ನಟಿ ಸನ್ನಿ ಲಿಯೋನ್ ಓರ್ವ ಯಶಸ್ವಿ ಉದ್ಯಮಿಯೂ ಹೌದು. ವರದಿಗಳ ಪ್ರಕಾರ 98 ಕೋಟಿ ರೂ. ಸಂಪತ್ತಿನ ಒಡತಿಯಾಗಿರುವ ಇವರು, ಕಾಸ್ಮೆಟಿಕ್ ಬ್ರ್ಯಾಂಡ್, ಪ್ರೊಡಕ್ಷನ್ ಹೌಸ್, ಕ್ರೀಡಾ ತಂಡಗಳಲ್ಲಿ ಹೂಡಿಕೆ ಸೇರಿದಂತೆ ಹತ್ತು ಹಲವು ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ.
ಸನ್ನಿ ಲಿಯೋನಿ ಭಾರತದ ಜನಪ್ರಿಯ ನಟಿಯಾಗಿದ್ದಾರೆ. 2012ರಲ್ಲಿ ಬಿಡುಗಡೆಯಾದ ಜಿಸ್ಮ್2 ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿರುವ ಸನ್ನಿ ಲಿಯೋನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 13ನೇ ಮೇ 2026ರಂದು ಸನ್ನಿ ಲಿಯೋನ್ ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
28
Business Women Sunny Leone
ನಟನೆ ಜೊತೆಯಲ್ಲಿ ಸನ್ನಿ ಲಿಯೋನ್ ಓರ್ವ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಲೈಲಾ ಸನ್ನಿ ಒಟ್ಟು 10 ವ್ಯವಹಾರಗಳನ್ನು ನಿರ್ವಹಣೆ ಮಾಡುತ್ತಾರೆ. ಇಕಾನಾಮಿಕ್ ಟೈಮ್ಸ್ ವರದಿ ಪ್ರಕಾರ, ಸನ್ನಿ ಲಿಯೋನ್ 98 ಕೋಟಿ ಸಂಪತ್ತಿನ ಒಡತಿಯಾಗಿದ್ದಾರೆ. ಸನ್ನಿ ಲಿಯೋನ್ ಅವರ ಆದಾಯದ ಮೂಲಗಳು ಯಾವವು ಎಂಬುದನ್ನು ನೋಡೋಣ ಬನ್ನಿ.
38
ವುಮನ್ ಪೋರ್ಟಲ್‌ನಲ್ಲಿ ಹೂಡಿಕೆ, ಚೆನ್ನೈ ಸ್ವಾಗರ್ಸ್ ಒಡತಿ
ಸನ್ನಿ ಲಿಯೋನ್ ರಿಯಾಲಿಟಿ ಶೋನ ನಿರೂಪಕಿಯಾಗಿದ್ದು, ಸೆಲಿಬ್ರಿಟಿ ಬಾಕ್ಸ್ ಕ್ರಿಕೆಟ್ ಲೀಗ್ ಟೀಮ್ (ಚೆನ್ನೈ ಸ್ವಾಗರ್ಸ್) ಒಡತಿಯಾಗಿದ್ದಾರೆ. ವುಮನ್ ಲೈಫ್‌ಸ್ಟೈಲ್ Hauterfly ಪೋರ್ಟಲ್‌ನಲ್ಲಿಯೂ ಸನ್ನಿ ಹೂಡಿಕೆ ಮಾಡಿದ್ದಾರೆ. ಈ ಎರಡರಿಂದಲೂ ಸನ್ನಿ ಅವರಿಗೆ ಆದಾಯ ಬರುತ್ತದೆ.
ಸನ್ನಿ ಲಿಯೋ ಫ್ರೆಗರೆನ್ಸ್ ಬ್ರ್ಯಾಂಡ್‌ಗಳಾದ ಲಸ್ಟ್ ಮತ್ತು ಎಫ್ಟೋಗೂ ಎಂಟ್ರಿ ಕೊಟ್ಟಿದ್ದಾರೆ. ಈ ಬ್ರ್ಯಾಂಡ್‌ಗಳು ಡಿಯೊಡೊರೆಂಟ್, ಬಾಡಿ ಮಿಸ್ಸ್ ಮತ್ತು ಪರ್ಪ್ಯೂಮ್ ಉತ್ಪಾದನೆ ಮಾಡುತ್ತವೆ. 2018ರಲ್ಲಿ 'ತೀನ್ ಪತ್ತಿ' ಹೆಸರಿನ ಆನ್‌ಲೈನ್ ಗೇಮ್ ಲಾಂಚ್ ಮಾಡಿದ್ದಾರೆ. ಇದು ಬಾಲಿವುಡ್ ಕಲ್ಪನೆಯಲ್ಲಿ ಆಟಕ್ಕೆ ಟೇಬಲ್ ವ್ಯವಸ್ಥೆ ಮಾಡಿಕೊಡುತ್ತದೆ.
