ಬೆಂಗಳೂರು ಬೆಟ್ಟದ ಮೇಲೆ ಐಷಾರಾಮಿ 'ಜೀರೋ ಡಿಗ್ರಿ ಆನ್‌ ದಿ ಹಿಲ್' ಪಬ್ ಕಟ್ಟಿಸಿದ ನಟಿ ಅಮೂಲ್ಯ; ಇದು ಸೋಮರಸದ ಸ್ವರ್ಗ!

Published : Jun 25, 2026, 06:55 PM ISTUpdated : Jun 26, 2026, 07:43 PM IST

ಸ್ಯಾಂಡಲ್‌ವುಡ್ ನಟಿ ಅಮೂಲ್ಯ (Actress Amulya) ಮತ್ತು ಅವರ ಪತಿ ಜಗದೀಶ್ ಆರ್. ಚಂದ್ರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ 'ಝೀರೋ ಡಿಗ್ರಿ ಆನ್ ದಿ ಹಿಲ್' ಎಂಬ ಹೊಸ ಪಬ್ ಅನ್ನು ಆರಂಭಿಸಿದ್ದಾರೆ. ಬೆಟ್ಟದ ಮೇಲೆ ನಿರ್ಮಿಸಲಾದ ಈ ಐಷಾರಾಮಿ ಪಬ್ ವಿಶಿಷ್ಟ ವಿನ್ಯಾಸಗಳನ್ನು ನೀವೇ ನೋಡಿ.

PREV
16

ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ (Sandalwood Actress Amulya), ಸಿನಿಮಾದಿಂದ ದೂರವಾಗಿ ಹಲವು ವರ್ಷಗಳೇ ಕಳೆದಿವೆ. ಆದರೆ ಚೆಲುವಿನ ಚಿತ್ತಾರದ ಮೂಲಕ ಬೆಳ್ಳಿತೆರೆಗೆ ಬಂದ ಅಮೂಲ್ಯ ಕನ್ನಡಿಗರ ಮನೆ ಮಗಳಾಗಿದ್ದಳು. ಸಿನಿಮಾದಲ್ಲಿ ಉತ್ತುಂಗದಲ್ಲಿರುವಾಗಲೇ ಉದ್ಯಮಿ ಹಾಗೂ ರಾಜಕಾರಣಿಯನ್ನು ಮದುವೆ ಮಾಡಿಕೊಂಡು ಸುಖ ದಾಂಪತ್ಯ ನಡೆಸುತ್ತಿದ್ದಾರೆ. 

ಇತ್ತೀಚೆಗೆ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಲು ಸಿದ್ಧತೆ ನಡೆಸಿದ್ದರು. ಹೀಗಿರುವಾಗಲೇ ಜೀವನಕ್ಕೆ ಶಾಶ್ವತ ಆದಾಯ ಬರುವಂತಹ ಪಬ್ ಒಂದನ್ನು ನಿರ್ಮಿಸಿ, ಉದ್ಯಮದ ಒಡತಿಯಾಗಿದ್ದಾರೆ.

26

ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್.ಆರ್.ನಗರ) 5 ನೇ ಹಂತ, ಶಕ್ತಿ ಹಿಲ್ ರೆಸಾರ್ಟ್ ಹತ್ತಿರ ಝೀರೋ ಡಿಗ್ರಿ ಆನ್ ದಿ ಹಿಲ್ ಬ್ರೂವರಿ ಅಂಡ್ ಕಿಚನ್ ಎಂಬ ಪಬ್ (Zero Degree on the hill)  ಅನ್ನು ಆರಂಭಿಸಿದ್ದಾರೆ. ಈ ಪಬ್ ಭೂಮಿಯ ಮೇಲಿನ ಸ್ವರ್ಗದಂತಿದೆ. ಬೆಟ್ಟದ ಮೇಲಿರುವ ಈ ಪಬ್‌ನಲ್ಲಿ ಸ್ಥಳೀಯ ಮತ್ತು ಪಾಶ್ಚಿಮಾತ್ಯ ಸಂಪ್ರದಾಯದ ಥೀಮ್‌ಗಳನ್ನು ಅಳವಡಿಕೆ ಮಾಡಲಾಗಿದೆ. 

ಜೊತೆಗೆ, ಬಂಡೆಗಳು, ನೀರಿನ ಕೊಳಗಳು, ನೀರಿನ ಝರಿ ಸೇರಿದಂತೆ ಒಂದು ಸುಂದರ ರಮಣೀಯ ತಾಣದಂತೆ ನಿರ್ಮಿಸಲಾಗಿದೆ. ಇದನ್ನು ಸೋಮರಸ ಹೀರುವ ಸ್ವರ್ಗವೆಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

36

ನಟಿ ಅಮೂಲ್ಯ ಹಾಗೂ ಅವರ ಗಂಡ ಜಗದೀಶ್ ಆರ್. ಚಂದ್ರ (Amulya husband Jagadish R Chandra) ಜಂಟಿಯಾಗಿ ನಿರ್ಮಿಸಿದ ಈ ಪಬ್‌ನ ಉದ್ಘಾಟನೆಗೆ ಕನ್ನಡ ಚಿತ್ರರಂಗದ ಅನೇಕ ದಿಗ್ಗಜರು ಆಗಮಿಸಿದ್ದರು. ಕನ್ನಡ ಚಿತ್ರರಂಗದ ಬಾದ್‌ಷಾ ಕಿಚ್ಚ ಸುದೀಪ್‌ (Kicchja Sudeep), ಗೋಲ್ಡನ್‌ ಸ್ಟಾರ್‌ ಗಣೇಶ್‌ (Golden Star Ganesh), ರಿಷಬ್‌ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ, ಡಾಲಿ ಧನಂಜಯ್ (Dali Dhananjay), ಹಿರಿಯ ನಟಿಯರಾದ ಶ್ರುತಿ, ಮಾಳವಿಕಾ ಅವಿನಾಶ್‌ ಸೇರಿದಂತೆ ಹಲವು ಸ್ಟಾರ್‌ ಸೆಲೆಬ್ರಿಟಿಗಳು 'ಜೀರೋ ಡಿಗ್ರಿ ಆನ್ ದಿ ಹಿಲ್' ಪಬ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಮೂಲ್ಯ-ಜಗದೀಶ್‌ ದಂಪತಿಯ ಹೊಸ ಉದ್ಯಮಕ್ಕೆ ಶುಭ ಕೋರಿದ್ದಾರೆ.

46

ಇನ್ನು ಈ ಐಷಾರಾಮಿ ಪಬ್‌ನ ಹೆಸರೇ ಸೂಚಿಸುವಂತೆ, 'ಜೀರೋ ಡಿಗ್ರಿ ಆನ್‌ ದಿ ಹಿಲ್‌' ಪಬ್‌ ಬೆಟ್ಟದ ಮಾದರಿಯಲ್ಲಿ ಎತ್ತರದ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಬೆಂಗಳೂರಿನ ಗಿಜಿಗಿಡುವ ಪ್ರದೇಶದಿಂದ ಕೊಂಚ ದೂರದಲ್ಲಿ ಆರ್.ಆರ್. ನಗರದ ಎಸ್.ಎಸ್. ಹಿಲ್ಸ್‌ನಲ್ಲಿ ನಿರ್ಮಿಸಲಾಗಿದ್ದು, ಇಲ್ಲಿ ಬೆಂಗಳೂರಿನ ಸುಂದರ ಸಮಯ ಕಳೆಯಬಹುದು. ವಾರಾಂತ್ಯದ ದಿನಗಳನ್ನು ಎಂಜಾಯ್ ಮಾಡುವುದಕ್ಕೆ ಈ ಪಬ್ ಹೇಳಿ ಮಾಡಿಸಿದಂತಿದೆ.

56

ಪಬ್‌ನಲ್ಲಿ ಗುಡಿಸಲು ಮಾದರಿ, ಅರಮನೆಯ ಮಾದರಿ, ಸಿಂಹ ಮತ್ತು ಹುಲಿ ಬಾಯಿಯಲ್ಲಿ ಕೌಂಟರ್‌ಗಳು, ಮನುಷ್ಯನ ಮುಖದಾಕೃತಿಯಲ್ಲಿ ನೀರಿನ ಝರಿ, ಗುಹೆಯಾಕಾರದ ತಾಣ, ಹಳ್ಳಿ ಸೊಗಡಿನ ನೆಲಹಾಸು, ವಿಶಾಲವಾದ ಪಾರ್ಟಿ ಪ್ರಾಂಗಣ, ಲೈಟಿಂಗ್ಸ್ ಹಾಗೂ ಪೂಲ್ ಮಾದರಿಯ ವಿನ್ಯಾಸ ಎಲ್ಲವೂ ಪಬ್‌ನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. 

ಕೆಲವೊಂದು ಕಲಾಕೃತಿಗಳು ಮಾತ್ರ ಮೈ ಝುಮ್ ಎನ್ನಿಸುವುದಂತೂ ನಿಜ. ನಿಜಕ್ಕೂ ಭೂಮಿಯ ಮೇಲಿನ ಸರ್ಗದಂತೆ ನಿರ್ಮಾಣ ಮಾಡಲಾಗಿದ್ದು, ಗ್ರಾಹಕರಿಗೆ ನಾಳೆ ಜೂ.26ರಿಂದ ಸೇವೆ ಆರಂಭವಾಗಲಿದೆ.

66

ನಟಿ ಅಮೂಲ್ಯ ಅವರು ಉದ್ಯಮಿ ಹಾಗೂ ರಾಜಕಾರಣದ ಕುಟುಂಬವನ್ನು ಮದುವೆಯಾಗಿದ್ದು, ರಾಜಕಾರಣಕ್ಕೆ ಬರುತ್ತಾರೆ ಎಂಬುದು ಬಹುತೇಕರ ನಿರೀಕ್ಷೆಯಾಗಿತ್ತು. ಆದರೆ, ಅದಕ್ಕೂ ಮೊದಲು ಉದ್ಯಮವನ್ನು ಆರಂಭಿಸಿ ಅದಕ್ಕೆ ಅವರೇ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.

ಸ್ವತಃ ನಟಿ ಅಮೂಲಗ್ಯ ಅವರೇ ಪಬ್‌ನ ಮೂಲೆ, ಮೂಲೆಗಳನ್ನು ಗ್ರಾಹಕರಿಗೆ ಪರಿಚಯಿಸುವಂತೆ ಪಬ್‌ ಅನ್ನು ಎಕ್ಸ್‌ಪ್ಲೋರ್ ಮಾಡಿದ್ದಾರೆ. ಇನ್ನು ಪಬ್‌ನ ಒಟ್ಟಾರೆ ವಿಡಿಯೋ ನೋಡುವ ನೈಟ್‌ಲೈಫ್ ಪ್ರಿಯರಿಗಂತೂ ಇದು ಹೇಳಿ ಮಾಡಿಸಿದ ಜಾಗವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories