರ ಕೆಲವು ಹನಿ ರೋಸ್ ಹಿಪ್ ಸೀಡ್ ಆಯಿಲ್‌ ಮತ್ತು ಆವಕಾಡೊ ಎಣ್ಣೆಯನ್ನು ಸೇರಿಸಿ. ಚೆನ್ನಾಗಿ ಮಿಕ್ಸ್‌ ಮಾಡಿ ಗಾಳಿಯಾಡದ ಜಾರ್‌ನಲ್ಲಿ ಇರಿಸಿ ಮತ್ತು ಪ್ರತಿದಿನ ಬಳಸಿ.

click me!