58
ನಿರ್ಮಾಣ ಸಂಸ್ಥೆಯ ಓನರ್
ಪತಿ ಡೇನಿಯಲ್ ವೆಬರ್ ಜೊತೆಗೂಡಿ ಸನ್‌ಸಿಟಿ ಮೀಡಿಯಾ ಅಂಡ್ ಎಂಟರ್‌ಟೈನ್ಮೆಂಟ್ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದಾರೆ. 2015ರಲ್ಲಿ ನಿರ್ಮಾಪಕಿಯಾದ ಸನ್ನಿ ಲಿಯೋನ್, ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಜೊತೆ ಈ ಬ್ಯುಸಿನೆಸ್ ಆರಂಭಿಸಿದರು.
68
ಕಾಸ್ಮೆಟಿಕ್ ಬ್ರ್ಯಾಂಡ್, ಇನ್ನರ್‌ವಿಯರ್ ಲಾಂಚ್
ನಟಿ ಸನ್ನಿ ಲಿಯೋನ್ ಹಲವು ಕಾಸ್ಮೆಟಿಕ್ ಉತ್ಪನ್ನಗಳ ರಾಯಭಾರಿಯಾಗಿದ್ದಾರೆ. ಇದರ ಜೊತೆಯುಲ್ಲಿ ತಮ್ಮದೇ ಸ್ವಂತ 'ಸ್ಟಾರ್ ಸ್ಟ್ರಕ್' ಹೆಸರಿನ ಕಾಸ್ಮೆಟಿಕ್ ಹೊಂದಿದ್ದು, ಇದರಿಂದ ಕೋಟಿ ಕೋಟಿ ಸಂಪದಾನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಪತಿ ವೆಬರ್ ಜೊತೆ 'ಇನ್‌ಫೇಮಸ್' ಹೆಸರಿನ ಇನ್ನರ್ ವಿಯರ್ ಲಾಂಚ್ ಮಾಡಿದ್ದಾರೆ.
78
ಸಾಕರ್ ತಂಡದ ಸಹ-ಯಜಮಾನಿ, NFTನಿಂದ ಆದಾಯ
ಸನ್ನಿ ಲಿಯೋನ್ ಯುಕೆ ಮೂಲದ ಸಾಕರ್ ತಂಡವಾದ ಲೀಸೆಸ್ಟರ್ ಗ್ಯಾಲಕ್ಟಿಕೋಸ್‌ನ ಸಹ-ಯಜಮಾನಿ ಆಗಿದ್ದಾರೆ. 2019 ರಲ್ಲಿ ಸಾಕರ್ ತಂಡದಲ್ಲಿ ಪಾಲುದಾರಿಕೆ ಪಡೆದುಕೊಂಡಿದ್ದಾರೆ. ಸನ್ನಿ ಲಿಯೋನ್ 2021 ರಲ್ಲಿ ಡಿಜಿಟಲ್ ಆಸ್ತಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಮತ್ತು ತನ್ನದೇ ಆದ NFT ಗಳನ್ನು ಪ್ರಾರಂಭಿಸಿದ್ದಾರೆ. ಇ-ಪ್ಲಾಟ್‌ಫಾರ್ಮ್ "ಐ ಡ್ರೀಮ್ ಆಫ್ ಸನ್ನಿ" ಸಹ ಆರಂಭಿಸಿದ್ದಾರೆ.
ಇದೆಲ್ಲದರ ಜೊತೆಯಲ್ಲಿ ಸೋಶಿಯಲ್ ಮೀಡಿಯಾದ ಎಲ್ಲಾ ಪ್ಲಾಟ್‌ಫಾರಂಗಳಲ್ಲಿಯೂ ಸನ್ನಿ ಲಿಯೋನ್ ಆಕ್ಟಿವ್ ಆಗಿದ್ದಾರೆ. ಪ್ರಮೋಷನ್, ಜಾಹೀರಾತಿನ ವಿಜ್ಞಾಪನೆ, ಬ್ರ್ಯಾಂಡ್ ಲಾಂಚಿಂಗ್ ಸೇರಿದಂತೆ ಹಲವು ಮಾರ್ಗಗಳಿಂದ ಸನ್ನಿ ಲಿಯೋನ್ ಆದಾಯ ಸಂಪಾದಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.