'ಬಿಗ್ ಬಾಸ್' ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಅವರು ತಮ್ಮ ಆರು ವರ್ಷಗಳ ಪ್ರೇಮಿಯಾದ ವರುಣ್ ಮುನಿರಾಜು ಜೊತೆ ಹಸೆಮಣೆ ಏರಿದ್ದಾರೆ. ಮದುವೆಯ ನಂತರ ಅವರು ಫ್ಯಾಷನ್ ಕ್ಷೇತ್ರದಲ್ಲಿ ಬ್ಯುಸಿನೆಸ್ ಮಾಡುವ ಯೋಜನೆ ಹೊಂದಿದ್ದು, ಒಳ್ಳೆಯ ಪ್ರಾಜೆಕ್ಟ್ ಸಿಕ್ಕರೆ ನಟನೆ ಮುಂದುವರೆಸಲಿದ್ದಾರೆ.
ಬೆಂಗಳೂರು: Boss ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಸ್ಪಂದನಾ ಸೋಮಣ್ಣ (Spandana Somanna) ಅವರು ದಾಂಪತ್ಯ ಜೀವನಕ್ಕೆ ಕಾಲಿಸಿದ್ದಾರೆ. ತಮ್ಮ 6 ವರ್ಷಗಳ ಪ್ರೇಮಕಥೆಗೆ ಮದುವೆಯ ಬಂಧದ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ ಸ್ಪಂದನಾ. ವರುಣ್ ಮುನಿರಾಜು ಅವರೊಂದಿಗೆ ನಿನ್ನೆ ಹಸೆಮಣೆ ಏರಲಿದ್ದಾರೆ.
27
ವಿಡಿಯೋ, ಫೋಟೋಗಳು ವೈರಲ್
ಇವರ ಮದುವೆಯ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಕಿರುತೆರೆ ಮತ್ತು ಹಿರಿತೆರೆಯ ಹಲವು ಕಲಾವಿದರು ಬಂದು ನೂತನ ವಧು-ವರರನ್ನು ಆಶೀರ್ವದಿಸಿದ್ದಾರೆ.
37
ಒಂದೇ ಕಾಲೇಜಿನಲ್ಲಿ ಓದಿದ ಜೋಡಿ
ಈ ಹಿಂದೆ, ನಟಿ, ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿದ್ದರು. ತಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರು. ಆದರೆ ಕಾಲೇಜಿನ ಟೈಮ್ನಲ್ಲಿ ಮಾತನಾಡಿರಲಿಲ್ಲ. ಆದರೆ ಕೋವಿಡ್ ಟೈಮ್ನಲ್ಲಿ ಮಾತನಾಡಿದ್ವಿ. ಅಲ್ಲಿಂದಲೇ ಲವ್ ಶುರುವಾಯ್ತು ಎಂದಿದ್ದಾರೆ. ಆ ಸಮಯದಲ್ಲಿ ನಾನು ಇಷ್ಟು ಫೇಮಸ್ ಆಗಿರಲಿಲ್ಲ. ಸೀರಿಯಲ್ ಹುಡುಕಾಟದಲ್ಲಿ ಇದ್ದೆ. ಆಡಿಷನ್ ಕೊಡುತ್ತಿದ್ದೆ. ಸ್ಟ್ಯಾಂಡ್ ಆಗಿರಲಿಲ್ಲ. ಆ ಟೈಮ್ನಲ್ಲಿ ಲವ್ ಆಗಿದ್ದು ಎಂದು ತಮ್ಮ ಲವ್ಸ್ಟೋರಿ ಹಂಚಿಕೊಂಡಿದ್ದರು.
ಇನ್ನು ಲವ್ ಸ್ಟೋರಿ ಕುರಿತು ಇನ್ನಷ್ಟು ಹೇಳಿಕೊಂಡಿದ್ದ ನಟಿ, ಅವನು ಕೂಡ ಲಂಡನ್ನಲ್ಲಿ ಎಂಎಸ್ ಮಾಡಿದ್ದ. ಕೆಲಸ ಸಿಕ್ಕರೂ ಕೋವಿಡ್ನಿಂದ ಹೋಗಲು ಆಗಿರಲಿಲ್ಲ. ಲಂಡನ್ನಲ್ಲಿಯೇ ಇರಬೇಕೋ, ಬೇರೆ ಕಂಟ್ರಿಗೆ ಹೋಗಬೇಕೋ ಅಥ್ವಾ ಭಾರತಕ್ಕೆ ಬರಬೇಕೋ ಎನ್ನುವ ಗೊಂದಲದಲ್ಲಿ ಇದ್ದ. ಹೀಗೆ ಆರು ವರ್ಷ ನಮ್ಮ ಲವ್ಸ್ಟೋರಿ ನಡೆಯುತ್ತಿದೆ ಎಂದಿದ್ದರು.
57
ಬಿಜಿನೆಸ್ ಮಾಡುವ ಪ್ಲ್ಯಾನ್
ಮದುವೆಯ ನಂತರ ಬಿಜಿನೆಸ್ ಮಾಡುವ ಪ್ಲ್ಯಾನ್ ಇದೆ. ಅದರಲ್ಲಿಯೂ ಫ್ಯಾಷನ್ ಕ್ಷೇತ್ರದಲ್ಲಿ ತಮಗೆ ಅಪಾರ ಆಸಕ್ತಿ ಇದ್ದು, ಅದರಲ್ಲಿ ಸಾಕಷ್ಟು ತಿಳಿವಳಿಕೆ ಕೂಡ ಇರುವ ಕಾರಣದಿಂದ, ಅದರಲ್ಲಿಯೇ ಮುಂದುವರೆಯುವ ಇಷ್ಟ ಇದೆ ಎಂದು ನಟಿ ಸ್ಪಂದನಾ ಸೋಮಣ್ಣ (Bigg Boss Spandana Somanna) sumantvkannada ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ. ಹಾಗೆಂದು ನಟನೆ ಬಿಡುತ್ತೇನೆ ಎಂದು ಅರ್ಥವಲ್ಲ, ಒಳ್ಳೆಯ ಪ್ರಾಜೆಕ್ಟ್ ಸಿಕ್ಕರೆ ಅದನ್ನೂ ಮಾಡುತ್ತೇನೆ ಎಂದಿದ್ದರು ಸ್ಪಂದನಾ ಸೋಮಣ್ಣ.
67
ಸದ್ಯ ಹೊಸ ಪ್ರಾಜೆಕ್ಟ್ ಇಲ್ಲ
ಮದುವೆ ತಯಾರಿಗಾಗಿ ಸದ್ಯ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳದ ಅವರು, ವಿವಾಹದ ಬಳಿಕ ಫ್ಯಾಷನ್ ಕ್ಷೇತ್ರದಲ್ಲಿ ಬ್ಯುಸಿನೆಸ್ ಮಾಡುವ ಪ್ಲ್ಯಾನ್ ಹೊಂದಿದ್ದಾರೆ.
77
ಅಭಿಮಾನಿಗಳ ಹಾರೈಕೆ
ಬ್ಯುಸಿನೆಸ್ ಏನೇ ಮಾಡಿದರೂ ನಟನೆಯನ್ನು ಬಿಡಬೇಡಿ ಎಂದು ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದು, ನೂತನ ದಂಪತಿಗೆ ಶುಭ ಕೋರಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.