ಶರ್ಟ್ ಬಟನ್ಸ್​ ಓಪನ್​ ಇಡೋದ್ಯಾಕೆ Ravichandran, Rakshit Shetty? ಕ್ರೇಜಿಸ್ಟಾರ್ ಉತ್ತರಕ್ಕೆ ಫ್ಯಾನ್ಸ್​ ದಂಗು​

Published : Jun 25, 2026, 01:42 PM IST

ಸಾಮಾನ್ಯವಾಗಿ ಪುರುಷರು ಶರ್ಟ್ ಬಟನ್ ಓಪನ್ ಇಡುತ್ತಾರೆ. ಸಂದರ್ಶನವೊಂದರಲ್ಲಿ ರವಿಚಂದ್ರನ್ ಇದನ್ನು 'ಗುಂಡಿಗೆ' ಮತ್ತು 'ಪ್ರಾಮಾಣಿಕತೆ'ಗೆ ಹೋಲಿಸಿದರೆ, ವೈಜ್ಞಾನಿಕವಾಗಿ ಇದು ಟೆಸ್ಟೋಸ್ಟೆರಾನ್ ಹಾರ್ಮೋನ್‌ಗೆ ಸಂಬಂಧಿಸಿದೆ ಮತ್ತು ಪೌರುಷದ ಸಂಕೇತವೆಂದೂ ಪರಿಗಣಿಸಲಾಗುತ್ತದೆ.

PREV
16
ಶರ್ಟ್​ ಬಟನ್​ ಓಪನ್​

ಸಾಮಾನ್ಯವಾಗಿ ಬಹುತೇಕ ಮಂದಿ ತಮ್ಮ ಶರ್ಟ್​ನ ಮೊದಲ ಬಟನ್​ ಓಪನ್​ ಇಟ್ಟಿರುತ್ತಾರೆ. ಅದಕ್ಕೆ ಹಲವಾರು ಕಾರಣಗಳು ಇರುತ್ತವೆ. ಹಿಂದೆಲ್ಲಾ ರೌಡಿಸಂ ತೋರಿಸುವುದಕ್ಕಾಗಿ ಶರ್ಟ್​ ಬಟನ್​ ಓಪನ್​ ಮಾಡುವುದು ಒಂದು ಸಂಕೇತ ಎಂಬಂತೆ ತೋರಿಸಲಾಗುತ್ತಿತ್ತು. ಆದರೆ ಅದನ್ನು ಇದೀಗ ಸಾಮಾನ್ಯವಾಗಿ ಬಹುತೇಕ ಮಂದಿ ಮಾಡುವುದು ಇದೆ. ಟಿಪ್​ ಟಾಪ್​ ಎನ್ನಿಸುವುದು ತಮ್ಮ ಶರ್ಟ್​ ಬಟನ್​ ಸಂಪೂರ್ಣವಾಗಿ ಮುಚ್ಚಿಟ್ಟುಕೊಂಡು ನೀಟ್​ ಆಗಿ ಇರುವವರು ಮಾತ್ರ ಎನ್ನಿಸಿದರೂ, ಶರ್ಟ್​ ಬಟನ್​ ಓಪನ್​ ಇಡುವುದು ಸರ್ವೇ ಸಾಮಾನ್ಯವಾಗಿದೆ.

26
ರವಿಚಂದ್ರನ್​ ಮತ್ತು ರಕ್ಷಿತ್​ ಶೆಟ್ಟಿ

ಆ್ಯಂಕರ್​ ಅನುಶ್ರೀ ಅವರು ತಮ್ಮ ಸಂದರ್ಶನವೊಂದರಲ್ಲಿ ಇದೇ ಪ್ರಶ್ನೆಯನ್ನು ರವಿಚಂದ್ರನ್​ ಮತ್ತು ರಕ್ಷಿತ್​ ಶೆಟ್ಟಿ ಅವರಿಗೆ ಕೇಳಿದ್ದಾರೆ. ಕೆಲ ವರ್ಷಗಳ ಹಿಂದಿನ ಈ ವಿಡಿಯೋ ಮತ್ತೊಮ್ಮೆ ಈಗ ವೈರಲ್​ ಆಗುತ್ತಿದೆ. ಎಂದಿನಂತೆ ಹಾಸ್ಯದ ರೂಪದಲ್ಲಿ ಆ್ಯಂಕರ್​ ಅನುಶ್ರೀ ಅವರು, ನೀವಿಬ್ಬರೂ ಶರ್ಟ್​ ಬಟನ್​ ಓಪನ್​ ಇಡುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

36
ಗುಂಡಿಗೆ ತೋರಿಸಲು ಧೈರ್ಯ ಬೇಕು

ಅದಕ್ಕೆ ಕೂಡಲೇ ರವಿಚಂದ್ರನ್​ ಅವರು, ಗುಂಡಿಗೆ ತೋರಿಸಲು ಧೈರ್ಯ ಇರಬೇಕಲ್ಲಮ್ಮಾ ಎಂದಿದ್ದಾರೆ. ಇದಕ್ಕೆ ರಕ್ಷಿತ್​ ಶೆಟ್ಟಿ ಅವರು ಕೂಡಲೇ ಓ ಎಂದು ನಿಜ ನಿಜ ಎನ್ನುವಂತೆ ರವಿಚಂದ್ರನ್​ ಅವರ ಕೈಕುಲುಕಿದ್ದಾರೆ.

46
ತುಂಬಾ ಪ್ರಾಮಾಣಿಕ

ಇಲ್ಲಿಗೇ ನಿಲ್ಲದ ರವಿಚಂದ್ರನ್​ ಅವರು, ಎದೆಯ ಮೇಲೆ ಕೂದಲು ಇರುವ ವ್ಯಕ್ತಿ ತುಂಬಾ ಪ್ರಾಮಾಣಿಕ ಆಗಿರ್ತಾನೆ. ಅಂಥ ವ್ಯಕ್ತಿಯನ್ನು ನೀವು ಸುಲಭದಲ್ಲಿ ನಂಬಬಹುದು. ಅದಕ್ಕಾಗಿ ನೀವು ಎಲ್ಲರೂ ಎದೆಯ ಮೇಲೆ ಕೂದಲು ಇರುವ ವ್ಯಕ್ತಿಯನ್ನೇ ಹುಡುಕಿ ಎಂದು ತಮಾಷೆ ಮಾಡಿದ್ದಾರೆ. ಇದರ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್​ ಆಗುತ್ತಿದೆ.

56
ಟೆಸ್ಟೋಸ್ಟೆರಾನ್ ಹಾರ್ಮೋನ್‌

ಅಷ್ಟಕ್ಕೂ ಪುರುಷರಲ್ಲಿ ಎದೆಯ ಕೂದಲು ಬೆಳೆಯುವುದು ಟೆಸ್ಟೋಸ್ಟೆರಾನ್ ಹಾರ್ಮೋನ್‌ ಮತ್ತು ಜೀನ್‌ಗಳ (Genetics) ಪ್ರಭಾವದಿಂದಾಗಿ ನಡೆಯುವ ಸ್ವಾಭಾವಿಕ ಪ್ರಕ್ರಿಯೆ. ಇದು ಹದಿಹರೆಯದಲ್ಲಿ ಆರಂಭಗೊಂಡು ವಯಸ್ಸಾದಂತೆ ದಪ್ಪ ಮತ್ತು ಬಲವಾಗುತ್ತದೆ.

66
ಪೌರುಷದ ಸಂಕೇತ

ಎದೆಯ ಮೇಲೆ ಕೂದಲು ಇದ್ದರೆ ಇದನ್ನು ಪೌರುಷದ ಸಂಕೇತ ಎಂದು ಕರೆಯಲಾಗುತ್ತದೆ. ಇದೇ ಕಾರಣಕ್ಕೆ ಸಾಮಾನ್ಯವಾಗಿ ರೌಡಿಸಂ ತೋರಿಸುವಾಗ ತಮ್ಮ ಪೌರುಷವನ್ನು ತೋರಿಸುವ ಸಂಕೇತವಾಗಿ ಷರ್ಟ್​ ಬಟನ್​ ಬಿಚ್ಚಿಕೊಂಡು ತೋರಿಸುತ್ತಾರೆ ಎನ್ನಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories