ಮಗಳಿಕ್ಕಿಂತ ಹೆಚ್ಚು ಮುದ್ದು ರುಕ್ಮಿಣಿ ವಸಂತ್ ತಾಯಿ… ಬರ್ತ್ ಡೇ ಖುಷಿಯಲ್ಲಿ ಅಮ್ಮನಿಗೆ ಹೇಳಿದ್ದೇನು ಪುಟ್ಟಿ

Published : Sep 09, 2025, 04:37 PM IST

ಸಪ್ತಸಾಗರದಾಚೆ ಸಿನಿಮಾದಲ್ಲಿ ಪುಟ್ಟಿಯಾಗಿ ಕನ್ನಡಿಗರ ಮನಸ್ಸನ್ನು ಗೆದ್ದ ನಟಿ ರುಕ್ಮಿಣಿ ವಸಂತ್ ತಮ್ಮ ತಾಯಿಯ ಹುಟ್ಟುಹಬ್ಬದಂದು ನಟಿ ವಿಶೇಷ ಫೋಟೊ ಮೂಲಕ ವಿಶ್ ಮಾಡಿದ್ದಾರೆ.

PREV
18

ಸಪ್ತ ಸಾಗರದಾಚೆಯ ಚೆಲುವೆ ರುಕ್ಮಿಣಿ ವಸಂತ್, (Rukmini Vasanth) ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೇಶದೆಲ್ಲೆಡೆ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ಇನ್ನೆರಡು ವರ್ಷಕ್ಕಾಗುವಷ್ಟು ಸಿನಿಮಾಗಳು ಕೂಡ ನಟಿಯ ಕೈಯಲ್ಲಿದೆ. ತುಂಬಾನೆ ಬ್ಯುಸಿಯಾಗಿರುವ ನಟಿಯರ ಸಾಲಿನಲ್ಲಿ ರುಕ್ಮಿಣಿ ಇದ್ದಾರೆ.

28

ಸದ್ಯ ಮದರಾಸಿ (Madarasi) ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿಯಾಗಿರುವ ನಟಿ ರುಕ್ಮಿಣಿ, ಅದರ ನಡುವೆ ತಮ್ಮ ತಾಯಿಗೆ ಸ್ಪೆಷಲ್ ಬರ್ತ್ ಡೇ ವಿಶಸ್ ತಿಳಿಸಿದ್ದಾರೆ. ಸೆಪ್ಟೆಂಬರ್ 9ರಂದು ರುಕ್ಮಿಣಿ ವಸಂತ್ ಅವರ ತಾಯಿ ಶುಭಾಶಿಣಿ ವಸಂತ್ ಅವರ ಹುಟ್ಟಿದ ದಿನವಾಗಿದ್ದು. ಈ ಹಿನ್ನೆಲೆಯಲ್ಲಿ ರುಕ್ಮಿಣಿ ಅಮ್ಮನ ಮುದ್ದಾ ಫೋಟೊಗಳನ್ನು ಶೇರ್ ಮಾಡಿ ಶುಭಾಶಯ ತಿಳಿಸಿದ್ದಾರೆ.

38

ನನಗೆ ತಿಳಿದಿರುವ ಅತ್ಯುತ್ತಮ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ಅಮ್ಮ ಇನ್‌ಸ್ಟಾಗ್ರಾಮ್‌ನಲ್ಲಿದ್ದಾಳೆಯೇ? ಇಲ್ಲ ಈ ಚಿತ್ರಗಳನ್ನು ಪೋಸ್ಟ್ ಮಾಡುವುದನ್ನು ಅದು ತಡೆಯುತ್ತದೆಯೇ? ಖಂಡಿತಾ ಇಲ್ಲ. ತುಂಬಾ ಭಾವನೆಗಳು ಮತ್ತು ತುಂಬಾ ಪದಗಳಲ್ಲಿ ನಾನು ಏನೂ ಹೇಳೋದಿಲ್ಲ, ಆದ್ದರಿಂದ ನಾನು ಹೇಳಬಲ್ಲೆ, ನೀವು ನನಗೆ ನೀಡಿದ ಎಲ್ಲದಕ್ಕೂ ಧನ್ಯವಾದಗಳು ಮತ್ತು ನೀವು ನನ್ನನ್ನು ರಕ್ಷಿಸಿದ ಎಲ್ಲದಕ್ಕೂ ಧನ್ಯವಾದಗಳು. ಐ ಲವ್ ಯೂ ಎಂದು ಬರೆದುಕೊಂಡಿದ್ದಾರೆ.

48

ಈ ಫೋಟೊಗಳ ಜೊತೆಗೆ ರುಕ್ಮಿಣಿ ಅಮ್ಮನ ಸುಂದರವಾದ ಫೋಟೊಗಳು, ಅಮ್ಮನ ಜೊತೆ ಮುದ್ದಾಗಿ ಕ್ಯೂಟ್ ಫೇಸ್ ಮಾಡಿರುವ ಫೋಟೊ, ಅಮ್ಮನ ಹಳೆಯ ರೆಟ್ರೋ ಫೋಟೊ, ಅಮ್ಮ-ಅಪ್ಪನ ಕೈಯಲ್ಲಿ ಪುಟಾಣಿ ರುಕ್ಮಿಣಿ ಇರುವ ಫೋಟೊಗಳನ್ನು ನಟಿ ಶೇರ್ ಮಾಡುವ ಮೂಲಕ ಅಮ್ಮನಿಗೆ ಶುಭಾಶಯ ತಿಳಿಸಿದ್ದಾರೆ.

58

ರುಕ್ಮಿಣಿ ವಸಂತ್ ಸೊಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡುತ್ತಿದ್ದಂತೆ, ಸಿನಿ ಸ್ನೇಹಿತರು, ಅಭಿಮಾನಿಗಳು ಎಲ್ಲರೂ ರುಕ್ಮಿಣಿ ವಸಂತ್ ತಾಯಿಗೆ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ರುಕ್ಕುನಂತಹ ಬ್ಯೂಟಿಗೆ ಜನ್ಮ ನೀಡಿದಕ್ಕಾಗಿ ಥ್ಯಾಂಕ್ಯೂ ಎಂದಿದ್ದಾರೆ. ಅಷ್ಟೇ ಅಲ್ಲ ಅತ್ತೆ ತುಂಬಾನೆ ಸುಂದರವಾಗಿದ್ದಾರೆ ಎಂದು ಪಡ್ಡೆಗಳು ಸಹ ಕಾಮೆಂಟ್ ಮಾಡಿದ್ದಾರೆ.

68

ರುಕ್ಮಿಣಿ ವಸಂತ್ ತಾಯಿ ಶುಭ ಕುರಿತು ಹೇಳೊದಾದರೆ ಇವರು ಭರತನಾಟ್ಯ ಕಲಾವಿದೆಯಾಗಿದ್ದಾರೆ. ಕರ್ನಾಟಕದಿಂದ ಮೊದಲ ಅಶೋಕ ಚಕ್ರ ಪ್ರಶಸ್ತಿ ಪಡೆದ ಕರ್ನಲ್ ವಸಂತ್ ವೇಣುಗೋಪಾಲ್ (Colonel Vasanth Venugopal) ಅವರ ಪತ್ನಿಯಾಗಿರುವ ಶುಭ, ಪತಿಯ ವೀರ ಮರಣದ ಬಳಿಕ ವಿಧವೆಯರಾದ ಯೋಧರ ಪತ್ನಿಯರಿಗಾಗಿ ಫೌಂಡೇಶನ್ ಕೂಡ ಸ್ಥಾಪನೆ ಮಾಡಿದ್ದಾರೆ.

78

ಇನ್ನು ಕರಿಯರ್ ವಿಷ್ಯಕ್ಕೆ ಬರೋದಾದ್ರೆ ಬೀರ್ ಬಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರುಕ್ಮಿಣಿ ವಸಂತ್, ಸಪ್ತ ಸಾಗರದಾಚೆ ಎಲ್ಲೋ (Sapta sagaradache ello) ಸೈಡ್ ಎ ಮತ್ತು ಬಿ ಮೂಲಕ ಅಭಿಮಾನಿಗಳು ಪ್ರೀತಿಯ ಪುಟ್ಟಿಯಾಗಿ ಮನೆಮಾತಾದರು, ಬಳಿಕ ಬಾನ ದಾರಿಯಲ್ಲಿ, ಬಘೀರ, ಭೈರತಿ ರಣಗಲ್ ಸಿನಿಮಾದಲ್ಲಿ ನಟಿಸುವ ಮೂಲಕ ತ್ಯಾಗರಾಣಿ ಎನಿಸಿಕೊಂಡರು.

88

ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳ ಬಳಿಕ ತೆಲುಗಿನಲ್ಲಿ ಅಪುಡೋ, ಇಪುಡೋ ಎಪುಡೋ, ತಮಿಳಿನಲ್ಲಿ ಏಸ್, ಮದರಾಸಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಇನ್ನು ಪ್ಯಾನ್ ಇಂಡಿಯಾ ಸಿನಿಮಾಗಳಾದ ರಿಷಭ್ ಶೆಟ್ಟಿಯ ಕಾಂತಾರಾ (Kantara Chapter 1), ಯಶ್ ಅಭಿನಯದ ಟಾಕ್ಸಿಕ್ ಹಾಗೂ ಎನ್ ಟಿಆರ್ ಜೊತೆಗೂ ಸಿನಿಮಾದಲ್ಲಿ ರುಕ್ಮಿಣಿ ನಟಿಸುತ್ತಿದ್ದಾರೆ.

Read more Photos on
click me!

Recommended Stories