ಆರೋಗ್ಯಕ್ಕೆ ಒಳ್ಳೇದಂತ ತಿನ್ನುವ ಫ್ರಿಡ್ಜ್‌ನಲ್ಲಿರುವ ಈ 3 ಆಹಾರವೇ ನಮ್ಮ ಹೃದಯಕ್ಕೆ ಡೇಂಜರ್!

Published : Mar 15, 2026, 07:39 PM IST

Heart health tips: ನಾವು ಒಳ್ಳೇದು ಅಂದುಕೊಂಡು ತಿನ್ನುವ ಆಹಾರಗಳು ನಿಜವಾಗಿಯೂ ನಮ್ಮ ಹೃದಯಕ್ಕೆ ಒಳ್ಳೆಯದೇ? ಸಾವಯವ (Organic) ಮತ್ತು ಪ್ರೋಟೀನ್ ಲೇಬಲ್ ಇರುವ ಕೆಲವು ಪದಾರ್ಥಗಳು ನಮಗೆ ತಿಳಿಯದಂತೆಯೇ ರಕ್ತದಲ್ಲಿ ಸಕ್ಕರೆ ಮತ್ತು ಉರಿಯೂತವನ್ನು ಹೆಚ್ಚಿಸುತ್ತಿವೆ.

PREV
15
ಹಾರ್ಟ್ ಸ್ಪೆಷಲಿಸ್ಟ್ ಹೇಳಿದ್ದೇನು?

ಈಗಿನ ಕಾಲದಲ್ಲಿ ನಾವೆಲ್ಲರೂ ಆರೋಗ್ಯದ ಬಗ್ಗೆ ತುಂಬಾ ಯೋಚನೆ ಮಾಡುತ್ತೇವೆ. ಅದರಲ್ಲೂ ಹೃದಯದ ಆರೋಗ್ಯದ ವಿಚಾರಕ್ಕೆ ಬಂದರೆ ಸ್ವಲ್ಪ ಹೆಚ್ಚು ಜಾಗ್ರತೆ ವಹಿಸಬೇಕು. ಯಾಕಂದ್ರೆ ಹಾರ್ಟ್ ಸಮಸ್ಯೆಗಳು ತುಂಬಾ ಸದ್ದಿಲ್ಲದೆ ಬರುತ್ತವೆ. ನಾವು ಸಾಮಾನ್ಯವಾಗಿ ಫ್ರಿಡ್ಜ್‌ನಲ್ಲಿ ಇರುವ ಅಥವಾ ಪ್ಯಾಕ್ ಮಾಡಿದ ಆಹಾರಗಳು ತುಂಬಾ ಒಳ್ಳೆಯದು ಅಂತ ಅಂದುಕೊಳ್ಳುತ್ತೇವೆ. ಆದರೆ ಹಾರ್ಟ್ ಸ್ಪೆಷಲಿಸ್ಟ್ ಡಾ. ಸಂಜಯ್ ಭೋಜರಾಜ್ ಅವರು ಹೇಳುವ ಪ್ರಕಾರ, ನಮಗೆ ಆರೋಗ್ಯಕರ ಅಂತ ಕಾಣುವ, ಸದಾ ಫ್ರಿಡ್ಜ್‌ನಲ್ಲಿ ಕಾಣಸಿಗುವ ಕೆಲವು ಆಹಾರಗಳು ಅಷ್ಟೊಂದು ಒಳ್ಳೆಯದಲ್ಲ.

25
ನಾವು ಯಾಕೆ ಹುಷಾರಾಗಿರಬೇಕು?

ನಮಗೆ ತಿಳಿಯದಂತೆ ನಾವು ತಿನ್ನುವ ಕೆಲವು ಪದಾರ್ಥಗಳು ನಮ್ಮ ರಕ್ತದಲ್ಲಿ ಸಕ್ಕರೆ ಮತ್ತು ಟ್ರೈಗ್ಲಿಸರೈಡ್ ಅಂಶವನ್ನು ಜಾಸ್ತಿ ಮಾಡುತ್ತವೆ. ಇದು ನಮ್ಮ ಹೃದಯದ ಮೇಲೆ ಒತ್ತಡ ಹಾಕುತ್ತದೆ. ಆ ಆಹಾರಗಳು ಯಾವುವು ಅಂತ ಇಲ್ಲಿ ನೋಡೋಣ..

