Published : May 13, 2026, 10:40 AM ISTUpdated : May 13, 2026, 10:44 AM IST
Actor Dileep Raj: ಹಿಟ್ಲರ್ ಕಲ್ಯಾಣ ಧಾರಾವಾಹಿ ನಟ ದಿಲೀಪ್ ರಾಜ್ ಅವರು ಇಂದು ನೆನಪು. ಸೀರಿಯಲ್, ಸಿನಿಮಾಗಳಲ್ಲಿ ನಟಿಸಿರುವ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರ ಬಗ್ಗೆ ದಿಲೀಪ್ ಪತ್ನಿ ಶ್ರೀವಿದ್ಯಾ ತಂದೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ.
ದಿಲೀಪ್ ರಾಜ್ ಚಿಕ್ಕವನು, ನನ್ನ ಮಗಳಿಗೂ ಚಿಕ್ಕ ವಯಸ್ಸು, ಇಬ್ಬರು ಹೆಣ್ಣು ಮಕ್ಕಳು. ತುಂಬ ದುಃಖ ಆಗ್ತಿದೆ, ಮುಂದೆ ಏನು ಮಾಡಬೇಕು ಅಂತ ಗೊತ್ತಾಗ್ತಿಲ್ಲ. ಅವನನ್ನು ಕಂಡರೆ ಇವಳಿಗೆ ತುಂಬ ಇಷ್ಟ, ಇವಳನ್ನು ಕಂಡರೆ ಅವನಿಗೆ ತುಂಬ ಇಷ್ಟ. ದುಡ್ಡು, ಆಸ್ತಿ ಏನೇ ಇದ್ದರೂ ಕೂಡ ಒಬ್ಬರಿಲ್ಲದೆ ಬದುಕೋದು ಸುಲಭ ಇಲ್ಲ ಎಂದು ಮಾವ ಹೇಳಿದ್ದಾರೆ.
25
ಮೊದಲಿಗಿಂತ ಈಗ ಚೆನ್ನಾಗಿ ಕಾಣಿಸ್ತಾನೆ
ದಿಲೀಪ್ ರಾಜ್ ಹಗಲು ರಾತ್ರಿ ದುಡಿಯುತ್ತಿದ್ದನು, ಏನಾದರೂ ಕೆಲಸ ಹೇಳಿದರೆ ಅದನ್ನು ಅವನಿಗೆ ಮಾಡಬೇಕಿತ್ತು. ಯಾವಾಗಲೂ ಡಯೆಟ್ ಮಾಡುತ್ತಿದ್ದನು. ಈಗ ಅವನ ದೇಹ ನೋಡಿದರೆ ನಿದ್ದೆ ಮಾಡೋ ಥರ ಕಾಣ್ತಾನೆ, ಮೊದಲಿಗಿಂತ ಈಗ ಚೆನ್ನಾಗಿ ಕಾಣಿಸ್ತಾನೆ ಎಂದು ಮಾವ ಹೇಳಿದ್ದಾರೆ.
35
ಮಗಳು ಕಾಲೇಜಿಗೆ ಸೇರಿ 15 ದಿನ
ನಟ ದಿಲೀಪ್ ರಾಜ್ ಮೊದಲ ಮಗಳು ಬಿಕಾಂ ಮಾಡಿ, ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು, ಎರಡನೇ ಮಗಳು ಕಾಲೇಜಿಗೆ ಸೇರಿಕೊಂಡು ಹದಿನೈದು ದಿನ ಆಗಿತ್ತು ಎಂದು ಮಾವ ಹೇಳಿದ್ದಾರೆ.
ದಿಲೀಪ್ ರಾಜ್ ಮಾವ, ವಿದ್ಯಾ ತಂದೆ ಅವರು, “ದಿಲೀಪ್ ತುಂಬ ಕಷ್ಟಪಟ್ಟಿದ್ದಾನೆ, ಪತ್ನಿಗೆ ಕೂಡ ಚಿಕ್ಕ ವಯಸ್ಸು, ಇಬ್ಬರು ಹೆಣ್ಣು ಮಕ್ಕಳು. ಹೀಗೆ ಆಗಿರೋದು ನೋಡಿ ಏನು ಹೇಳಬೇಕು ಎಂದು ಗೊತ್ತಾಗ್ತಿಲ್ಲ. ಇವತ್ತು ಫುಲ್ ಬಾಡಿ ಚೆಕ್‌ಅಪ್ ಮಾಡಿಸಬೇಕು ಎಂದು ಮಗಳು ಹೇಳುತ್ತಿದ್ದಳು. ಅವನನ್ನು ಬಿಟ್ಟು ಇವಳು ಇರುತ್ತಿರಲಿಲ್ಲ, ಇವಳನ್ನು ಬಿಟ್ಟು ಅವನು ಇರುತ್ತಿರಲಿಲ್ಲ. ಮಗಳು, ಮೊಮ್ಮಕ್ಕಳನ್ನು ನೊಡೋಕೆ ಆಗುತ್ತಿಲ್ಲ” ಎಂದು ಹೇಳಿದ್ದರು.
55
ಮಗಳು ಸಪೋರ್ಟ್ ಕೊಟ್ಟಿದ್ದಾಳೆ
ನನ್ನ ಮಗಳು ಬಿಕಾಂ ಮಾಡಿಕೊಂಡು, ಈಗ ಪ್ರೊಡಕ್ಷನ್ ಹೌಸ್ ನಡೆಸುತ್ತಿದ್ದಳು. ಮಗಳು ಅವನಿಗೆ ತುಂಬ ಸಪೋರ್ಟ್ ಕೊಟ್ಟಿದ್ದಾಳೆ. ಇಬ್ಬರೂ ಕಷ್ಟಪಟ್ಟು ಒಳ್ಳೆಯ ಹೆಸರು ತಗೊಂಡಿದ್ದರು. ಈಗ ಹೀಗೆ ಆಗಿರೋದು ಬೇಸರ ಆಗ್ತಿದೆ ಎಂದು ಮಾವ ಹೇಳಿದ್ದಾರೆ.
ನಟ ರಿಷಬ್ ಶೆಟ್ಟಿ ಕೂಡ ದಿಲೀಪ್ ರಾಜ್ ಬಗ್ಗೆ ಪೋಸ್ಟ್ ಮಾಡಿದ್ದಾರೆ. "ಒಳ್ಳೆಯ ನಟ, ನಿರ್ದೇಶಕ, ನಿರ್ಮಾಪಕ ಎಲ್ಲದಕ್ಕೂ ಮಿಗಿಲಾಗಿ ಒಬ್ಬ ಒಳ್ಳೆಯ ಮನುಷ್ಯ. ಭೇಟಿಯಾದ ಸಂದರ್ಭಗಳು ಬೆರಳೆಣಿಕೆಯಷ್ಟಾದರೂ ಮನಸ್ಸಿನಲ್ಲಿ ಕೂತ ವ್ಯಕ್ತಿತ್ವದ ಭಾವ ಮಾಸಿಹೋಗಲಾರದು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದುನಟ ರಿಷಬ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.