Bigg Boss Kannada Season 12: ವೀಕೆಂಡ್ ಎಪಿಸೋಡ್‌ನ ಸೂಪರ್ ಸಂಡೇ ವಿಥ್ ಸುದೀಪ ಶೋನಲ್ಲಿ ಏನು ಹೇಳಬೇಕೋ ಅದನ್ನು ಮುಖಕ್ಕೆ ಹೊಡೆದಂತೆ ಹೇಳಬೇಕು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಆಗ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಅವರು ಕೆರಳಿದ್ದಾರೆ. ಹಾಗಾದರೆ ಏನು ಕಾರಣ ಕೊಟ್ಟರು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಯಾವಾಗ ಯಾರ ಜೊತೆ ಜಗಳ ಶುರುವಾಗುತ್ತದೆ ಎಂದು ಹೇಳೋಕೆ ಆಗೋದಿಲ್ಲ. ಅಂತೆಯೇ ಕಳೆದ ವಾರ ಚೆನ್ನಾಗಿ ಮಾತನಾಡಿಕೊಂಡಿದ್ದ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಈಗ ಜಗಳ ಆಡಿಕೊಂಡಿದ್ದಾರೆ.
25
ಧ್ರುವಂತ್ ಮೇಲೆ ರಕ್ಷಿತಾಗೆ ಯಾಕೆ ಕೋಪ?
ಗಿಲ್ಲಿ ನಟ ಅವರಿಗೆ ಇತ್ತೀಚೆಗೆ ಮಾತನಾಡುವಾಗ ನೀನು, ನಿನ್ನ ವಂಶದ ಕುಡಿ ಹಲ್ಲುಜಲ್ಲ, ಸ್ನಾನ ಮಾಡಲ್ಲ, ಸರಿಯಾಗಿ ಬಟ್ಟೆ ಹಾಕಿಕೊಳ್ಳಲ್ಲ, ಅಸಹ್ಯ ಎಂದು ಧ್ರುವಂತ್ ಹೇಳಿದ್ದರು. ಇದರ ವಿರುದ್ಧ ರಕ್ಷಿತಾ ತಿರುಗಿ ಬಿದ್ದಿದ್ದಾರೆ.
35
ರಾಶಿಕಾ ಶೆಟ್ಟಿ-ಅಶ್ವಿನಿ ಗೌಡ ಜಗಳ
ರಾಶಿಕಾ ಶೆಟ್ಟಿ ಅವರು, “ಅಶಿನಿ ಗೌಡ ಬರೀ ಮ್ಯಾನ್ಯುಪಲೇಟ್ ಮಾಡಿ, ಮುಂದೆ ಇದ್ದವರನ್ನು ಬೇರೆ ಥರ ತೋರಿಸ್ತಾರೆ” ಎಂದು ಹೇಳಿದ್ದಾರೆ.
“ಮಿಸ್ ಯುನಿವರ್ಸ್ ಎಂದುಕೊಂಡಿರೋ ರಾಶಿಕಾ ಶೆಟ್ಟಿ ಒಂದು ಟ್ರ್ಯಾಕ್, ಮತ್ಯೊಂದು ಟ್ರ್ಯಾಕ್ ನಾನು ಶುರು ಮಾಡಿಕೊಂಡಿರಲಿಲ್ಲ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಧ್ರುವಂತ್ ಅವರೇ, ಹಾ, ಹು ಅಂತ ಮಾಡ್ತೀರಿ ಅಲ್ವಾ? ನಮ್ಮ ಮುಂದೆ ಇದು ಆಗಲ್ವಾ? ಒಂದು ವ್ಯಕ್ತಿಗೆ ಅಸಹ್ಯ ಅಂತ ಹೇಳ್ತೀರಿ, ಯಾರು ನಿಮಗೆ ಅಧಿಕಾರ ಕೊಟ್ಟಿದ್ದು ಎಂದು ರಕ್ಷಿತಾ ಅವರು ಪಂಚಿಂಗ್ ಬ್ಯಾಗ್ ಕಿತ್ತೋಗುವ ಹಾಗೆ ಹೊಡೆದಿದ್ದಾರೆ. ಆ ಬ್ಯಾಗ್ ಬಿದ್ದರೂ ಕೂಡ ರಕ್ಷಿತಾ ಶೆಟ್ಟಿ ಕೋಪ ತಣ್ಣಗಾಗಿಲ್ಲ.
55
ಸುದೀಪ್ ಸೇರಿ ಎಲ್ಲರಿಗೂ ಆಶ್ಚರ್ಯ
ಬ್ಯಾಗ್ ಕಳಚಿಬಿದ್ದರೂ ಕೂಡ ರಕ್ಷಿತಾ ಶೆಟ್ಟಿ ಸುಮ್ಮನಾಗಲಿಲ್ಲ, ಕಂಪ್ಲೀಟ್ ಆಗಿ ಅವರು ಸಿಟ್ಟನ್ನು ಹೊರಹಾಕಿದ್ದಾರೆ. ಇದನ್ನು ನೋಡಿ ಕಿಚ್ಚ ಸುದೀಪ್ ಅವರೇ ಆಶ್ಚರ್ಯಪಟ್ಟಿದ್ದಾರೆ. ಅಂದಹಾಗೆ ಧ್ರುವಂತ್ ಅವರು ಇದನ್ನೆಲ್ಲ ನೋಡಿ ನಕ್ಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.