35
ಫ್ಲೇವರ್ಡ್ ಮೊಸರು (Flavoured Yogurt)

ಇದರಲ್ಲಿ ಪ್ರೋಟೀನ್ ಇರುತ್ತದೆ ಅಂತ ತುಂಬಾ ಜನ ತಿನ್ನುತ್ತಾರೆ. ಆದರೆ ಅಸಲಿ ವಿಷಯ ಏನೆಂದರೆ, ಇದರಲ್ಲಿ ಸಕ್ಕರೆ ಅಂಶ ಅತಿಯಾಗಿರುತ್ತದೆ. ಒಂದು ಕಪ್ ಫ್ಲೇವರ್ಡ್ ಮೊಸರು ತಿಂದರೆ ಸುಮಾರು 20-25 ಗ್ರಾಂ ಸಕ್ಕರೆ ನಿಮ್ಮ ಹೊಟ್ಟೆಗೆ ಸೇರುತ್ತದೆ. ಅಂದರೆ ಇದು ಬೆಳಗ್ಗೆ ಸಿಹಿ ತಿಂಡಿ ತಿಂದಷ್ಟೇ ಅಪಾಯಕಾರಿ.

45
ಬಾಟಲ್‌ನಲ್ಲಿರುವ ಸ್ಮೂತಿ ಮತ್ತು ಜ್ಯೂಸ್‌ಗಳು

ಮಾರ್ಕೆಟ್‌ನಲ್ಲಿ ಸಿಗುವ ಬಾಟಲ್ ಜ್ಯೂಸ್‌ಗಳು ಅಥವಾ 'ಗ್ರೀನ್ ಜ್ಯೂಸ್' ಆರೋಗ್ಯಕ್ಕೆ ಒಳ್ಳೆಯದು ಅಂತ ಮೋಸ ಹೋಗಬೇಡಿ. ಇವುಗಳನ್ನು ಜ್ಯೂಸ್ ಮಾಡುವಾಗ ಹಣ್ಣಿನಲ್ಲಿರುವ ನಾರಿನಂಶ (Fibre) ಪೂರ್ತಿ ಹೋಗಿರುತ್ತದೆ. ಹೀಗಾಗಿ ನೀವು ಕುಡಿಯುತ್ತಿರುವುದು ಕೇವಲ ಸಕ್ಕರೆಯ ನೀರು ಅಷ್ಟೇ. ಇದು ರಕ್ತದಲ್ಲಿ ಶುಗರ್ ಲೆವೆಲ್ ಅನ್ನು ತಕ್ಷಣ ಹೆಚ್ಚು ಮಾಡುತ್ತದೆ.

55
ಸಲಾಡ್ ಡ್ರೆಸ್ಸಿಂಗ್‌ಗಳು

ಸಲಾಡ್ ಒಳ್ಳೆಯದು ಅಂತ ಅದರ ಮೇಲೆ ಹಾಕುವ ಡ್ರೆಸ್ಸಿಂಗ್‌ಗಳನ್ನು ಬಳಸಬೇಡಿ. ಇವುಗಳಲ್ಲಿ ಅತಿಯಾದ ಎಣ್ಣೆ, ಸಕ್ಕರೆ ಮತ್ತು ಕೆಡದಂತೆ ತಡೆಯುವ ಕೆಮಿಕಲ್‌ಗಳನ್ನು ಹಾಕಿರುತ್ತಾರೆ. ಇವು ನಿಮ್ಮ ದೇಹದಲ್ಲಿ ಉರಿಯೂತ ಮತ್ತು ಬೊಜ್ಜನ್ನು ಜಾಸ್ತಿ ಮಾಡುತ್ತವೆ.

ಈ ಪದಾರ್ಥಗಳನ್ನು ಯಾವಾಗಲೋ ಒಮ್ಮೆ ತಿಂದರೆ ತೊಂದರೆಯಿಲ್ಲ, ಆದರೆ ದಿನಾ ಇವುಗಳನ್ನು ಬಳಸಿದರೆ ಶುಗರ್ ಮತ್ತು ಹಾರ್ಟ್ ಸಮಸ್ಯೆಗಳು ಗ್ಯಾರಂಟಿ ಅಂತ ಡಾಕ್ಟರ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories