ನನ್ನ ಬಳಿ ಎಲ್ಲಾ ದಾಖಲೆ ಇದೆ , ಅಕ್ರಮ ಒತ್ತುವರಿ ಆರೋಪಕ್ಕೆ ನಿರ್ಮಾಪಕಿ ಪುಷ್ಪಾ ತಿರುಗೇಟು

Published : Jan 04, 2026, 03:11 PM IST

ನನ್ನ ಬಳಿ ಎಲ್ಲಾ ದಾಖಲೆ ಇದೆ , ಅಕ್ರಮ ಒತ್ತುವರಿ ಪ್ರಕರಣ ಕುರಿತು ಯಶ್ ತಾಯಿ ಪುಷ್ಪಾ ತಿರುಗೇಟು ನೀಡಿದ್ದಾರೆ. ಪುಷ್ಪಾ ಹಾಸನದಲ್ಲಿ ಅಕ್ರಮ ಜಾಗ ಒತ್ತುವರಿ ಮಾಡಿ ಕೌಂಪೌಂಡ್ ಕಟ್ಟಿದ್ದಾರೆ ಎಂದು ಆರೋಪಿಸಿ ಕೌಂಪೌಂಡ್ ಧ್ವಂಸಗೊಳಿಸಿದ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ.

PREV
17
ವಿವಾದದಲ್ಲಿ ಸಿಲುಕಿದ ಪಷ್ಪಾ

ಕೊತ್ತಲವಾಡಿ ಸಿನಿಮಾ ನಿರ್ಮಾಪಕಿ, ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಹಾಸನದ ವಿದ್ಯಾನಗರದಲ್ಲಿರುವ ಮನೆಯ ಪಕ್ಕದ ನಿವೇಷನ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕೌಂಪೌಂಡ್ ಕಟ್ಟಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಈ ಕೌಂಪೌಂಡ್ ಜಿಸೆಬಿ ಮೂಲಕ ತೆರವು ಮಾಡಿದ ಪ್ರಕರಣ ಇದೀಗ ಕೋಲಾಹಸ ಸೃಷ್ಟಿಸಿದೆ. ಆರೋಪ, ಅಕ್ರಮ ಒತ್ತುವರಿ ಕುರಿತು ಪುಷ್ಪಾ ಪ್ರತಿಕ್ರಿಯಿಸಿದ್ದಾರೆ.

27
ಅವನು ಕೋರ್ಟ್‌ಗೆ ಹೋಗಿಲ್ಲ, ಕೋರ್ಟ್‌ನಿಂದ ಆರ್ಡರ್ ಇಲ್ಲ

ಕೌಂಪೌಂಡ್ ಧ್ವಂಸಗೊಳಿಸಿದ ದೇವರಾಜು ಕೋರ್ಟ್‌ಗೆ ಹೋಗಿಲ್ಲ, ಕೋರ್ಟ್ ಆರ್ಡರ್ ನಮಗೆ ಸಿಕ್ಕಿಲ್ಲ. ಸುಮ್ಮನೆ ಇಲ್ಲಿ ಬಂದು ಗಲಾಟೆ ಮಾಡುತ್ತಿದ್ದಾರೆ. ನನ್ನಲ್ಲಿ ಎಲ್ಲಾ ದಾಖಲೆ ಇದೆ. ನಾನು ದಾಖಲೆ ಸಮೇತ ತೋರಿಸುತ್ತೇನೆ ಎಂದು ಪುಷ್ಪಾ ಅರುಣ್ ಕುಮಾರ್ ಹೇಳಿದ್ದಾರೆ. ದೇವರಾಜು ಅವರು ಕೋರ್ಟ್ ಆರ್ಡರ್ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

37
ಸೈಟ್ ಮಾಡಿ ಮಾರಾಟ ಮಾಡಿದ್ದಾರೆ

7 ವರ್ಷದ ಹಿಂದೆ ಈ ಜಾಗ ಖರೀದಿಸಿದ್ದೇನೆ. ರೆವೆನ್ಯೂ ಜಾಗವನ್ನು ಸೈಟ್ ಮಾಡಿ ಮಾರಾಟ ಮಾಡಿದ್ದಾರೆ. ದೇವರಾಜು ನೀಡುವ ಎಲ್ಲಾ ದಾಖಲೆ ನಕಲಿ. ದೇವರಾಜು ಅವರು ಈಗ ದುಡ್ಡಿಗಾಗಿ ಈ ನಾಟಕ ಮಾಡುತ್ತಿದ್ದಾರೆ. ನಾಳೆ ಹಾಸನಕ್ಕೆ ತೆರಳುತ್ತೇನೆ. ದಾಖಲೆ ಸಮೇತ ಬಹಿರಂಗಪಡಿಸುತ್ತೇನೆ. 7 ವರ್ಷದ ಹಿಂದೆ ಖರೀದಿಯಾಗಿದೆ. ಇವಾಗ ಯಾಕೆ ಈ ತಕರಾರರು ಎಂದು ಪುಷ್ಪಾ ಪ್ರಶ್ನಿಸಿದ್ದಾರೆ.

