ರಮ್ಯಾ ನಿರ್ಮಾಣದ ಈ ಚಿತ್ರವು ಕನ್ನಡದ ಕಲ್ಟ್ ಸಿನಿಮಾವಾಗಿದೆ. ಕೇವಲ 18 ರಿಂದ 22 ದಿನಗಳಲ್ಲಿ ಶೂಟಿಂಗ್ ಮುಗಿಸಿದ ಈ ಚಿತ್ರ, ಪ್ರೇರಣಾ ಮತ್ತು ಅನಿಕೇತ್ ನಡುವಿನ ಭಾವನಾತ್ಮಕ ಕಥೆಯನ್ನು ವಿವರಿಸುತ್ತದೆ.
ಕೆಲವೊಂದು ಸಿನಿಮಾಗಳು ಬಿಡುಗಡೆ ನಂತ್ರ ಹೊಸ ಚರ್ಚೆಗೆ ಕಾರಣವಾಗುತ್ತವೆ. ಸಿನಿಮಾ ನೋಡುತ್ತಾ ವೀಕ್ಷಕರೇ ಪಾತ್ರವಾಗಿ ಬದಲಾಗುತ್ತಾರೆ. ಸಿನಿಮಾ ಮುಗಿದ ಬಳಿಕ ಪಾತ್ರಗಳ ಬಗ್ಗೆ ವಿಮರ್ಶೆ ಮಾಡಲಾರಂಭಿಸುತ್ತಾರೆ. ಇಂದು ನಾವು ಅಂತಹುವುದೇ ಒಂದು ಕನ್ನಡದ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ. ಈ ಚಿತ್ರಕ್ಕೆ ಆರಂಭದಲ್ಲಿ ಮೋಹಕತಾರೆ ರಮ್ಯಾ ಈ ಸಿನಿಮಾಗೆ ನಾಯಕಿ ಎಂಬಂತಾಗಿತ್ತು. ಆದ್ರೆ ಕಾರಣಾಂತರಗಳಿಂದ ಚಿತ್ರ ಮತ್ತೋರ್ವ ಪ್ರತಿಭಾನ್ವಿತ ನಟಿಯ ಆಗಮನವಾಯ್ತು.
25
ಸ್ವಾತಿ ಮುತ್ತಿನ ಮಳೆ ಹನಿಯೇ
2023ರಲ್ಲಿ ಬಿಡುಗಡೆಯಾದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ಕನ್ನಡದ ಕಲ್ಟ್ ಸಿನಿಮಾಗಲ್ಲಿ ಒಂದಾಗಿದೆ. ನಟಿ ರಮ್ಯಾ ಅವರ ಬ್ಯಾನರ್ ನಲ್ಲಿ ನಿರ್ಮಾಣವಾದ ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಮತ್ತು ಸಿರಿ ರವಿಶಂಕರ್ ನಟಿಸಿದ್ದಾರೆ. ಚಿತ್ರದುದ್ದಕ್ಕೂ ಈ ಎರಡು ಪಾತ್ರಗಳೇ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತವೆ. ಚಿತ್ರದ ಒಂದೊಂದು ಸಂಭಾಷಣೆಯೂ ಅರ್ಥಗರ್ಭಿತವಾಗಿದ್ದು, ನೋಡುಗರನ್ನು ಸಮ್ಮೋಹನಗೊಳಿಸುತ್ತವೆ.
35
ಕಡಿಮೆ ಸಮಯದಲ್ಲಿ ಶೂಟಿಂಗ್
ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಚಿತ್ರೀಕರಣ ಮೈಸೂರು ಮತ್ತು ಊಟಿಯಲ್ಲಿ 18 ರಿಂದ 22 ದಿನಗಳಲ್ಲಿಯೇ ಮುಗಿದಿತ್ತು. ಶೂಟಿಂಗ್ ಸಮಯ ತಿಳಿದು ಇದೊಂದು ಶಾರ್ಟ್ ಫಿಲಂ ಎಂದು ಕೆಲವರು ವ್ಯಂಗ್ಯ ಮಾಡಿದ್ದರು. ಒಂದು ಸರಿಯಾದ ಪ್ಲಾನ್, ಪ್ರತಿಭಾನ್ವಿತ ಕಲಾವಿದರು ಮತ್ತು ನುರಿತ ತಂತ್ರಜ್ಞರಿದ್ರೆ ಕಡಿಮೆ ಸಮಯದಲ್ಲಿ ಅತ್ಯಂತ ಅದ್ಭುತವಾದ ಸಿನಿಮಾ ತೆರೆಯ ಮೇಲೆ ತೆಗೆದುಕೊಂಡು ಬರಬಹುದು ಎಂಬುದಕ್ಕೆ ಈ ಚಿತ್ರ ಸಾಕ್ಷಿಯಾಗಿತ್ತು.
ಪ್ರೇರಣಾ ಚಿತ್ರದ ನಾಯಕಿಯಾಗಿದ್ದು, ಹೌಸಿಸ್ಟ್ ಕೌನ್ಸೆಲರ್ ಆಗಿ ಕೆಲಸ ಮಾಡುತ್ತಿರುತ್ತಾಳೆ. ಇಲ್ಲಿಗೆ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಅನಿಕೇತ್ ಬರುತ್ತಾನೆ. ಅನಿಕೇತ್‌ಗೂ ತಾನು ಹೆಚ್ಚು ದಿನ ಬದುಕುಳಿಯಲ್ಲ ಎಂಬ ವಿಷಯ ತಿಳಿದಿರುತ್ತದೆ. ಪ್ರೇರಣಾ ಮತ್ತು ಅನಿಕೇತ್ ಸ್ನೇಹವೇ ಚಿತ್ರದ ಕಥಾಹಂದರ.
55
ಸಾಂಪ್ರದಾಯಿಕ ಕಲ್ಪನೆಗಳಿಗೆ ಸವಾಲು ಹಾಕುವ ಸಿನಿಮಾ
ಮನೆಯಲ್ಲಿ ಗಂಡನಿದ್ರೂ ಒಂಟಿಯಾಗಿದ್ದು, ತನ್ನ ನೋವುಗಳಿಗೆ ಸ್ಪಂದಿಸುವ ಹೃದಯಕ್ಕೆ ಅಥವಾ ತನ್ನದೇ ಬದುಕಿನ ಹಂತದಲ್ಲಿರುವ ಜೀವಕ್ಕೆ ಪ್ರೇರಣಾ ಹುಡುಕಾಟ ನಡೆಸುತ್ತಿರುತ್ತಾಳೆ. ಇಂತಹ ಪರಿಸ್ಥಿತಿಯುಲ್ಲಿ ಪ್ರೇರಣಾಗೆ ಅನಿಕೇತ್ ಪರಿಚಯವಾಗುತ್ತದೆ. ಇಬ್ಬರ ನಡುವಿನ ಬಾಂಧವ್ಯ, ಮಾನವೀಯತೆ ಸಮಾಜದಲ್ಲಿನ ಹಲವು ಸಾಂಪ್ರದಾಯಿಕ ಕಲ್ಪನೆಗಳನ್ನು ಪ್ರಶ್ನಿಸುತ್ತದೆ. ಆದ್ರೆ ನಿರ್ದೇಶಕರು ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳುವ ವೀಕ್ಷಕರಿಗೆ ನೀಡಿದು ಈ ಚಿತ್ರದ ವಿಶೇಷತೆಯಾಗಿದೆ. ಈ ಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.