ರಿಯಾಲಿಟಿ ಶೋ ಬಿಗ್ ಬಾಸ್‌ನ ಸ್ಪರ್ಧಿ ತಾನ್ಯಾ ಮಿತ್ತಲ್ ಇತ್ತೀಚಿನ ದಿನಗಳಲ್ಲಿ ತಾನು ಐಷಾರಾಮಿ ಬಂಗಲೆಯರಲ್ಲಿ ವಾಸವಿದ್ದು, ಅರಮನೆಯಂತಿದೆ ಎನ್ನುತ್ತಾ ಪ್ರತಿದಿನ ತನ್ನ ಶ್ರೀಮಂತಿಕೆಯನ್ನು ಹೇಳಿಕೊಳ್ಳುತ್ತಿದ್ದರು, ಆದರೆ ಇದೀಗ ಅವರ ನಿಜವಾದ ಮನೆಯ ಫೋಟೊ ವೈರಲ್ ಆಗಿದೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ (Bigg Boss Hindi), ತಾನ್ಯಾ ಮಿತ್ತಲ್ ಅವರ ಸಂಪತ್ತಿನ ಕಥೆಗಳು ಎಂದಿಗೂ ಮುಗಿಯುವುದಿಲ್ಲ. ಕೆಲವೊಮ್ಮೆ ಅವರು ತಮ್ಮ ಮನೆಯನ್ನು ಐಷಾರಾಮಿ ಅರಮನೆಗೆ ಹೋಲಿಸುವುದನ್ನು ಕಾಣಬಹುದು ಮತ್ತು ಕೆಲವೊಮ್ಮೆ ಅವರು ತಮ್ಮ ಐಷಾರಾಮಿ ಜೀವನದ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ
28
ತಾನ್ಯಾ ಮಿತ್ತಲ್
ಇತ್ತೀಚೆಗೆ, ಕಾರ್ಯಕ್ರಮದ ಒಂದು ಎಪಿಸೋಡಲ್ಲಿ, ತಾನ್ಯಾ (Tanya Mittal)ತನ್ನ ಮನೆಯನ್ನು 5-7 ಸ್ಟಾರ್ ಹೋಟೆಲ್ ಮತ್ತು ಅರಮನೆಗೆ ಹೋಲಿಸಿದ್ದಳು. ತನ್ನ ಮನೆ ತುಂಬಾ ದೊಡ್ಡದಾಗಿದ್ದು, ಅರಮನೆಗಳು ಮತ್ತು ಐಷಾರಾಮಿ ಹೋಟೆಲ್‌ಗಳು ಸಹ ಇದಕ್ಕೆ ಹೋಲಿಸಿದರೆ ಕಳಪೆಯಾಗಿವೆ ಎಂದು ಹೇಳಿದ್ದರು.
38
ಐಷಾರಾಮಿ ಬಂಗಲೆ
ತಾನ್ಯಾಳ ಈ ಹೇಳಿಕೆ ಇಂಟರ್ನೆಟ್ಟಲ್ಲಿ ಬಿರುಗಾಳಿಯನ್ನು ಸೃಷ್ಟಿಸಿತು. ಗ್ವಾಲಿಯರ್‌ನ ಪ್ರತಿಯೊಬ್ಬ ಇನ್ಫ್ಯೂಯೆನ್ಸರ್ ಕೂಡ ತಾನ್ಯಾಳ ಮನೆಯನ್ನು ತನಿಖೆ ಮಾಡಲು ಹೊರಟರು. ನಂತರಸೋಶಿಯಲ್ ಮೀಡಿಯಾದಲ್ಲಿ, ಪಾಕಿಸ್ತಾನದಿಂದ ಹಿಡಿದು ಗ್ವಾಲಿಯರ್ ವರೆಗೂ ಹಲವೆಡೆ ಇರುವ ಐಷಾರಾಮಿ ಬಂಗಲೆಗಳನ್ನು ತಾನ್ಯಾ ಮಿತ್ತಲ್ ಮನೆ ಎಂದು ವಿಡೀಯೋ ವೈರಲ್ ಮಾಡಲಾಗಿತ್ತು, ಈ ಫೇಕ್ ವಿಡೀಯೋಗಳ ಮಧ್ಯೆ ಇದೀಗ, ತಾನ್ಯಾ ಮಿತ್ತಲ್ ಅವರ ನಿಜವಾದ ಮನೆಯ ಫೋಟೋ ಕೂಡ ವೈರಲ್ ಆಗುತ್ತಿದೆ.
ತಾನ್ಯಾ ಮಿತ್ತಲ್ ತಮ್ಮ ಮನೆಯನ್ನು ಸ್ವರ್ಗ, ಐಷಾರಾಮಿ (Luxury Bunglow) ಮತ್ತು ಸಾವಿರಾರು ಚದರ ಅಡಿಗಳಲ್ಲಿ ಹರಡಿರುವ ಮನೆ ಎಂದು ಬಣ್ಣಿಸಿದ್ದರೂ, ಈಗ ವೈರಲ್ ಆಗುತ್ತಿರುವ ನೈಜ ಚಿತ್ರವು ಬೇರೆಯದ್ದೇ ಚಿತ್ರಣ ನೀಡುತ್ತಿದೆ. ಹಾಗಿದ್ರೆ ತಾನ್ಯಾ ಹೇಳಿದ್ದೇಲ್ಲಾ ಸುಳ್ಳಾ?
58
ಅಡುಗೆಮನೆಯಲ್ಲಿಯೂ ಸಹ ಲಿಫ್ಟ್
ತನ್ನ ಮನೆಯ ಪ್ರತಿ ಮಹಡಿಯಲ್ಲಿ 5 ಸೇವಕರು ಮತ್ತು ಲೆಕ್ಕವಿಲ್ಲದಷ್ಟು ಡ್ರೈವರ್ ಗಳಿದ್ದಾರೆ ಎಂದು ತಾನ್ಯಾ ಹೇಳಿದ್ದರು. 2500 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಕೋಣೆಯನ್ನು ತನ್ನ ಬಟ್ಟೆಗಳನ್ನು ಇಡಲು ಮಾತ್ರ ಮಾಡಲಾಗಿದೆ, ಅವಳ ಅಡುಗೆಮನೆಯಲ್ಲಿಯೂ ಸಹ ಲಿಫ್ಟ್ ಇದೆ ಎಂದೂ ಸಹ ಹೇಳಿದ್ದರು.
68
ನೈಜ ಚಿತ್ರ ಬಯಲು
ತಾನ್ಯಾ ಹೇಳಿಕೆಯ ನಂತರ, ವೈರಲ್ ಆಗುತ್ತಿರುವ ಅವರ ಮನೆಯ ನೈಜ ಚಿತ್ರವು ಯಾವುದೇ ಐಷಾರಾಮಿ ಬಂಗಲೆಯಂತೆ ಕಾಣಿಸುತ್ತಿಲ್ಲ. ತಾನ್ಯಾ ಅವರ ಹಳೆಯ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಪರಿಶೀಲಿಸಿದರೂ, ಅವರು ಹೇಳಿದಂತೆ ಅದರಲ್ಲಿ ಐಷಾರಾಮಿ ಏನೂ ಕಾಣುವುದಿಲ್ಲ.
78
ಸಾಮಾನ್ಯ ಮನೆ
ಮನೆಯ ಗೋಡೆಗಳಿಂದ ಹಿಡಿದು ನೆಲಹಾಸು, ಪರದೆಗಳು, ವಾಲ್‌ಪೇಪರ್‌ಗಳು, ಸೋಫಾ, ಹಾಸಿಗೆ, ಮನೆಯ ಸಂಪೂರ್ಣ ಒಳಾಂಗಣ ಕೂಡ ಇಂದಿನ ಸಾಮಾನ್ಯ ಮನುಷ್ಯನ ಮನೆಯಲ್ಲಿ ಕಾಣುವಂತೆಯೇ ಕಾಣುತ್ತಿತ್ತು. ಫೋಟೋದಲ್ಲಿ ಕಾಣುವ ಯಾವುದನ್ನೂ ಸೂಪರ್ ಐಷಾರಾಮಿ ಎಂದು ಕರೆಯಲು ಸಾಧ್ಯವಿಲ್ಲ.
88
ವೈರಲ್ ಚಿತ್ರ
ಆ ಸಂಚಿಕೆಯಲ್ಲಿ ಅವರು ತಮ್ಮ ಮನೆ ಹಲವಾರು ಚದರ ಅಡಿಗಳಷ್ಟು ವಿಸ್ತಾರವಾಗಿದೆ ಎಂದು ಹೇಳಿದ್ದರು, ಆದರೆ ವೈರಲ್ (Viral photos) ಆಗಿರುವ ಚಿತ್ರದಲ್ಲಿ ಅವರ ಮನೆ ಕೇವಲ ಎರಡು ಅಂತಸ್ತಿನದ್ದಾಗಿದ್ದು, ಮನೆಯ ಕೆಳಗಿನ ಭಾಗವನ್ನು ಬಾಡಿಗೆಗೆ ನೀಡಲಾಗಿದೆ. ಈ ವೈರಲ್ ಚಿತ್ರಗಳ ನಂತರ, ಜನರು ಅವರ ಹೇಳಿಕೆಗಳನ್ನು ನೋಡಿ ಜನರು ನಗುತ್ತಾ, ಎಲ್ಲವೂ ಬರಿ ಓಳು ಎನ್ನುತ್ತಿದ್ದಾರೆ.