ಬಿಗ್ಬಾಸ್ ಕನ್ನಡ ಸೀಸನ್ 12 ಇದೇ 28ರಿಂದ ಆರಂಭವಾಗಲಿದ್ದು, ವೀಕ್ಷಕರಿಗೆ ಬಿಗ್ಬಾಸ್ ಮನೆಯೊಳಗೆ ಹೋಗುವ ಅವಕಾಶವಿದೆ. ಸೀರಿಯಲ್ ವೀಕ್ಷಿಸಿ ಉತ್ತರ ಗೊತ್ತಿದ್ದವರಿಗೂ ಹೇಗೆ ಉತ್ತರ ಕಳುಹಿಸುವುದು ತಿಳಿಯುತ್ತಿಲ್ಲ. ಆದ್ದರಿಂದ ಇಲ್ಲಿ ಹಂತ ಹಂತದ ಮಾಹಿತಿ ನೀಡಲಾಗಿದೆ.
ಬಿಗ್ಬಾಸ್ ಕನ್ನಡದ ಸೀಸನ್ 12ಕ್ಕೆ (Bigg Boss 12) ಇದೇ 28ರಿಂದ ಆರಂಭವಾಗಲಿದೆ. ಬಿಗ್ಬಾಸ್ ಮನೆಯೊಳಕ್ಕೆ ಹೋಗುವವರು ಯಾರು ಎನ್ನುವುದು ವೀಕ್ಷಕರಿಗೆ ತಿಳಿಯಬೇಕಿದೆಯಷ್ಟೇ. ಅಷ್ಟಕ್ಕೂ ಇದಾಗಲೇ ಸ್ಪರ್ಧಿಗಳು ಕೂಡ ಅಂತಿಮಗೊಂಡಿದ್ದು, ಎಲ್ಲರ ಹೆಸರುಗಳೂ ರಿವೀಲ್ ಆಗಿಲ್ಲ. ಅಂತೆ-ಕಂತೆ ಅಡಿ ಕೆಲವರ ಹೆಸರು ರಿವೀಲ್ ಆಗಿವೆ ಅಷ್ಟೇ. ಆದ್ದರಿಂದ ಯಾರು ಮನೆಯೊಳಕ್ಕೆ ಹೋಗುತ್ತಾರೆ ಎಂದು ನೋಡಲು 28ರ ವರೆಗೆ ಕಾಯಲೇಬೇಕಿದೆ.
26
ಜನಸಾಮಾನ್ಯರಿಗೆ ಅವಕಾಶ
ಬಿಗ್ಬಾಸ್ ವೀಕ್ಷಕರ ಪೈಕಿ ಹಲವರಿಗೆ ಬಿಗ್ಬಾಸ್ ಮನೆಯೊಳಕ್ಕೆ ಹೋಗುವ ಹಂಬಲ. ಸ್ಪರ್ಧಿಯಾಗಿ ಅಲ್ಲದಿದ್ದರೂ ಕೊನೆಯ ಪಕ್ಷ ಆ ಮನೆಯನ್ನು ಕಣ್ತುಂಬಿಸಿಕೊಳ್ಳುವ ಕಾತರ. ಕಳೆದ ಸೀಸನ್ನಲ್ಲಿಯೂ ಕೆಲವು ಜನಸಾಮಾನ್ಯರಿಗೆ ಅವಕಾಶ ನೀಡಲಾಗಿತ್ತು. ಅಷ್ಟಕ್ಕೂ ಸ್ಪರ್ಧಿಗಳಾಗಿ ಹೋಗಲು ಜನಸಾಮಾನ್ಯರಿಗೆ ಅವಕಾಶವೇ ಇಲ್ಲ. ಏಕೆಂದರೆ ಎಲ್ಲರಿಗೂ ತಿಳಿದಿರುವಂತೆ ಅಲ್ಲಿಗೆ ಹೋಗುವ ಅವಕಾಶ ಸಿಗುವುದು ಸೆಲೆಬ್ರಿಟಿಗಳಿಗೆ ಇಲ್ಲವೇ ಕಾಂಟ್ರವರ್ಸಿ ಮಾಡಿಕೊಂಡವರಿಗೆ ಮಾತ್ರ. ಆದ್ದರಿಂದ ಈ ಮನೆಯನ್ನು ಒಮ್ಮೆಯಾದರೂ ನೋಡಬೇಕು ಎನ್ನುವವರಿಗೆ ಅದು ಕನಸಿನ ಮಾತೇ ಎನ್ನುವಂತಾಗಿತ್ತು. ಆದರೆ ಇದೀಗ ವಾಹಿನಿ ರಿವೀಲ್ ಮಾಡಿರುವಂತೆ ಅದೃಷ್ಟಶಾಲಿಗಳಿಗೆ ಮನೆಯೊಳಕ್ಕೆ ಹೋಗುವ ಅವಕಾಶವಿದೆ.
36
ಬಿಗ್ಬಾಸ್ ಬಿಗ್ ಅಪ್ಡೇಟ್
ಇದಾಗಲೇ ಈ ಬಗ್ಗೆ ಕಲರ್ಸ್ ಕನ್ನಡ (Colors Kannada) ವಾಹಿನಿ ಪ್ರೊಮೋ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಪ್ರತಿದಿನ ಸಂಜೆ 6ರಿಂದ ರಾತ್ರಿ 10.30ರ ವರೆಗೆ ಕಲರ್ಸ್ ಕನ್ನಡದಲ್ಲಿ ಬರುವ ಸೀರಿಯಲ್ಗಳನ್ನು ನೋಡಿ, ಪ್ರತಿ ಸೀರಿಯಲ್ನ ಕೊನೆಯಲ್ಲಿ ಬರುವ ಪ್ರಶ್ನೆಗಳಿಗೆ ಜೀಯೋ ಸ್ಟಾರ್ನಲ್ಲಿ ಉತ್ತರಿಸಬೇಕು. ಅದೃಷ್ಟವಂತರಿಗೆ ಬಿಗ್ಬಾಸ್ ಮನೆಗೆ ಹೋಗಲು ಅವಕಾಶ ಸಿಗುತ್ತದೆ ಎಂದು ಹೇಳಲಾಗಿದೆ.
8ನೇ ತಾರೀಖಿನಿಂದ 12ನೇ ತಾರೀಖಿನವರೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ದೃಷ್ಟಿಬೊಟ್ಟು, ಪ್ರೇಮಕಾವ್ಯ, ಭಾಗ್ಯಲಕ್ಷ್ಮಿ, ಮುದ್ದುಸೊಸೆ, ನಿನಗಾಗಿ, ಭಾರ್ಗವಿ LLb, ನಂದಗೋಕುಲ, ಯಜಮಾನ, ರಾಮಚಾರಿ ಸೀರಿಯಲ್ಗಳನ್ನು ನೋಡಬೇಕು ಎಂದು ವಾಹಿನಿ ಹೇಳಿತ್ತು. ಇಂದು ಅದಕ್ಕೆ ಕೊನೆಯ ದಿನ.
56
ಜಿರೋ ಸ್ಟಾರ್ನಲ್ಲಿ ಉತ್ತರ
ಸೀರಿಯಲ್ ಮಧ್ಯೆ ಪ್ರಶ್ನೆ ಕೇಳಲಾಗುತ್ತದೆ. ಆ ಪ್ರಶ್ನೆಗಳಿಗೆ ಜಿಯೋ ಸ್ಟಾರ್ ಆ್ಯಪ್ನಲ್ಲಿ ಹೋಗಿ ಉತ್ತರ ಕೊಡಬೇಕಾಗುತ್ತದೆ. 100 ಮಂದಿ ಅದೃಷ್ಟಶಾಲಿಗಳಿಗೆ ಬಿಗ್ಬಾಸ್ ಮನೆಯೊಳಕ್ಕೆ ಹೋಗುವ ಅವಕಾಶ ಕಲ್ಪಿಸಲಾಗುತ್ತದೆ, ಅಲ್ಲಿ ಭಾಗವಹಿಸಲೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಲಾಗಿತ್ತು. 100 ಮಂದಿಗೆ ಅವಕಾಶ ಎನ್ನಲಾಗಿತ್ತು.
66
ಆ್ಯಪ್ ಡೌನ್ಲೋಡ್ ಮಾಡುವುದು ಹೇಗೆ?
ಆದರೆ, ಎಷ್ಟೋ ಜನಕ್ಕೆ ಉತ್ತರ ಗೊತ್ತಿದ್ದರೂ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಕಳುಹಿಸುವುದು ಕಷ್ಟವಾಗಿದೆ. ಅದಕ್ಕಾಗಿ ವಾಹಿನಿ ಈಗ ವಿಡಿಯೋ ರಿಲೀಸ್ ಮಾಡಿದ್ದು, ಅದರಲ್ಲಿ ಹಂತ ಹಂತದ ಮಾಹಿತಿ ಕೊಟ್ಟಿದೆ.
ಮೊದಲಿಗೆ JIO Star App ಅನ್ನು ಓಪನ್ ಮಾಡಿ.
ಬಳಿಕ ಸರ್ಚ್ ಇರುವಲ್ಲಿ Bigg Boss Kannada ಎಂದು ಟೈಪ್ ಮಾಡಿ
ಅಲ್ಲೇ ಕೆಳಗಡೆ ಬಿಗ್ಬಾಸ್ ಮನೆಗೆ ಬನ್ನಿ ಎಂದು ಬರೆದಿರುವುದನ್ನು ನೋಡಬಹುದು.