47
ಯಶ್ ಹೆಸರು ಹಾಳು ಮಾಡೋಕೆ ಈ ಕೆಲಸ

ನನ್ನ ಮಗ ಯಶ್ ಹೆಸರು ಹಾಳು ಮಾಡೋಕೆ ದೇವರಾಜು ಈ ಕೆಲಸ ಮಾಡುತ್ತಿದ್ದಾನೆ. ಹಾಸನದಲ್ಲಿ ತನ್ನ ಪ್ರಭಾವ, ಪ್ರಾಬಲ್ಯ ತೋರಿಸಲು ದೇವರಾಜು ಈ ರೀತಿ ಮಾಡುತ್ತಿದ್ದಾನೆ. ನಾಳೆ ಹಾಸನಕ್ಕೆ ತೆರಳಿ ಕೆಲ ಮಾಹಿತಿಗಳನ್ನು ಸ್ಪಷ್ಟಪಡಿಸಬೇಕಿದೆ. ದೇವರಾಜುವಿನಿಂದ ಹಾಸನದ ಹೆಸರು ಕೆಡುತ್ತಿದೆ ಎಂದಿದ್ದಾರೆ.

57
ಪಿಡಿಒ ವಿರುದ್ದ ಪುಷ್ಪಾ ಅರುಣ್ ಕುಮಾರ್ ಗರಂ

ದೇವರಾಜು ಮಾತ್ರವಲ್ಲ, ಪಿಡಿಒ ಅಧಿಕಾರಿ ವಿರುದ್ಧವೂ ಪುಷ್ಪಾ ಅರುಣ್ ಕುಮಾರ್ ಗರಂ ಆಗಿದ್ದಾರೆ. ಪಿಡಿಒ ಕುಮ್ಮಕ್ಕಿನಿಂದ ಈ ರೀತಿ ಆಗುತ್ತಿದೆ. ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದ್ದಾರೆ. ನಾವು ದುಡ್ಡು ಕೊಟ್ಟು ಖರೀದಿಸಿದ ಜಾಗ ಅದು. ಇದು ಹೇಗೆ ಬೇರೆಯವರ ಆಸ್ತಿ ಆಗಲಿದೆ ಎಂದು ಪುಷ್ಪಾ ಹೇಳಿದ್ದಾರೆ.

67
ಏನಿದು ಗಲಾಟೆ

ಪುಷ್ಪಾ ಅರುಣ್‌ಕುಮಾರ್ ಮನೆಯ ಪಕ್ಕದಲ್ಲಿದ್ದ 5 ಗಂಟೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕೌಂಪೌಂಡ್ ಹಾಕಿದ್ದಾರೆ ಎಂದು ಆರೋಪಿಸಿ ಭೂಮಾಲೀಕ ದೇವರಾಜು ಈ ಕೌಂಪೌಂಡ್ ಕೆಡವಿ ಹಾಕಿದ್ದಾರೆ. ಈ ಜಾಗದ ಅಸಲಿ ಮಾಲೀಕರು ಲಕ್ಷ್ಮಮ್ಮ, ಆದರೆ ಜಿಬಿಎ ಹೋಲ್ಡರ್ ಆಗಿ ದೇವರಾಜುಗೆ ಬರೆದುಕೊಟ್ಟಿದ್ದಾರೆ. ಈ ಜಾಗದಲ್ಲಿ ಕೌಂಪೌಂಡ್ ಕಟ್ಟಿ ತಮ್ಮದಾಗಿಸುವ ಪ್ರಯತ್ನ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಏನಿದು ಗಲಾಟೆ

77
ಕೌಂಪೌಂಡ್ ಒಡೆಯುತ್ತಿದ್ದಂತೆ ವಿವಾದ ಜೋರು

ಕಳೆದ ಹಲವು ವರ್ಷಗಳಿಂದ ಪುಷ್ಪಾ ಅರುಣ್ ಕುಮಾರ್ ಹಾಗೂ ದೇವರಾಜು ನಡುವೆ ಇದೇ ಜಾಗದ ವಿಷಯದಲ್ಲಿ ತಕರಾರು ನಡೆಯುತ್ತಿದೆ. ಇದೀಗ ದೇವರಾಜು ಕೋರ್ಟ್ ಆರ್ಡರ್ ಪಡೆದು ಪುಷ್ಪಾ ಅರುಣ್ ಕುಮಾರ್ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಕೌಂಪೌಂಡ್ ಧ್ವಂಸಗೊಳಿಸಿದ್ದೇನೆ ಎಂದಿದ್ದಾರೆ. ಇದು ನಕಲಿ ಆರ್ಡರ್ ತೋರಿಸಲಿ ಎಂದು ಪುಷ್ಪಾ ಸವಾಲು ಹಾಕಿದ್ದಾರೆ.

ಕೌಂಪೌಂಡ್ ಒಡೆಯುತ್ತಿದ್ದಂತೆ ವಿವಾದ ಜೋರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories