Dileep Raj Death: ಹೊಸ ಮನೆಗೆ ಕಾಲಿಟ್ಟಿದ್ರು..ಬೇಡ ಎಂದ್ರೂ ದಿಲೀಪ್‌ ರಾಜ್‌ರನ್ನೇ ಮದುವೆಯಾಗಿದ್ದ ವಿದ್ಯಾ

Published : May 13, 2026, 10:20 AM IST

Actor Dileep Raj Death: ಹಿಟ್ಲರ್‌ ಕಲ್ಯಾಣ ಧಾರಾವಾಹಿ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್‌ ರಾಜ್‌ ಅವರು ಹೃದಯಾಘಾತದಿಂದ ಇಂದು ( ಮೇ 13) 48ನೇ ವಯಸ್ಸಿಗೆ ನಿಧನರಾಗಿದ್ದಾರೆ. ಇವರ ಸಾವು ನೋಡಿ ಚಿತ್ರರಂಗ, ಜನತೆ ಎಲ್ಲರೂ ಶಾಕ್‌ ಆಗಿದ್ದಾರೆ. ಇವರ ಲವ್‌ಸ್ಟೋರಿ, ಮದುವೆ ಬಗ್ಗೆ ಮಾಹಿತಿ ಇಲ್ಲಿದೆ.  

PREV
16
ಎಲ್ಲಿಯವರು?

ದಿಲೀಪ್‌ ರಾಜ್‌ ಅವರು 1978ರಲ್ಲಿ ಜನಿಸಿದ್ದಾರೆ. ಹಾಸನದ ಅರಸಿಕೆರೆಯವರು. ಇಲ್ಲಿಯವರೆಗೆ ಅವರು ಒಟ್ಟಾರೆಯಾಗಿ 14 ಧಾರಾವಾಹಿಗಳಲ್ಲಿ ನಟಿಸಿದ್ದಾರೆ, ಕೆಲ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.

26
ಕಾಲೇಜಿನಲ್ಲಿ ಆಕ್ಟಿವ್

ಕಾಲೇಜಿನಲ್ಲಿದ್ದಾಗ ಕ್ರಿಕೆಟ್‌ ಆಡುತ್ತಿದ್ದರು, ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು. ಒಟ್ಟಾರೆಯಾಗಿ ಅವರು ಎಲ್ಲ ರಂಗದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು.‌ ಸಿಕ್ಕಾಪಟ್ಟೆ ತರಲೆಯಾಗಿದ್ದ ದಿಲೀಪ್‌ ಅವರು ಲವ್ ಮ್ಯಾರೇಜ್‌ ಆಗಿದ್ದರು.

36
ಮದುವೆ ಆಗೋ ಪ್ಲ್ಯಾನ್‌ ಇರಲಿಲ್ಲ

ಮದುವೆ ಆಗೋ ಪ್ಲ್ಯಾನ್‌ ಆಗಿರಲಿಲ್ಲ, 35 ವರ್ಷದ ಬಳಿಕ ಮಗುವನ್ನು ದತ್ತು ತಗೊಂಡು ಇರಬೇಕು ಎಂದುಕೊಂಡಿದ್ದರು. ಕಾಲೇಜಿನಲ್ಲಿದ್ದಾಗ ವಿದ್ಯಾ ಪರಿಚಯ ಆಗಿತ್ತು. ವಿದ್ಯಾ ಅವರಿಗೆ ದಿಲೀಪ್‌ ರಾಜ್‌ ಅಂದ್ರೆ ತುಂಬ ಇಷ್ಟ, ಅವರ ಅಭಿಮಾನಿಯಾಗಿದ್ದರು.

46
ಲವ್‌ ಶುರು ಆಯ್ತು!

ವಿದ್ಯಾ ನನ್ನ ಅಭಿಮಾನಿ ಎನ್ನೋದು ಗೊತ್ತಾಯ್ತು. ವಿದ್ಯಾಳನ್ನು ಭೇಟಿ ಮಾಡಿ, ನಿನಗೆ ನಾನು ಇಷ್ಟ ಅಂತೆ, ಅಭಿಮಾನಿಯಂತೆ, ಯಾಕೆ ಮಾತನಾಡಿಸಿಲ್ಲ, ಇನ್ಮುಂದೆ ಡೇಲಿ ನನ್ನನ್ನು ಮಾತನಾಡಿಸಿಕೊಂಡು ಹೋಗಬೇಕು ಎಂದು ಹೇಳಿದೆ. ಆಮೇಲೆ ಡೇಲಿ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದಳು. 

ಒಂದಿನ ನಾನು ತರಲೆ ಮಾಡಿ ಕ್ಲಾಸ್‌ ಹೊರಗಡೆ ಬಂದೆ, ಅವಳು ಕಾಲೇಜಿಗೆ ಲೇಟ್‌ ಆಗಿ ಬಂದಳು. ಆಮೇಲೆ ಇನ್ನೊಂದಿನ ಫೋನ್‌ನಲ್ಲಿ ಮಾತನಾಡಿದೆ, ಆಗ ನನಗೆ ಏನಾದರೂ ನನ್ನ ಜೊತೆ ಇರ್ತೀಯಾ ಅಂತ ಕೇಳಿದೆ. ಅವಳು ಓಕೆ ಅಂದಳು. 

ನೀನೇ ನನ್ನ ಗರ್ಲ್‌ಫ್ರೆಂಡ್‌, ನಾನು ನಿನ್ನ ಬಾಯ್‌ಫ್ರೆಂಡ್‌ ಎಂದು ಹೇಳಿದೆ ಅಷ್ಟೇ. ನೀನು ಅವನ ಮಾತನ್ನು ನಂಬಿಕೊಂಡಿರ್ತೀಯಾ ಎಂದು ವಿದ್ಯಾಗೆ ಕೆಲವರು ಹೇಳಿದ್ದರು, ಅವಳು ಯಾರ ಮಾತನ್ನು ಕೇಳಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಜೊತೆಗಿದ್ದೇವೆ ಎಂದು ದಿಲೀಪ್‌ ರಾಜ್‌ ಅವರು ಹೇಳಿದ್ದರು.

56
ಮನೆ ಗೃಹ ಪ್ರವೇಶ

2022ರಲ್ಲಿ ಈ ಜೋಡಿ ಹೊಸ ಮನೆಗೆ ಕಾಲಿಟ್ಟಿತ್ತು, ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿಕೊಂಡಿತ್ತು. ಮನೆಗೆ ರಾಜ್‌ಶ್ರೀ ಎಂದು ಹೆಸರು ಇಟ್ಟಿತ್ತು.

66
ಇಬ್ಬರು ಹೆಣ್ಣು ಮಕ್ಕಳು

ದಿಲೀಪ್‌ ರಾಜ್‌ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಮಗಳ ಜೊತೆಗೆ ದಿಲೀಪ್‌ ಡ್ಯಾನ್ಸ್‌ ಮಾಡಿರುವ ವಿಡಿಯೋವೊಂದು ನಾಲ್ಕು ವರ್ಷದ ಹಿಂದೆ ವೈರಲ್‌ ಆಗಿತ್ತು. ಹೆಣ್ಣು ಮಕ್ಕಳಿಬ್ಬರು ಶಿಕ್ಷಣದ ಕಡೆಗೆ ಗಮನ ಕೊಡುತ್ತಿದ್ದು, ಬಣ್ಣದ ಲೋಕದಿಂದ ದೂರ ಇದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories