ಗುರುವಾರ ರಾತ್ರಿ ಕರಿಷ್ಮಾ ಕಪೂರ್ ಇನ್‌ಸ್ಟಾಗ್ರಾಮ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಅನ್ನು ನಡೆಸಿದರು. ಅದರಲ್ಲಿ ನೀವು ಮರು ಮದುವೆಗೆ ರೆಡಿ ಆಗಿರುವೀರಾ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದರು.
ಕರಿಷ್ಮಾ ಅವರನ್ನು 'ನೀವು ಮತ್ತೆ ಮದುವೆಯಾಗುತ್ತೀರಾ? ಎಂದು ಕೇಳಿದಾಗ, 'ಕರಿಷ್ಮಾ 'ಡಿಪೆಂಡ್ಸ್' ಎಂದು ಉತ್ತರಿಸಿದರು. ಕರಿಷ್ಮಾ ಕಪೂರ್ ಅವರ ಉತ್ತರ ಸ್ಪಷ್ಟವಾಗಿಲ್ಲದಿದ್ದರೂ, ಅವರು ಮರುಮದುವೆಯಾಗಲು ತೆರೆದಿರುವಂತೆ ತೋರುತ್ತಿದೆ.
ಕರಿಷ್ಮಾ ಕಪೂರ್ ಈ ಹಿಂದೆ 2003 ರಲ್ಲಿ ಉದ್ಯಮಿ ಸಂಜಯ್ ಕಪೂರ್ ಅವರನ್ನು ಮದುವೆಯಾಗಿದ್ದರು ಮತ್ತು ಈ ದಂಪತಿಗೆ ಸಮೈರಾ ಮತ್ತು ಕಿಯಾನ್ ಎಂಬ ಇಬ್ಬರು ಮಕ್ಕಳಿದ್ದರು.
ಆದಾಗ್ಯೂ, ದಂಪತಿಗಳು ಒಂದು ದಶಕದ ನಂತರ ವಿಚ್ಛೇದನ ಪಡೆದರು. ಅವರ ವಿಚ್ಛೇದನವನ್ನು 2016 ರಲ್ಲಿ ಅಂತಿಮಗೊಳಿಸಲಾಯಿತು. ಡಿವೋರ್ಸ್ ಒಮ್ಮತದದ್ದಾಗಿದ್ದರೂ, ಇಬ್ಬರೂ ಪರಸ್ಪರರ ವಿರುದ್ಧ ವಿವಿಧ ಹಕ್ಕುಗಳನ್ನು ಹಾಕಿದ್ದರಿಂದ ಪ್ರಕ್ರಿಯೆಗಳು ಧೀರ್ಘವಾಗಿತ್ತು.
ಕರಿಷ್ಮಾ ಅವರ ವಿಚ್ಛೇದನ ಪ್ರಕ್ರಿಯೆಯಲ್ಲಿ ಕರೀನಾ ಕಪೂರ್ ಹಿಂದೂಸ್ತಾನ್ ಟೈಮ್ಸ್‌ಗೆ 'ಇದು ಅವಳಿಗೆ ಭಯಾನಕ ಕ್ಷಣವಾಗಿದೆ ಮತ್ತು ಇದು ಸವಾಲಾಗಿದೆ' ಎಂದು ಹೇಳಿದರು. 'ಇದು ನಾನು ಎಂದಿಗೂ ಮಾತನಾಡದ ವಿಷಯ. ನಾನು ನನ್ನ ಸಹೋದರಿಯನ್ನು ಸಾಕಷ್ಟು ಪ್ರೋಟೆಕ್ಟ್ ಮಾಡುತ್ತೇನೆ. ನಾನು ಅವಳನ್ನು ತುಂಬಾ ಗೌರವಿಸುತ್ತೇನೆ ಮತ್ತು ಪ್ರಶಂಸಿಸುತ್ತೇನೆ. ಅದರ ಬಗ್ಗೆ ಏನನ್ನು ಪ್ರಕಟಿಸಲಾಗಿದೆ ಅಥವಾ ಅವರ ಬಗ್ಗೆ ಹೇಳಲಾಗಿದೆ, ಕರಿಷ್ಮಾ ಮತ್ತು ನಾನು ಅದರ ಬಗ್ಗೆ ಏನನ್ನೂ ಮಾತನಾಡಿಲ್ಲ ಮತ್ತು ನಾನು ಅದನ್ನು ಹಾಗೆಯೇ ಇರಿಸಿಕೊಳ್ಳಲು ಬಯಸುತ್ತೇನೆ' ಎಂದು ಕರೀನಾ ಹೇಳಿದ್ದರು.
ಸಂಜಯ್‌ನಿಂದ ವಿಚ್ಛೇದನ ಪಡೆದ ನಂತರ ಕರಿಷ್ಮಾ ತನ್ನ ವೃತ್ತಿ ಮತ್ತು ಮಕ್ಕಳ ಮೇಲೆ ಮಾತ್ರ ಗಮನ ಹರಿಸಿದ್ದಾರೆಳೆ. ಇತ್ತೀಚಿನ ವರ್ಷಗಳಲ್ಲಿ, ನಟಿ ಹಲವಾರು ರಿಯಾಲಿಟಿ ಶೋ ಮತ್ತು ಜಾಹೀರಾತುಗಳಲ್ಲಿ ಭಾಗವಹಿಸಿದ್ದಾರೆ. 2020 ರಲ್ಲಿ, ಅವರು ಮೆಂಟಲ್‌ಹುಡ್ ಚಿತ್ರದ ಮೂಲಕ ನಟಿಯಾಗಿ ಪುನರಾಗಮನ ಮಾಡಿದರು.
ಮತ್ತೊಂದೆಡೆ, ಸಂಜಯ್ ಏಪ್ರಿಲ್ 13, 2017 ರಂದು ತನ್ನ ದೀರ್ಘಕಾಲದ ಪ್ರೇಮಿಯಾದ ಪ್ರಿಯಾ ಸಚ್‌ದೇವ್ ಅವರನ್ನು ವಿವಾಹವಾದರು. 2018 ರಲ್ಲಿ, ದಂಪತಿಗಳು ಗಂಡು ಮಗುವನ್ನು ಸ್ವಾಗತಿಸಿದರು.
ಎರಡನೇ ಮದುವೆಯ ಪ್ರಶ್ನೆಯ ಹೊರತಾಗಿ, ಕರಿಷ್ಮಾರಿಗೆ ಅಭಿಮಾನಿಗಳು ರಣವೀರ್ ಮತ್ತು ರಣಬೀರ್ ನಡುವೆ ತನ್ನ ಫೇವರೇಟ್ ಆಯ್ಕೆ ಮಾಡಲು ಕೇಳಲಾಯಿತು. ಅಭಿಮಾನಿಗಳ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ ನಟಿ ಇಬ್ಬರನ್ನೂ ಆಯ್ಕೆ ಮಾಡಿಕೊಂಡರು
ರಣಧೀರ್ ಕಪೂರ್ ಅವರನ್ನು ಸೇರಿಸಿ ಬಬಿತಾ, ಕರೀನಾ ಕಪೂರ್, ಸೈಫ್ ಅಲಿ ಖಾನ್, ತೈಮೂರ್, ಜೆಹ್ ಮತ್ತು ಅವರ ಸ್ವಂತ ಮಕ್ಕಳನ್ನು ತನ್ನ ಫೇವರೇಟ್ ಜನರು ಎಂದು ಕರಿಷ್ಮಾ ಹೆಸರಿಸಿದರು.