'ಭಾಗ್ಯಲಕ್ಷ್ಮಿ' ನಾಯಕಿ- ವಿಲನ್​ ಭರತನಾಟ್ಯ ಜುಗಲ್​ಬಂದಿ: ಅಭಿಮಾನಿಗಳ ಹೃದಯ ಗೆದ್ದ ನಟಿಯರು

Published : Sep 12, 2025, 08:15 PM IST

ಭಾಗ್ಯಲಕ್ಷ್ಮಿ ಧಾರಾವಾಹಿಯ ನಟಿಯರಾದ ಸುಷ್ಮಾ ಕೆ. ರಾವ್ ಮತ್ತು ಭವ್ಯಶ್ರೀ ಅವರು ಭರತನಾಟ್ಯ ಪ್ರದರ್ಶಿಸಿದ್ದಾರೆ. ಸುಷ್ಮಾ ಮತ್ತು ಭವ್ಯಶ್ರೀ ಇಬ್ಬರೂ ಶಾಸ್ತ್ರೀಯ ನೃತ್ಯಗಾರರು. ಇವರ ನೃತ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV
17
ಭಾಗ್ಯಳಿಗೆ ಒಲಿದ ಅದೃಷ್ಟ

ಸದ್ಯ ಭಾಗ್ಯಲಕ್ಷ್ಮಿಯ ಭಾಗ್ಯ ಖುಲಾಯಿಸಿದೆ. ಪತಿ ತಾಂಡವ್​ ಎದುರೇ ಎತ್ತರ ಎತ್ತರ ಬೆಳೆಯುತ್ತಿದ್ದಾಳೆ ಭಾಗ್ಯ. ಹೊಟ್ಟೆ ಉರಿದುಕೊಂಡು ಸಾಯುತ್ತಿದ್ದಾನೆ ತಾಂಡವ್​. ಆದಿಯ ಮನಸ್ಸನ್ನು ಕದ್ದು ಗೆದ್ದಿದ್ದಾಳೆ ಭಾಗ್ಯ. ಇನ್ನೇನು ಇಬ್ಬರಿಗೂ ಲವ್​ ಶುರುವಾಗುವುದೊಂದೇ ಬಾಕಿ ಇದೆ. ಅದಕ್ಕೆ ಕುಸುಮತ್ತೆ ಇದ್ದಾಳಲ್ಲ.

27
ತಪ್ಪಲಿಲ್ಲ ವಿಲನ್​ಗಳ ಕಾಟ

ಇದರ ಹೊರತಾಗಿಯೂ ಭಾಗ್ಯಳ ಲೈಫ್​ನಲ್ಲಿ ಇನ್ನೂ ವಿಲನ್​ಗಳ ಕಾಟ ತಪ್ಪಲಿಲ್ಲ. ಕನ್ನಿಕಾ ಮತ್ತು ಕಿಶನ್​ ಅತ್ತೆ ತೊಂದರೆ ಕೊಡುತ್ತಲೇ ಇದ್ದಾರೆ. ಇದು ಸೀರಿಯಲ್​ ಸ್ಟೋರಿಯಾದ್ರೆ, ಇದೀಗ ಭಾಗ್ಯ ಅರ್ಥಾತ್​ ಸುಷ್ಮಾ ಕೆ. ರಾವ್​ ಮತ್ತು ಭವ್ಯಶ್ರೀ ಅವರು ಭರತನಾಟ್ಯದಲ್ಲಿ ಮೋಡಿ ಮಾಡಿದ್ದಾರೆ.

37
ಸುಷ್ಮಾ-ಭವ್ಯಶ್ರೀ ಅದ್ಭುತ ನೃತ್ಯ

ಸುಷ್ಮಾ ಕೆ. ರಾವ್​ ಹಾಗೂ ನೆಗೆಟಿವ್​ ರೋಲ್​ನಲ್ಲಿ ಕಾಣಿಸಿಕೊಳ್ತಿರೋ ಕಿಶನ್​ ಅತ್ತೆ ಉರ್ಫ್​ ಭವ್ಯಶ್ರೀ ರೈ ಇಬ್ಬರೂ ಶಾಸ್ತ್ರೀಯ ನೃತ್ಯಗಾರರು. ಸುಷ್ಮಾ ಅವರ ಭರತನಾಟ್ಯವನ್ನು ಇದಾಗಲೇ ಇದೇ ಸೀರಿಯಲ್​ನಲ್ಲಿ ವೀಕ್ಷಕರು ಕಣ್ತುಂಬಿಸಿಕೊಂಡಿದ್ದಾರೆ. ಇದೀಗ ಭವ್ಯಶ್ರೀ ರೈ ಅವರ ನೃತ್ಯ ಕೂಡ ಕಣ್ತುಂಬಿಸಿಕೊಳ್ಳುವ ಛಾನ್ಸ್ ಅನ್ನು ಈ ಇಬ್ಬರು ನಟಿಯರು ನೀಡಿದ್ದಾರೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸುಷ್ಮಾ ಮತ್ತು ಭವ್ಯಶ್ರೀ ಅವರು ಭರತನಾಟ್ಯದಲ್ಲಿ ಮೋಡಿ ಮಾಡಿದ್ದಾರೆ. ಇವರ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

47
ಕಂಪ್ಯೂಟರ್​ ಸೈನ್ಸ್​ ಪದವೀಧರೆ

ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ.

57
ಸುಷ್ಮಾ ರಾವ್​ ಕುರಿತು

ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.

67
ನೆಗೆಟಿವ್​ ರೋಲ್​ನಲ್ಲಿ ಭವ್ಯಶ್ರೀ

ನೆಗೆಟಿವ್​ ರೋಲ್​ನಲ್ಲಿ ಕಾಣಿಸಿಕೊಳ್ತಿರೋ ಭವ್ಯಶ್ರೀ ರೈ ಕುರಿತು ಹೇಳುವುದಾದರೆ, ಇವರು ಕನ್ನಡ ಚಿತ್ರರಂಗ ಮತ್ತು ಕಿರುತೆರಯಲ್ಲಿ ಸಕ್ರಿಯವಾಗಿರುವ ನಟಿ. ಮಂಗಳೂರು ಮೂಲದ ಇವರು ಒಬ್ಬ ನಟಿಯಾಗಿ ಮಾತ್ರವಲ್ಲದೇ ಶಾಸ್ತ್ರೀಯ ನೃತ್ಯಗಾರ್ತಿಯಾಗಿ ಕೂಡ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. 1992 ರಲ್ಲಿ ತೆರೆಕಂಡ ವಿಷ್ಣುವರ್ಧನ್‌ರ `ರಾಜಾಧಿರಾಜ' ಚಿತ್ರದಿಂದ ಬೆಳಕಿಗೆ ಬಂದ ಇವರು ನಂತರ ಶಿವರಾಜಕುಮಾರ್ `ಮುತ್ತಣ್ಣ' ಚಿತ್ರದಲ್ಲಿ ನಟಿಸಿದರು.

77
ಭವ್ಯಶ್ರೀ ರೈ ಕುರಿತು...

1992-2006 ರ ವರೆಗೆ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾಗಿದ್ದ ಇವರು ಕೆಲವು ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದರು. 2010 ಎಪ್ರಿಲ್ 26 ರಂದು ತಮ್ಮ ಸಹನಟ ಮತ್ತು ದೂರದ ಸಂಬಂಧಿ ಸುರೇಶ್ ರೈ ಅವರೊಂದಿಗೆ ಮಂಗಳೂರಿನ ಕಟೀಲು ಕ್ಷೇತ್ರದಲ್ಲಿ ಸರಳವಾಗಿ ಮದುವೆಯಾದರು. ಈ ಜೋಡಿ ಕೆಲವು ಚಿತ್ರಗಳಲ್ಲಿ ಮತ್ತು `ಕುಂಕುಮ ಭಾಗ್ಯ' ಮುಂತಾದ ಧಾರಾವಾಹಿಗಳಲ್ಲಿ ಒಟ್ಟಾಗಿ ನಟಿಸಿತ್ತು.

Read more Photos on
click me!

Recommended Stories