Bigg Bossಗೆ ಹೋಗಿದ್ದು ನನ್ನ ಜೀವನದ ಅತಿದೊಡ್ಡ ತಪ್ಪು, ನನ್ನ ಜೀವನವೇ ಹಾಳಾಯ್ತು ಎಂದ ಖ್ಯಾತ ನಟಿ

Published : Sep 12, 2025, 03:38 PM IST

ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರಿಂದ ತಮ್ಮ ವೃತ್ತಿಜೀವನದ ಅಂತರ ಹೆಚ್ಚಾಯಿತು ಎಂದು ನಟಿ ತೇಜಸ್ವಿ ಮಡಿವಾಡ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ನಕಾರಾತ್ಮಕ ಭಾವನೆ ಬೆಳೆಸಿಕೊಂಡಿದ್ದರಿಂದ ವೃತ್ತಿಜೀವನಕ್ಕೆ ಹಿನ್ನಡೆಯಾಯಿತು ಎಂದಿದ್ದಾರೆ.

PREV
17
ತೆಲಗು ಬಿಗ್​ಬಾಸ್​ ಬಗ್ಗೆ ನಟಿ

ಬಿಗ್ ಬಾಸ್  (Bigg Boss) ತೆಲುಗುವಿನಲ್ಲಿ ಸಕತ್​ ಸದ್ದು ಮಾಡಿದ್ದ ನಟಿ ತೇಜಸ್ವಿ ಮಡಿವಾಡ (Tejaswi Madivada). ಬೋಲ್ಡ್​ ನಟಿ ಎಂದೇ ಫೇಮಸ್​ ಆಗಿರೋ ಈಕೆ ದೇಹ ಪ್ರದರ್ಶನದಿಂದಲೇ ಫೇಮಸ್​ ಆದವರು. ತೆಲುಗಿನ ‘ಕೇರಿಂಥ’, ‘ಐಸ್ ಕ್ರೀಮ್’, ‘ಜತ ಕಲಿಸೇ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿ, ಬೋಲ್ಡ್​ ರೋಲ್​ಗಳಿಂದ ಸದ್ದು ಮಾಡಿದವರು. ಬಿಗ್​ಬಾಸ್​​ ಇಂಥವರಿಗೆ ವೇದಿಕೆ ಒದಗಿಸುವುದು ಗೊತ್ತೇ ಇದೆ. ಅದೇ ರೀತಿ ತೆಲುಗುವಿನ ಬಿಗ್​ಬಾಸ್​ನಲ್ಲಿ ಈಕೆಗೆ ಛಾನ್ಸ್ ಸಿಕ್ಕಿತ್ತು.

27
ಬಿಗ್​ಬಾಸ್​ನಿಂದ ಜೀವನ ಹಾಳು

ಆದರೆ ಇದೀಗ ನಟಿ ಬಿಗ್​ಬಾಸ್​​ ತಮ್ಮ ಜೀವನವನ್ನು ಹಾಳು ಮಾಡಿತು ಎಂಬ ಹೇಳಿಕೆ ಕೊಟ್ಟಿದ್ದಾರೆ. ಈಚೆಗೆ ಅವರು ನೀಡಿರುವ ಸಂದರ್ಶನದ ವಿಡಿಯೋ ಮತ್ತೆ ವೈರಲ್​ ಆಗುತ್ತಿದೆ. ಇತ್ತೀಚೆಗೆ ನಟಿ ತೇಜಸ್ವಿ ಮಡಿವಾಡಾ ಅವರು ಸಂದರ್ಶನವೊಂದರಲ್ಲಿ, ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರಿಂದ ತಮ್ಮ ವೃತ್ತಿಜೀವನದ ಅಂತರ ಹೆಚ್ಚಾಯಿತು. ಇದರಿಂದಾಗಿ ವೃತ್ತಿಜೀವನಕ್ಕೆ ಹಿನ್ನಡೆಯಾಯಿತು ಎಂದಿದ್ದಾರೆ.

37
ನೆಗೆಟಿವ್​ ಮೂಲಕ ಫೇಮಸ್​

ಬಿಗ್ ಬಾಸ್ ಮನೆಯಲ್ಲಿದ್ದ ಸಮಯದಲ್ಲಿ ಅವರು ಬೆಳೆಸಿಕೊಂಡ ನಕಾರಾತ್ಮಕ ಭಾವನೆಯಿಂದ ನಟಿಯ ಮೇಲೆ ಅಭಿಮಾನಿಗಳು ಕೂಡ ಆಕ್ರೋಶ ಹೊರಹಾಕಿದ್ದರು. ಅಲ್ಲಿ ಈಕೆ ನಡೆದುಕೊಂಡ ರೀತಿಯಿಂದ ಸಾರ್ವಜನಿಕರಿಂದಲೂ ಇಮೇಜ್ ಹಾಳುಮಾಡಿಕೊಂಡಿದ್ದರು. ಇದರಿಂದ ತಮ್ಮ ವೃತ್ತಿ ಜೀವನವೇ ಹಾಳಾಗೋಯ್ತು, ಬದುಕೇ ಹಾಳಾಯ್ತು ಎಂದಿದ್ದಾರೆ ನಟಿ.

47
ಸಿನಿ ಪಯಣ ಹೀಗಿದೆ...

ನಟಿಯ ಸಿನಿಮಾ ಪಯಣದ ಕುರಿತು ಹೇಳುವುದಾದರೆ, ಇವರು ತೆಲುಗು ಚಲನಚಿತ್ರ ನಟಿಯ ಜೊತೆ ರೂಪದರ್ಶಿ ಕೂಡ. ಅವರು "ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು" (2013) ಚಿತ್ರದ ಮೂಲಕ ಪದಾರ್ಪಣೆ ಮಾಡಿದರು ಮತ್ತು "ಐಸ್ ಕ್ರೀಮ್" (2014) ಚಿತ್ರದಿಂದ ಪ್ರಮುಖ ನಟಿಯಾಗಿ ಗುರುತಿಸಿಕೊಂಡರು. ಅವರು ಬಿಗ್ ಬಾಸ್ 2 (2018) ಕಾರ್ಯಕ್ರಮದ ಸ್ಪರ್ಧಿಯಾಗಿದ್ದರು ಮತ್ತು ಪ್ರಸ್ತುತ ಟಿವಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

57
ಪರ್ಸನಲ್​ ಲೈಫ್​ನಿಂದಲೂ ಸುದ್ದಿಯಲ್ಲಿ

ಅವರು "ಬಿಗ್ ಬಾಸ್ 2" ರಿಯಾಲಿಟಿ ಶೋದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇವರು ಪರ್ಸನಲ್​ ಲೈಫ್​ನಿಂದಲೂ ಸುದ್ದಿಯಲ್ಲಿದ್ದಾರೆ. ಕೆಲ ವರ್ಷಗಳ ಹಿಂದೆ ನಟಿ, ಮದುವೆಯಾಗದೇ ಲಿವ್-ಇನ್ ರಿಲೇಶನ್‌ಶಿಪ್ ಮೂಲಕ ಮಕ್ಕಳನ್ನು ಪಡೆಯಲು ಬಯಸುವುದಾಗಿ ಹೇಳಿಕೆ ನೀಡಿದ್ದರು.

67
ಮದುವೆ ಬಗ್ಗೆ ಹೇಳಿದ್ದೇನು?

ಈ ಹಿಂದೆ ಮದುವೆಯ ಬಗ್ಗೆ ಮಾತನಾಡಿದ್ದ ಅವರು, ಮದುವೆ ಆಗೋದಿಲ್ಲ ಆದರೆ ಮಕ್ಕಳನ್ನು ಮಾತ್ರ ಮಾಡ್ಕೋತಿನಿ ಎಂದಿದ್ದರು. ಅದಕ್ಕೆ ಕಾರಣ ನೀಡಿದ್ದ ನಟಿ, ಮದುವೆ ಎಂದರೇ ನನಗೆ ತುಂಬಾ ಭಯವಿದೆ, ಮದುವೆ ಮಾಡಿಕೊಳ್ಳುವ ಯೋಚನೆ ಸದ್ಯಕ್ಕೆ ಇಲ್ಲ. ವಯಸ್ಸು ಆದ ಮೇಲೆ ಯಾರು ಮದ್ವೆ ಆಗೋದಿಲ್ಲ, ಆದರೆ ನನಗೆ ಮಕ್ಕಳು ಬೇಕು. ನಾನು ಮದುವೆ ಸಂಬಂಧಕ್ಕೆ ಕಾಲಿಡೋದಿಲ್ಲ, ಆದರೆ ಪ್ರೀತಿಯಲ್ಲಿ ಇರ್ತೀನಿ. ಲಿವ್ ಇನ್ ರಿಲೆಶನ್​ಶಿಪ್ ನಲ್ಲಿ ಮಕ್ಕಳನ್ನು ಮಾಡ್ಕೋತಿನಿ. ನನಗೆ ಇನ್ನು ಐದು ವರ್ಷ ಮಕ್ಕಳು ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದ್ದರು.

77
ಡೇಟಿಂಗ್ ಬಗ್ಗೆಯೂ ಮಾತು

ಡೇಟಿಂಗ್ ಬಗ್ಗೆಯೂ ಆಗ ಅವರು ಮಾತನಾಡಿದ್ದರು. ನನಗೆ 20 ವಯಸ್ಸಿನಲ್ಲಿ ಇದ್ದಾಗ ಮದುವೆ ಹಾಗೂ ಮಕ್ಕಳ ಮೇಲೆ ಸಾಕಷ್ಟು ಕನಸುಗಳು ಇತ್ತು. ಆದರೆ ಈಗ ಪ್ರೀತಿ ಮೇಲೆಯೇ ಭಯ ಶುರುವಾಗಿದೆ. ಯಾರು ಬಂದು ಜೀವನದಲ್ಲಿ ಏನ್ ಮಾಡ್ತರೋ ಅನ್ನೋ ಭಯ ಬರ್ತಿದೆ. ನೀವೇ ಏನೇ ತಪ್ಪು ಮಾಡಿದರೂ ಹೇಳಿ ಮಾಡಿ ಅಂತ ಹೇಳ್ತಿದ್ದೆ, ಆದರೆ ಮೋಸ ಮಾಡಿದ ಮೇಲೆ ಅವರ ಮೇಲಿನ ಪ್ರೀತಿ ಇರೋದಿಲ್ಲ ಎಂದಿದ್ದರು.

Read more Photos on
click me!

Recommended Stories