Bigg Boss Seaon 12 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್ 28ರಿಂದ ಈ ಷೋ ಆರಂಭವಾಗಲಿದ್ದು, ಈ ಷೋನಲ್ಲಿ ಕಾಣಿಸಿಕೊಳ್ಳುವ ಕೆಲವು ಸ್ಪರ್ಧಿಗಳ ಲಿಸ್ಟ್ ಇದಾಗಲೇ ಔಟ್ ಆಗಿದೆ. ಅದರಲ್ಲಿ ಒಂದು ಹೆಸರು ದೃಷ್ಟಿಬೊಟ್ಟು (Drishti Bottu) ಸೀರಿಯಲ್ನಲ್ಲಿ ದತ್ತಾಭಾಯಿ ರೋಲ್ ಮಾಡ್ತಿರೋ ನಟ ವಿಜಯ ಸೂರ್ಯ.
27
ಹೊರಕ್ಕೆ ಬಂದ್ರಾ ನಟ?
ಇದಾಗಲೇ ವಿಜಯ ಸೂರ್ಯ (Vijay Suriya) ಅವರು ದೃಷ್ಟಿ ಬೊಟ್ಟು ಸೀರಿಯಲ್ನಿಂದ ಹೊರಕ್ಕೆ ಬಂದಿದ್ದಾರೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸುದ್ದಿಯಾಗುತ್ತಿದೆ. ಅಷ್ಟಕ್ಕೂ ಸೀರಿಯಲ್ನಲ್ಲಿ ಇದಾಗಲೇ ಮಸಿ ಬಳೆದುಕೊಂಡಿದ್ದ ದೃಷ್ಟಿ ತನ್ನ ನಿಜ ರೂಪವನ್ನು ತೋರಿಸಿದ್ದಾಳೆ. ಇವರಿಬ್ಬರ ನಡುವೆ ಬಣ್ಣದ ವಿಷಯವನ್ನೇ ಇಟ್ಟುಕೊಂಡು ಬೆಂಕಿ ಹಚ್ಚುವ ಪ್ಲ್ಯಾನ್ ಮಾಡಿದ್ದ ದತ್ತನ ಅತ್ತಿಗೆಗೆ ಸೋಲಾಗಿದೆ.
37
ಲವ್ ಶುರುವಾಗುವ ಹೊತ್ತಲ್ಲೇ ಟ್ವಿಸ್ಟ್
ದತ್ತ ಮತ್ತು ದೃಷ್ಟಿ ನಡುವೆ ಲವ್ ಶುರುವಾಗುವ ಹೊತ್ತಿನಲ್ಲಿಯೇ ಬಿಗ್ಬಾಸ್ (Bigg Boss Kannada 12) ಶುರುವಾಗಲಿರುವ ಕಾರಣ, ವಿಜಯ ಸೂರ್ಯ ಅವರು ಸೀರಿಯಲ್ ಬಿಡುತ್ತಿದ್ದಾರೆ ಎಂದು ಕೆಲವರು, ಇನ್ನು ಕೆಲವರು ದೃಷ್ಟಿಬೊಟ್ಟು ಸೀರಿಯಲ್ಲೇ ಮುಕ್ತಾಯವಾಗಲಿದೆ ಎಂದೆಲ್ಲಾ ಸುದ್ದಿ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ.
ಇಂದು ಬಿಡುಗಡೆಯಾಗಿರುವ ಪ್ರೊಮೋದಲ್ಲಿ ದತ್ತಭಾಯ್ ಕಾಣೆಯಾಗಿದ್ದಾನೆ. ಅವನು ಸಿಗದೇ ದೃಷ್ಟಿ ಚಡಪಡಿಸುತ್ತಿದ್ದಾಳೆ. ಅದೇ ಇನ್ನೊಂದೆಡೆ ಶರಾವತಿ ದತ್ತನನ್ನು ಮುಗಿಸಿರುವುದಾಗಿ ಮಾತನಾಡುತ್ತಿದ್ದಾಳೆ. ಇಬ್ಬರನ್ನೂ ಬೇರೆ ಮಾಡಲು ಸಾಧ್ಯವಾಗದ ಕಾರಣ, ದತ್ತನನ್ನೇ ಮುಗಿಸಿರುವುದಾಗಿ ಹೇಳಿದ್ದಾಳೆ.
57
ದತ್ತನ ರೋಲ್ಗೆ ಪ್ಲಾಸ್ಟಿಕ್ ಸರ್ಜರಿ?
ಇದರ ಅರ್ಥ ದೃಷ್ಟಿಬೊಟ್ಟು ಸೀರಿಯಲ್ ಸದ್ಯ ಮುಗಿಯುವುದಿಲ್ಲ. ದತ್ತನ ರೋಲ್ ಚೇಂಜ್ ಆಗುವ ಸಾಧ್ಯತೆ ನಿಚ್ಚಳವಾಗಿದೆ. ವಿಜಯ ಸೂರ್ಯ ಅವರು ಬದಲಾಗುವ ಎಲ್ಲಾ ಸೂಚನೆಗಳೂ ಕಾಣುತ್ತಿವೆ. ದತ್ತನ ರೋಲೇ ಚೇಂಜ್ ಮಾಡ್ತಾರಾ ಅಥವಾ ದತ್ತನಿಗೇ ಪ್ಲಾಸ್ಟಿಕ್ ಸರ್ಜರಿ ಮಾಡಿದಂತೆ ಮಾಡಿ ಕಥೆಗೆ ಬೇರೆ ರೂಪ ಕೊಡುತ್ತಾರಾ ಎಂದು ಕಾಯಬೇಕಿದೆ.
67
ಈ ಹಿಂದೆಯೂ ಆಗಿತ್ತು...
ಈ ಹಿಂದೆ ಜೊತೆ ಜೊತೆಯಲಿ ಸೀರಿಯಲ್ನಲ್ಲಿ ನಾಯಕನ ರೋಲ್ ಮಾಡುತ್ತಿದ್ದ ಅನಿರುದ್ಧ್ ಅವರು ಬಿಟ್ಟುಹೋದಾಗ ಪ್ಲಾಸ್ಟಿಕ್ ಸರ್ಜರಿ ಮಾಡಿದಂತೆ ಮಾಡುವ ಮೂಲಕ ಹೊಸ ನಾಯಕನನ್ನು ಪರಿಚಯಿಸಲಾಗಿತ್ತು. ಇಲ್ಲಿಯೂ ಅದೇ ರೀತಿ ಆದರೂ ಅಚ್ಚರಿಯಿಲ್ಲ. ಆದರೆ ಇದನ್ನು ವೀಕ್ಷಕರು ಹೇಗೆ ಅರಗಿಸಿಕೊಳ್ಳುತ್ತಾರೆ ಎನ್ನವುದೇ ಈಗಿರುವ ಪ್ರಶ್ನೆ.
77
ನಾಯಕನಿಗೆ ಪ್ಲಾಸ್ಟಿಕ್ ಸರ್ಜರಿ
ಪ್ಲಾಸ್ಟಿಕ್ ಸರ್ಜರಿ ಮಾಡಲಿ, ಅಥವಾ ದತ್ತಾ ರೋಲ್ ಅನ್ನು ಚೇಂಜ್ ಮಾಡಲಿ ಒಟ್ಟಿನಲ್ಲಿ ವೀಕ್ಷಕರಿಗೆ ಒಂದಷ್ಟು ದಿನ ಅದನ್ನು ಅರಗಿಸಿಕೊಳ್ಳುವುದು ಕಷ್ಟ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಕೆಲವು ವರದಿಗಳ ಪ್ರಕಾರ ಈ ಸೀರಿಯಲ್ಗೆ ಅಷ್ಟೊಂದು ಟಿಆರ್ಪಿ ಇಲ್ಲದ ಕಾರಣ ಅದರ ಟೈಮಿಂಗ್ ಬದಲು ಮಾಡಲಾಗಿತ್ತು ಎನ್ನಲಾಗಿದೆ. ಈಗ ಹೊಸ ಟ್ವಿಸ್ಟ್ ಕೊಟ್ಟು ಜನರನ್ನು ಆಕರ್ಷಿಸಬಹುದಾ, ಅಥವಾ ಸೀರಿಯಲ್ ಮುಗಿಸ್ತಾರಾ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.