ಕಿಚ್ಚ ಸುದೀಪ್, ಯಶ್, ಗಣೇಶ್, ರಾಧಿಕಾ ಪಂಡಿತ್ ಸೇರಿದಂತೆ ಕನ್ನಡದ ಅನೇಕ ಸ್ಟಾರ್ ಕಲಾವಿದರು ತಮ್ಮ ವೃತ್ತಿಜೀವನವನ್ನು ಕಿರುತೆರೆಯ ಮೂಲಕ ಆರಂಭಿಸಿದರು. ಈ ಕಲಾವಿದರು ನಟಿಸಿದ ಸೂಪರ್ ಹಿಟ್ ಧಾರಾವಾಹಿಗಳ ಹೆಸರು ಏನು ಗೊತ್ತಾ?
ಕಿಚ್ಚ ಸುದೀಪ್ ಸಿನಿಮಾಗೂ ಮುನ್ನ ಪ್ರೇಮದ ಕಾದಂಬರಿ ಹೆಸರಿನ ಸೀರಿಯಲ್‌ನಲ್ಲಿ ನಟಿಸಿದ್ದರು. ಸ್ಪರ್ಶ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುವ ಮೂಲಕ ರಮೇಶ್ ಅರವಿಂದ್ ನಟನೆಯ ಪ್ರತ್ಯರ್ಥ ಚಿತ್ರದ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದರು. ಸ್ಪರ್ಶ ನಂತ್ರ ಬಂದ ಹುಚ್ಚ ಸಿನಿಮಾ ಸುದೀಪ್ ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು.
28
ಯಶ್
ರಾವಣನಾಗಿ ಇಡೀ ವಿಶ್ವಕ್ಕೆ ಪರಿಚಯವಾಗಿರುವ ರಾಕಿಂಗ್ ಸ್ಟಾರ್ ಯಶ್ ಸಹ ಕಿರುತೆರೆ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ನಂದಗೋಕುಲ, ಪ್ರೀತಿ ಇಲ್ಲದ ಮೇಲೆ, ಮಳೆಬಿಲ್ಲು, ಸಿಲ್ಲಿಲಲ್ಲಿ ಸೀರಿಯಲ್‌ಗಳಲ್ಲಿ ಯಶ್ ನಟಿಸಿದ್ದಾರೆ. ಕಿರುತೆರೆಯಿಂದ ಆರಂಭವಾದ ಯಶ್ ಅವರಿಗೆ ಕಿರಾತಕ, ರಾಜಾಹುಲಿ ಸಿನಿಮಾಗಳು ಜನಪ್ರಿಯತೆಯನ್ನು ತಂದುಕೊಟ್ಟವು.
38
ರಾಧಿಕಾ ಪಂಡಿತ್
ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸಹ ಸೀರಿಯಲ್‌ನಿಂದಲೇ ಮುನ್ನಲೆಗೆ ಬಂದ ಕಲಾವಿದೆ. ನಂದಗೋಕುಲ, ಕಾದಂಬರಿ ಮತ್ತು ಸುಮಂಗಲಿ ಸೀರಿಯಲ್‌ಗಳಲ್ಲಿ ರಾಧಿಕಾ ಪಂಡಿತ್ ನಟಿಸಿದ್ದಾರೆ. ಮೊಗ್ಗಿನ ಮನಸು ಚಿತ್ರ ರಾಧಿಕಾ ಪಂಡಿತ್ ಅವರಿಗೆ ಜನಪ್ರಿಯತೆಯನ್ನು ತಂದು ಕೊಟ್ಟಿತು.
ಗೋಲ್ಡನ್ ಸ್ಟಾರ್ ಗಣೇಶ್ ಸಹ ಕಿರುತೆರೆಯ ಶೋ ಕಾಮಿಡಿ ಟೈಂ ಮೂಲಕ ಪರಿಚಯವಾದವರು. ಸೀರಿಯಲ್‌ಗಳಲ್ಲಿ ಸಣ್ಣ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ ಗಣೇಶ್ ಅವರಿಗೆ ಮುಂಗಾರು ಮಳೆ ಸಿನಿಮಾ ದೊಡ್ಡ ಗೆಲುವು ನೀಡಿತು.
58
ರಚಿತಾ ರಾಮ್
ಡಿಂಪಲ್ ಕ್ವೀನ್ ರಚಿತಾ ರಾಮ್, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಸಿ ಸೀರಿಯಲ್ ಮೂಲಕ ವೃತ್ತಿಜೀವನ ಆರಂಭಿಸಿ, ಇಂದು ಕನ್ನಡದ ಲೇಡಿ ಸೂಪರ್ ಸ್ಟಾರ್ ಅಂತೇನಿಸಿಕೊಂಡಿದ್ದಾರೆ. ದರ್ಶನ್ ಜೊತೆಗಿನ ಬುಲ್ ಬುಲ್ ಸಿನಿಮಾ ರಚಿತಾ ರಾಮ್ ಸಿನಿಕೆರಿಯರ್‌ಗೆ ದೊಡ್ಡ ಬ್ರೇಕ್ ನೀಡಿತು.
68
ಡಾರ್ಲಿಂಗ್ ಕೃಷ್ಣ
ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಆರಂಭದಲ್ಲಿ ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ಫೇಮಸ್ ಆದವರು. ಇದೀಗ ನಿರ್ದೇಶನದ ಜೊತೆ ನಟರಾಗಿ ಕೃಷ್ಣ ಗುರುತಿಸಿಕೊಂಡಿದ್ದಾರೆ. ಲವ್ ಮಾಕ್ಟೇಲ್ ಸರಣಿ ಸಿನಿಮಾಗಳು ಕೃಷ್ಣ ಅವರ ಹಿಟ್ ಚಿತ್ರಗಳಾಗಿವೆ.
78
ಅದಿತಿ ಪ್ರಭುದೇವ
ಕನ್ನಡ ಮತ್ತೋರ್ವ ಪ್ರತಿಭಾನ್ವಿತ ನಟಿ ಅದಿತಿ ಪ್ರಭುದೇವ ಸಹ ಸಿನಿಮಾಗೂ ಮುಂಚೆ ನಾಗಿಣಿ ಸೀರಿಯಲ್‌ನಲ್ಲಿ ನಟಿಸಿದ್ದರು. ಇದಾದ ಬಳಿಕ ಬಜಾರ್, ರಂಗನಾಯಕಿ, ತೋತಾಪುರಿ, ಚಾಂಪಿಯನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ.
88
ಮೇಘಾ ಶೆಟ್ಟಿ
ಜೀ ಕನ್ನಡದ ಸೂಪರ್ ಹಿಟ್ ಸೀರಿಯಲ್‌ಗಳಲ್ಲಿ ಒಂದಾಗಿರುವ 'ಜೊತೆ ಜೊತೆಯಲಿ' ಧಾರಾವಾಹಿಯ ಅನು ಆಗಿ ಬಂದವರು ಮೇಘಾ ಶೆಟ್ಟಿ. ಈ ಧಾರಾವಾಹಿ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತ್ರಿಬಲ್ ರೈಡಿಂಗ್, ದಿಲ್ ಪಸಂದ್ ಸಿನಿಮಾಗಳಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.