ಶೃಂಗಾರ, ಗ್ಯಾಂಗ್‌ಸ್ಟರ್‌ ಕತೆಯನ್ನು ಮಹಿಳೆ ಹೇಗೆ ತೋರಿಸಬಹುದೆಂದು ಗೀತು ಅವರಿಂದ ಕಲಿತೆ: ಯಶ್‌

Published : Apr 27, 2026, 08:24 AM IST

'ಟಾಕ್ಸಿಕ್‌' ಚಿತ್ರದ ನಿರ್ದೇಶಕಿ ಗೀತು ಮೋಹನ್‌ ದಾಸ್‌ ಅವರ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ಗ್ಯಾಂಗ್‌ಸ್ಟರ್ ಕತೆಯಲ್ಲಿ ಮಹಿಳಾ ನಿರ್ದೇಶಕಿಯೊಬ್ಬರು ಶೃಂಗಾರ, ಬಯಕೆ ಮತ್ತು ಬೋಲ್ಡ್ ದೃಶ್ಯಗಳನ್ನು ಕಟ್ಟಿಕೊಡುವ ರೀತಿ ವಿಭಿನ್ನವಾಗಿದ್ದು, ತಮಗೆ ಅಚ್ಚರಿ ತಂದಿದೆ ಎಂದು ಯಶ್‌ ಹೇಳಿದ್ದಾರೆ.

PREV
14
ಬೋಲ್ಡ್‌ ಸೀನ್‌

‘ಶೃಂಗಾರ, ಬಯಕೆ, ಗ್ಯಾಂಗ್‌ಸ್ಟರ್ ಕತೆಯನ್ನು ಒಬ್ಬ ಮಹಿಳೆ ಹೇಗೆ ತೋರಿಸಬಹುದೆಂದು ಗೀತು ಮೋಹನ್‌ ದಾಸ್‌ ಅವರಿಂದ ತಿಳಿದುಕೊಂಡೆ’. ಹೀಗೆ ಹೇಳಿದ್ದು ನಟ ಯಶ್‌ ಅವರು. ‘ಟಾಕ್ಸಿಕ್‌’ ಚಿತ್ರದ ಬೋಲ್ಡ್‌ ಸೀನ್‌ಗಳು, ನಿರ್ದೇಶಕಿ ಗೀತು ಮೋಹನ್‌ ದಾಸ್‌ ಅವರ ಬಗ್ಗೆ ಯಶ್ ಹೇಳಿರುವ ಮಾತುಗಳು ಇಲ್ಲಿವೆ.

24
ಗ್ಯಾಂಗ್‌ಸ್ಟರ್‌ ಕತೆ

ಸಾಹಸದಿಂದ ಕೂಡಿರುವ ಗ್ಯಾಂಗ್‌ಸ್ಟರ್‌ ಕತೆಗಳನ್ನು ಪುರುಷ ನಿರ್ದೇಶಕರು ಮಾತ್ರ ಮಾಡುತ್ತಾರೆ ಎಂಬುದು ಭಾರತೀಯ ಚಿತ್ರರಂಗದಲ್ಲಿರುವ ಅಭಿಪ್ರಾಯ. ‘ಟಾಕ್ಸಿಕ್‌’ ಚಿತ್ರದ ಮೂಲಕ ಈ ಅಭಿಪ್ರಾಯವನ್ನು ನಿರ್ದೇಶಕಿ ಗೀತು ಮೋಹನ್‌ ದಾಸ್‌ ಸುಳ್ಳು ಮಾಡಿದ್ದಾರೆ. ಮಹಿಳಾ ನಿರ್ದೇಶಕಿಯ ದೃಷ್ಟಿಯಲ್ಲಿ ದೊಡ್ಡ ಮಟ್ಟದ ಗ್ಯಾಂಗ್‌ಸ್ಟರ್‌ ಕತೆಯನ್ನು ನೋಡುವುದು ಹೊಸತು, ವಿಶಿಷ್ಟವೂ ಹೌದು.

34
ಸಂಪೂರ್ಣ ಭಿನ್ನ

ಚಿತ್ರದ ಬೋಲ್ಡ್‌ ಸೀನ್‌ಗಳ ಬಗ್ಗೆಯೂ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ. ಗೀತು ಮೋಹನ್‌ ದಾಸ್‌ ಅವರಿಗೆ ತಮ್ಮ ಕತೆಯ ಬಗ್ಗೆ ತುಂಬಾ ನಂಬಿಕೆ ಇದೆ. ಪ್ರೇಮ, ಬಯಕೆ ಅಥವಾ ಶೃಂಗಾರವನ್ನು ಒಬ್ಬ ಮಹಿಳೆ ತೆರೆಯ ಮೇಲೆ ಎಷ್ಟು ವಿಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ಪ್ರೆಸೆಂಟ್‌ ಮಾಡಬಹುದು ಎಂಬುದನ್ನು ಚಿತ್ರದ ಶೂಟಿಂಗ್‌ ಸಮಯದಲ್ಲಿ ನಾನು ಅರಿತುಕೊಂಡೆ. 

ಪುರುಷ ನಿರ್ದೇಶಕರಿಗಿಂತಲೂ ಮಹಿಳೆಯೊಬ್ಬಳು ಆ ರೀತಿಯ ಭಾವನೆ, ದೃಶ್ಯಗಳನ್ನು ಕಟ್ಟಿಕೊಡುವ ರೀತಿ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ.

ಇದನ್ನೂ ಓದಿ: Yash: ಗೀತೂ ಮೋಹನ್‌ದಾಸ್ ಬಗ್ಗೆ ಯಶ್ ಹೇಳಿದ್ದೇನು? ಹೊಸ ಸಿನಿಮಾ ಬಗ್ಗೆ ಮನಬಿಚ್ಚಿ ಮಾತಾಡಿದ ಯಶ್!

44
ಪೋಸ್ಟ್‌ ಪ್ರೊಡಕ್ಷನ್‌ ಕೆಲಸ

ಗೀತು ಅವರು ಒಬ್ಬ ಅದ್ಭುತ ಲೇಖಕಿ ಕೂಡ. ನಾನು ಅವರಿಂದ ಬಹಳಷ್ಟು ಕಲಿಯುತ್ತಿದ್ದೇನೆ. ಈಗ ‘ಟಾಕ್ಸಿಕ್‌’ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳ ಹಂತದಲ್ಲಿದೆ.

ಟಾಕ್ಸಿಕ್ ಸಿನಿಮಾ ಜೂನ್ 4ರಂದು ಬಿಡುಗಡೆಯಾಗಲಿದೆ.

ಇದನ್ನೂ  ಓದಿ: ಸಾಹಸಕ್ಕೆ ಹೊಸ ಅರ್ಥ ಕೊಟ್ಟ ಯಶ್‌: ‘ಟಾಕ್ಸಿಕ್‌’ನಲ್ಲಿ ಗನ್‌ಫೂ ಆ್ಯಕ್ಷನ್‌ ಹೈಲೈಟ್‌

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories