ಕೊನೆಯ ಸಂದೇಶ: ಮಗನ ಬಗ್ಗೆ ವಿಚಾರಿಸಿ ಉತ್ತರ ಪಡೆದಿದ್ದರು!
ನಿನ್ನೆ ರಾತ್ರಿ ಕೂಡ ವೈಶಾಕ್ ಅವರು ಪತ್ನಿ ಮೇಘಾಗೆ ವಾಟ್ಸಾಪ್ ಮಾಡಿದ್ದರು. "ಮಗ ಮನೆಗೆ ಬಂದನಾ?" ಎಂದು ಕೇಳಿದ್ದರು. ಅದಕ್ಕೆ ಮೇಘಾ "ಬಂದಿದ್ದಾನೆ" ಎಂದು ರಿಪ್ಲೈ ಕೂಡ ಮಾಡಿದ್ದರು. ಆದರೆ, ಅದೇ ಅವರ ಕೊನೆಯ ಸಂಭಾಷಣೆ ಆಗುತ್ತದೆ ಎಂದು ಮೇಘಾ ಅಂದುಕೊಂಡಿರಲಿಲ್ಲ. ರಾತ್ರಿ 11:30ರ ಸುಮಾರಿಗೆ ಪೊಲೀಸರಿಂದ ಬಂದ ಕರೆ ವೈಶಾಕ್ ಅವರ ಇಡೀ ಕುಟುಂಬವನ್ನು ಸ್ತಬ್ದಗೊಳಿಸಿತ್ತು.
ಘಟನಾ ಸ್ಥಳದಲ್ಲಿ ನಟಿ ಕೃಷಿ ಇರುವುದು ಕಂಡ ಪತ್ನಿ!
ವಿಷಯ ತಿಳಿದು ಮೇಘಾ ಮತ್ತು ಮಾವನವರು ಕೃಷಿ ತಾಪಾಂಡ ಅವರ ನಿವಾಸಕ್ಕೆ ಹೋದಾಗ, ವೈಶಾಕ್ ಅಲ್ಲಿ ಮೃತಪಟ್ಟಿದ್ದರು. ಬೆಡ್ ಮೇಲೆ ಅಂಗಾತ ಮಲಗಿದ್ದ ಸ್ಥಿತಿಯಲ್ಲಿ ಪತಿ ಇರುವುದನ್ನು ಕಂಡ ಪತ್ನಿ ಕಂಗಾಲಾಗಿದ್ದರು. ಆ ಸಮಯದಲ್ಲಿ ಘಟನಾ ಸ್ಥಳದಲ್ಲಿ ಪೊಲೀಸರ ಜೊತೆಗೆ ನಟಿ ಕೃಷಿ ಕೂಡ ಇರುವುದನ್ನು ಪತ್ನಿ ಗಮನಿಸಿದ್ದಾರೆ. 2010ರಲ್ಲಿ ಮದುವೆಯಾಗಿ 14 ವರ್ಷದ ಮಗನಿದ್ದರೂ, ವೈಶಾಖ್-ಮೇಘಾ ಸಂಸಾರದಲ್ಲಿ ನಟಿ ಕೃಷಿ ತಾಪಂಡ ಎಂಟ್ರಿ ಬಿರುಗಾಳಿ ಎಬ್ಬಿಸಿತ್ತು ಎಂಬುದು ವೈಶಾಕ್ ಪತ್ನಿ ಮೇಘಾ ಮಾತಿನಿಂದ ಸ್ಪಷ್ಟವಾಗಿದೆ.