ಸಾರಾ ತೆಂಡೂಲ್ಕರ್ ಧರಿಸಿರುವ ಈ ನೆಕ್ಲೇಸ್ ಬೆಲೆಗೆ ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ಖರೀದಿಸ್ಬೋದು

Published : Mar 08, 2026, 11:21 AM IST

Sara Tendulkar wedding look: ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಂದೋಕ್ ಅವರ ವಿವಾಹ ಸಂಭ್ರಮವು ಇಡೀ ದೇಶದ ಗಮನ ಸೆಳೆದಿದೆ. ಮಾರ್ಚ್ 5 ರಂದು ಮುಂಬೈನಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ವಧು-ವರರಿಗಿಂತಲೂ ಹೆಚ್ಚು ಸುದ್ದಿಯಾಗುತ್ತಿರುವುದು ಸಾರಾ ಲುಕ್. 

PREV
16
ಎಲ್ಲರ ಗಮನ ಸೆಳೆದ ನೆಕ್ಲೇಸ್

ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಂದೋಕ್ ಅವರ ವಿವಾಹ ಸಮಾರಂಭದಲ್ಲಿ ಸಾರಾ ತೆಂಡೂಲ್ಕರ್ ಧರಿಸಿದ್ದ ಪಾರಂಪರಿಕ ನೆಕ್ಲೇಸ್ ಈಗ ಎಲ್ಲರ ಗಮನ ಸೆಳೆದಿದೆ.

26
ಅದ್ದೂರಿಯಾಗಿ ನಡೆದ ಮದುವೆ

ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಂದೋಕ್ ಮಾರ್ಚ್ 5, 2026 ರಂದು ಸರಳವಾಗಿ ವಿವಾಹವಾದರು. ಸಚಿನ್ ಮತ್ತು ಅಂಜಲಿ ತೆಂಡೂಲ್ಕರ್ ದಂಪತಿಯು ಮುಂಬೈನ 'ದಿ ಸೇಂಟ್ ರೆಜಿಸ್' ಹೋಟೆಲ್‌ನಲ್ಲಿ ಅದ್ಧೂರಿ ಔತಣಕೂಟವನ್ನು ಏರ್ಪಡಿಸಿದ್ದರು. ಈ ಸಮಾರಂಭದಲ್ಲಿ ಸಿನಿಮಾ, ಕ್ರೀಡೆ ಮತ್ತು ಉದ್ಯಮ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.

36
'ಮೀನಾಕರಿ' ನೆಕ್ಲೇಸ್

ಮದುವೆಯಲ್ಲಿ ವಧು-ವರರು ಕೆಂಪು ಬಣ್ಣದ ಉಡುಪಿನಲ್ಲಿ ಕಂಗೊಳಿಸಿದರೆ, ಸಾರಾ ತೆಂಡೂಲ್ಕರ್ ಅವರು ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿದ ಸೀರೆ ಮತ್ತು ಸುನಿತಾ ಶೇಖಾವತ್ ಅವರ ಸಂಗ್ರಹದ 'ಮೀನಾಕರಿ' ನೆಕ್ಲೇಸ್ ಧರಿಸಿ ಎಲ್ಲರ ದೃಷ್ಟಿ ತಮ್ಮತ್ತ ಸೆಳೆಯುವಂತೆ ಮಾಡಿದರು.

46
ನೆಕ್ಲೇಸ್ ವಿಶೇಷತೆ ಏನು?

ಸೆಲೆಬ್ರಿಟಿ ಜ್ಯುವೆಲ್ಲರಿ ತಜ್ಞ ಪ್ರಿಯಾಂಶು ಗೋಯೆಲ್ ಅವರ ಪ್ರಕಾರ, ಸಾರಾ ಅವರು ಜೈಪುರದ ಸುನಿತಾ ಶೇಖಾವತ್ ವಿನ್ಯಾಸಗೊಳಿಸಿದ 'ಕಾರ್ನೇಶನ್ ರಿವರ್ಸಿಬಲ್' (ಎರಡೂ ಬದಿ ಧರಿಸಬಹುದಾದ) ನೆಕ್ಲೇಸ್ ಧರಿಸಿದ್ದರು. ಈ ನೆಕ್ಲೇಸ್ ಅಂದಾಜು ಬೆಲೆ 40 ರಿಂದ 60 ಲಕ್ಷ ರೂಪಾಯಿ. ನೆಕ್ಲೇಸ್ ಮುಂಭಾಗದಲ್ಲಿ ಸಾಂಪ್ರದಾಯಿಕ ಕುಂದನ್ ಸೆಟ್ ಪೋಲ್ಕಿಗಳು ಮತ್ತು ಹೂವಿನ ವಿನ್ಯಾಸಗಳಿದ್ದರೆ, ಹಿಂಭಾಗದಲ್ಲಿ ಅದ್ಭುತವಾದ ಮೀನಾಕರಿ ವರ್ಕ್‌ ಇದೆ.

56
ಎಷ್ಟು ದಿನ ಬೇಕಾಯ್ತು?

ಇಂತಹ ಒಂದು ನೆಕ್ಲೇಸ್ ಡಿಸೈನ್ ಕಂಪ್ಲೀಟ್ ಮಾಡಲು ಸುಮಾರು 360 ಗಂಟೆ ಹಾರ್ಡ್ ವರ್ಕ್ ಮಾಡಬೇಕಾಗುತ್ತದೆ.ಇದರಲ್ಲಿ ಕೊಲಂಬಿಯನ್ ಪಚ್ಚೆಗಳು (Emeralds) ಮತ್ತು ಸೌತ್ ಸೀ ಮುತ್ತುಗಳನ್ನು ಬಳಸಲಾಗಿದೆ. ಇದು ಪರಂಪರೆ ಮತ್ತು ಆಧುನಿಕತೆಯ ಸೊಗಸಾದ ಮಿಶ್ರಣವಾಗಿದೆ.

66
ಸಾರಾ ಅವರ ಲುಕ್ ಹೇಗಿತ್ತು?

ಸಾರಾ ತೆಂಡೂಲ್ಕರ್ ಅವರು ಧರಿಸಿದ್ದ ಗುಲಾಬಿ ಬಣ್ಣದ ಸೀರೆಯು ಅರ್ಜುನ್ ಮದುವೆಯಲ್ಲಿ ರಿಚ್ ಲುಕ್ ನೀಡಿತು. ಈ ಆರು ಗಜದ ಸೀರೆಯ ಜೊತೆಗೆ ಅಂಚಿನಲ್ಲಿ ಮುತ್ತುಗಳ ಹನಿಗಳಂತಹ ವಿನ್ಯಾಸವಿದ್ದ ರೋಸ್ ಪಿಂಕ್ ಬಣ್ಣದ ಬ್ಲೌಸ್ ಧರಿಸಿದ್ದರು. ತಮ್ಮ ಉಡುಪು ಮತ್ತು ಆಭರಣಗಳಿಗೆ ಒಪ್ಪುವಂತೆ 'ಡ್ಯೂಯಿ ಮತ್ತು ಗ್ಲಿಟ್ಟರಿ' ಮೇಕಪ್ ಮಾಡಿಕೊಂಡಿದ್ದರು. ಅಲ್ಲದೆ, ಕೈಯಲ್ಲಿನ ಮೆಹಂದಿ ವಿನ್ಯಾಸ, ಸಾಲಾಗಿ ಧರಿಸಿದ್ದ ಬಳೆಗಳು ಮತ್ತು ಮಧ್ಯಭಾಗದಲ್ಲಿ ಸೀಳಿದ ಕೇಶವಿನ್ಯಾಸವು (centre-parted hairdo) ಅವರ ಸಾಂಪ್ರದಾಯಿಕ ಸೌಂದರ್ಯವನ್ನು ಮತ್ತೊಂದು ಲೆವೆಲ್‌ಗೆ ಕೊಂಡೊಯ್ದಿತ್ತು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories