₹8,000 ಕೋಟಿ ಆಸ್ತಿ ಒಡತಿ ಜೂಹಿ ಚಾವ್ಲಾ! ಬಾಲಿವುಡ್‌ ಟಾಪ್-7 ಶ್ರೀಮಂತ ನಟಿಯರ ಪೈಕಿ ರಶ್ಮಿಕಾ ಇದ್ದಾರಾ?

Published : Oct 06, 2026, 12:25 PM IST

8,000 ಕೋಟಿ ರೂ. ಆಸ್ತಿಯೊಂದಿಗೆ ಜೂಹಿ ಚಾವ್ಲಾ ಭಾರತದ ಅತಿ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಬರೀ ಸಿನಿಮಾವಲ್ಲದೆ ಬ್ಯುಸಿನೆಸ್‌ನಿಂದಲೂ ಇವರು ಕೋಟಿ ಕೋಟಿ ಸಂಪಾದಿಸಿದ್ದಾರೆ. ಈ ಪಟ್ಟಿಯಲ್ಲಿರುವ ಇತರ ನಟಿಯರು ಯಾರು ಅಂತ ತಿಳಿಯಲು ಮುಂದೆ ಓದಿ!

PREV
18
ಭಾರತದ ಅತಿ ಶ್ರೀಮಂತ ನಟಿಯರು!

ಬಾಲಿವುಡ್ ನಟಿಯರು ಬರೀ ಸಿನಿಮಾಗಳಲ್ಲಿ ಮಾತ್ರವಲ್ಲ, ಸಂಪಾದನೆಯಲ್ಲೂ ಮುಂಚೂಣಿಯಲ್ಲಿದ್ದಾರೆ. ಭಾರತದ ಅತಿ ಶ್ರೀಮಂತ ನಟಿ ಜೂಹಿ ಚಾವ್ಲಾ ಅವರ ಒಟ್ಟು ಆಸ್ತಿ ಬರೋಬ್ಬರಿ 8,000 ಕೋಟಿ ರೂ. ಬ್ಯುಸಿನೆಸ್ ಮೂಲಕವೇ ಇವರು ಇಷ್ಟು ದೊಡ್ಡ ಮೊತ್ತದ ಒಡತಿಯಾಗಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ಸೇರಿದಂತೆ ಅನೇಕ ಸ್ಟಾರ್ ನಟಿಯರನ್ನು ಜೂಹಿ ಹಿಂದಿಕ್ಕಿದ್ದಾರೆ.

ಈ ನಟಿಯರು ಕೇವಲ ನಟನೆಯಿಂದ ಮಾತ್ರವಲ್ಲದೆ, ಸ್ಮಾರ್ಟ್ ಹೂಡಿಕೆ, ಬ್ರ್ಯಾಂಡ್ ಜಾಹೀರಾತುಗಳು ಮತ್ತು ಸ್ವಂತ ಬ್ಯುಸಿನೆಸ್ ಮೂಲಕವೂ ಕೋಟಿ ಕೋಟಿ ಗಳಿಸುತ್ತಿದ್ದಾರೆ. ತಮ್ಮ ಜನಪ್ರಿಯತೆಯನ್ನು ಬಳಸಿಕೊಂಡು ಇವರು ಯಶಸ್ವಿ ಉದ್ಯಮಿಗಳಾಗಿ ಬೆಳೆದಿದ್ದಾರೆ.

28
ಜೂಹಿ ಚಾವ್ಲಾ

ಜೂಹಿ ಚಾವ್ಲಾ ಬರೋಬ್ಬರಿ 8,000 ಕೋಟಿ ರೂ. ಆಸ್ತಿಯೊಂದಿಗೆ ಈ ಪಟ್ಟಿಯಲ್ಲಿ ಟಾಪ್‌ನಲ್ಲಿದ್ದಾರೆ. ಇವರ ಈ ಬೃಹತ್ ಸಂಪತ್ತಿಗೆ ಕೇವಲ ಸಿನಿಮಾ ಮಾತ್ರ ಕಾರಣವಲ್ಲ. ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಸಹ-ಮಾಲೀಕತ್ವ ಮತ್ತು ಸ್ಮಾರ್ಟ್ ಬ್ಯುಸಿನೆಸ್ ಹೂಡಿಕೆಗಳು ಇವರ ಕೈಹಿಡಿದಿವೆ.

38
ಐಶ್ವರ್ಯಾ ರೈ ಬಚ್ಚನ್

ಮಾಜಿ ವಿಶ್ವ ಸುಂದರಿ ಹಾಗೂ ಗ್ಲೋಬಲ್ ಐಕಾನ್ ಐಶ್ವರ್ಯಾ ರೈ ಬಚ್ಚನ್ ಅವರ ಒಟ್ಟು ಆಸ್ತಿ 900 ಕೋಟಿ ರೂ. ದಶಕಗಳ ಯಶಸ್ವಿ ಸಿನಿಮಾ ಕೆರಿಯರ್, ಅಂತರಾಷ್ಟ್ರೀಯ ಬ್ರ್ಯಾಂಡ್ ಜಾಹೀರಾತುಗಳು ಮತ್ತು ಜಾಣ್ಮೆಯ ಹೂಡಿಕೆಗಳು ಇವರ ಸಂಪತ್ತನ್ನು ಹೆಚ್ಚಿಸಿವೆ.

48
ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಜೋನಸ್ 650 ಕೋಟಿ ರೂ. ಆಸ್ತಿ ಗಳಿಸಿದ್ದಾರೆ. ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ಇವರ ಯಶಸ್ಸಿನ ಪಯಣ ಸಾಗಿದೆ. ಸಿನಿಮಾಗಳು, ಬ್ರ್ಯಾಂಡ್ ಅಂಬಾಸಿಡರ್ ಮತ್ತು ತಮ್ಮದೇ ಆದ 'ಪರ್ಪಲ್ ಪೆಬಲ್ ಪಿಕ್ಚರ್ಸ್' ನಿರ್ಮಾಣ ಸಂಸ್ಥೆ ಇವರ ಆದಾಯದ ಮೂಲಗಳಾಗಿವೆ.

58
ಆಲಿಯಾ ಭಟ್

ಆಲಿಯಾ ಭಟ್ 550 ಕೋಟಿ ರೂ. ಆಸ್ತಿಯೊಂದಿಗೆ ಈ ಪಟ್ಟಿಯಲ್ಲಿರುವ ಅತಿ ಕಿರಿಯ ನಟಿಯಾಗಿದ್ದಾರೆ. ಸಿನಿಮಾಗಳು, ದುಬಾರಿ ಬ್ರ್ಯಾಂಡ್ ಜಾಹೀರಾತುಗಳು ಮತ್ತು ಸ್ಮಾರ್ಟ್ ಹೂಡಿಕೆಗಳು ಇವರ ಸಂಪತ್ತನ್ನು ವೇಗವಾಗಿ ಹೆಚ್ಚಿಸಿವೆ. ಇವರು 'ಎಡ್-ಎ-ಮಮ್ಮಾ' (Ed-a-Mamma) ಎಂಬ ಮಕ್ಕಳ ಬಟ್ಟೆ ಬ್ರ್ಯಾಂಡ್ ಕೂಡ ನಡೆಸುತ್ತಿದ್ದಾರೆ.

68
ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ 500 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಇವರು ಕೇವಲ ಸ್ಟಾರ್ ನಟಿಯಷ್ಟೇ ಅಲ್ಲ, ಯಶಸ್ವಿ ಉದ್ಯಮಿ ಕೂಡ ಹೌದು. ಬ್ಲಾಕ್‌ಬಸ್ಟರ್ ಸಿನಿಮಾಗಳ ಜೊತೆಗೆ, ಬ್ರ್ಯಾಂಡ್ ಪಾಲುದಾರಿಕೆ ಮತ್ತು ತಮ್ಮದೇ ಆದ '82°E' ಬ್ಯೂಟಿ ಬ್ರ್ಯಾಂಡ್ ಮೂಲಕ ಇವರು ಭಾರಿ ಆದಾಯ ಗಳಿಸುತ್ತಿದ್ದಾರೆ.

78
ಕರೀನಾ ಕಪೂರ್

ಕರೀನಾ ಕಪೂರ್ ಖಾನ್ ಅವರ ಅಂದಾಜು ಆಸ್ತಿ 485 ಕೋಟಿ ರೂ. ಸಿನಿಮಾ ಪ್ರಾಜೆಕ್ಟ್‌ಗಳು, ಸಾಕಷ್ಟು ಬ್ರ್ಯಾಂಡ್ ಜಾಹೀರಾತುಗಳು ಮತ್ತು ವಿವಿಧ ಮಾಧ್ಯಮ ಉದ್ಯಮಗಳಲ್ಲಿನ ಸಕ್ರಿಯ ಪಾಲ್ಗೊಳ್ಳುವಿಕೆ ಇವರ ಆದಾಯವನ್ನು ಹೆಚ್ಚಿಸಿವೆ.

88
ಅನುಷ್ಕಾ ಶರ್ಮಾ

ನಟಿ ಹಾಗೂ ನಿರ್ಮಾಪಕಿ ಅನುಷ್ಕಾ ಶರ್ಮಾ 255 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಇವರ ಯಶಸ್ವಿ ನಟನಾ ವೃತ್ತಿ, 'ಕ್ಲೀನ್ ಸ್ಲೇಟ್ ಫಿಲ್ಮ್ಸ್' ನಿರ್ಮಾಣ ಸಂಸ್ಥೆ ಮತ್ತು ಅನೇಕ ಬ್ರ್ಯಾಂಡ್ ಜಾಹೀರಾತುಗಳು ಇವರ ಸಂಪತ್ತನ್ನು ಕಟ್ಟಿಕೊಟ್ಟಿವೆ.

ಬಾಲಿವುಡ್ ನಟಿಯರು ಕೇವಲ ನಟನೆಗೆ ಸೀಮಿತವಾಗದೆ, ಬ್ಯುಸಿನೆಸ್ ಸಾಮ್ರಾಜ್ಯವನ್ನೇ ಕಟ್ಟುತ್ತಿದ್ದಾರೆ ಅನ್ನೋದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿ.

ರಶ್ಮಿಕಾ ಮಂದಣ್ಣಗೆ ಸ್ಥಾನವಿಲ್ಲ: 

ಕನ್ನಡತಿ ನಟಿ ರಶ್ಮಿಕಾ ಮಂದಣ್ಣಗೆ ಟಾಪ್-7 ಸ್ಥಾನದಲ್ಲಿ ಶ್ರೀಮಂತನ ನಟಿಯೆಂಬ ಸ್ಥಾನವಿಲ್ಲ. ಇವರ ಆಸ್ತಿಯ ಮೌಲ್ಯ ₹110 ಕೋಟಿ ರೂ.ಇದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ, ಶ್ರೀಮಂತ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories